26/11 ಮುಂಬೈ ದಾಳಿ ಯೋಜನೆ ರೂಪಿಸಿದ್ದೇ ಐಎಸ್ಐ ಮಾಜಿ ಅಧಿಕಾರಿಗಳು, ಉಗ್ರರ ಚಟುವಟಿಕೆ ಗೊತ್ತಿದ್ದರೂ ಪಾಕ್ ಜಾಣ ಕುರುಡು ಸಾಬೀತು

ಡಿಜಿಟಲ್ ಕನ್ನಡ ಟೀಮ್

ಪಾಕಿಸ್ತಾನ ಗುಪ್ತಚರ ದಳ, ಇಂಟರ್ ಸರ್ವಿಸ್ ಇಂಟಲಿಜೆನ್ಸ್ (ಐಎಸ್ಐ)ನ ನಿವೃತ್ತ ಅಧಿಕಾರಿಗಳು ಉಗ್ರರ ಕೃತ್ಯದಲ್ಲಿ ಭಾಗಿದ್ದ ಮಹತ್ವದ ಅಂಶ ಈಗ ಬೆಳಕಿಗೆ ಬಂದಿದೆ. ‘2008 ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ಯೋಜನೆ ರೂಪಿಸಿದ್ದೇ ನಮ್ಮವರು ಎಂದು ಐಎಸ್ಐ ಮಾಜಿ ಮುಖ್ಯಸ್ಥ ಶುಜಾ ಪಾಷ ಒಪ್ಪಿಕೊಂಡಿದ್ದರು’ ಎಂಬ ಅಂಶವನ್ನು ಬಹಿರಂಗಗೊಳಿಸಿದ್ದಾರೆ ಪಾಕ್ ನ ಮಾಜಿ ಅಮೆರಿಕ ರಾಯಭಾರಿ ಹುಸೇನ್ ಹಖ್ಖಾನಿ. ಆ ಮೂಲಕ ಪಾಕಿಸ್ತಾನದ ಗುಪ್ತಚರ ದಳ ಉಗ್ರರ ಸಂಪರ್ಕದಲ್ಲಿರುವುದು ಮತ್ತೆ ಸಾಬೀತಾಗಿದೆ.

India vs Pakistan: Why Can’t We Just Be Friends? ಎಂಬ ಪುಸ್ತಕ ರಚಿಸುತ್ತಿರುವ ಹುಸೇನ್ ಹಖ್ಖಾನಿ, ಈ ಅಂಶವನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ. ಅಕ್ಟೋಬರ್ ನಲ್ಲಿ ಮುಂಬೈ ದಾಳಿ ನಡೆದಿತ್ತು. ಅದೇ ವರ್ಷ ಡಿಸೆಂಬರ್ ನಲ್ಲಿ ಶುಜಾ ಪಾಷ ಅಮೆರಿಕಕ್ಕೆ ಆಗಮಿಸಿದ್ದರು. ಆ ಸಂದರ್ಭದಲ್ಲಿ, 26/11 ದಾಳಿಯ ಯೋಜನೆ ರೂಪಿಸಿದ್ದವರು ‘ನಮ್ಮರೇ ಆಗಿದ್ದರು’ ಆದರೆ ಅದು ‘ನಮ್ಮ ಕಾರ್ಯಾಚರಣೆಯಾಗಿರಲಿಲ್ಲ’ ಎಂದು ಪಾಷ ತಿಳಿಸಿದ್ದಾಗಿ ಹುಸೇನ್ವಿ ವಿವರಿಸಿದ್ದಾರೆ.

‘ಮುಂಬೈ ದಾಳಿಗೆ ಯೋಜನೆ ರೂಪಿಸುವಲ್ಲಿ ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿಗಳು ಮತ್ತು ಗುಪ್ತಚರ ಅಧಿಕಾರಿಗಳು ಸಹಾಯ ಮಾಡಿದ್ದರು ಎಂದು ಪಾಷ ಭೇಟಿಯ ವೇಳೆ ತಿಳಿಸಿದ್ದರು. ಈ ದಾಳಿಯ ಕುರಿತಂತೆ ಅಮೆರಿಕದ ಎನ್ಎಸ್ಎ ಜತೆಗೆ ಭಾರತವೂ ಸಾಕಷ್ಟು ದಾಖಲೆಗಳನ್ನು ನೀಡಿತ್ತಾದರೂ ಪಾಕಿಸ್ತಾನ ಈ ಬಗ್ಗೆ ಯಾವುದೇ ತನಿಖೆ ನಡೆಸಲಿಲ್ಲ ಎಂದು ಪಾಕ್ ಮೂಲಗಳು ತಿಳಿಸಿದ್ದವು’ ಎಂದು ಹುಸೇನ್ ದ ಹಿಂದೂ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

Leave a Reply