ನೆಲದಲ್ಲಿ ಹೂತು ಹೋಗಿದೆಯಂತೆ ಸಿದ್ರಾಮಯ್ಯ ಸರ್ಕಾರ, ಮಲ್ಯ ಗಡಿಪಾರಿಗೆ ಬ್ರಿಟನ್ ನಕಾರ, ಉತ್ತರಾಖಂಡದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ

Former CM Jagadish Shettar, Former DCM R.Ashok, MLA’s Vijay Kamar, Dr.Ashwath Narayan, and others releasing book during the Shettar press conference at a private Hotel in Bengaluru on Wednesday.

ಡಿಜಿಟಲ್ ಕನ್ನಡ ಟೀಮ್

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಚಕ್ರ ಮುನ್ನಡೆಯಲಾಗದಂತೆ ನೆಲದಲ್ಲಿ ಹೂತು ಹೋಗಿದೆ. ಈ ಸರಕಾರ ಯಾಕಾದರೂ ಅಸ್ತಿತ್ವಕ್ಕೆ ಬಂತೋ ಎಂದು ಜನ ತಮ್ಮ ಹಣೆಬರಹವನ್ನು ಹಳಿದುಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ಎರಡು ವರ್ಷ ಕುಂಠಿತಗೊಂಡಿದ್ದ ಸರಕಾರ ಮೂರನೇ ವರ್ಷ ಮುಳುಗಿ ಹೋಗಿದೆ. ಜನರ ನಿರೀಕ್ಷೆ ಈಡೇರಿಸುವುದಿರಲಿ ಅದರ ಹತ್ತಿರ ಸುಳಿಯುವುದಕ್ಕೂ ಪ್ರಯತ್ನ ಪಡಲಿಲ್ಲ. ಬರೀ ಭ್ರಷ್ಟಾಚಾರ, ಸ್ವಜನಪಕ್ಷಪಾತ ವಿಜೃಂಭಿಸುತ್ತಿದೆ ಎಂದು ಸಿದ್ದರಾಮಯ್ಯನವರ ಸರಕಾರಕ್ಕೆ ಮೂರು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ‘ಇದು ಜನಪರ ಸರ್ಕಾರವಲ್ಲ, ಜನ ವಿರೋಧಿ ಸರಕಾರ’ ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಇದು ಬರೀ ಕರ್ಮಕಾಂಡಗಳ ಸರಕಾರ. ಅವರ ಸಂಪುಟದಲ್ಲಿ ಭ್ರಷ್ಟರೇ ತುಂಬಿದ್ದಾರೆ. ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದ್ದಾರೆ. ಅರ್ಕಾವತಿ ಡಿನೋಟಿಫಿಕೇಷನ್, ವಾಚ್ ಉಡುಗೊರೆ, ಪುತ್ರನಿಗೆ ಡಯಾಗ್ನಾಸ್ಟಿಕ್ ಸಂಸ್ಥೆ ಸ್ಥಾಪನೆ ಗುತ್ತಿಗೆ, ಬಹುಕೋಟಿ ಜಮೀನು ಮಂಜೂರು ಮತ್ತಿತರ ಹಗರಣಗಳಲ್ಲಿ ಸಿಕ್ಕಿರುವ ಸಿದ್ದರಾಮಯ್ಯ ಮುಂದೊದಗಬಹುದಾದ ಗಂಡಾಂತರ ತಪ್ಪಿಸಿಕೊಳ್ಳಲು, ಲೋಕಾಯುಕ್ತ ಸಂಸ್ಥೆ ಪತನಗೊಳಿಸಿ,  ತಮ್ಮ ಕಣ್ಗಾವಲಿನಲ್ಲಿ ಕೆಲಸ ಮಾಡುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿ ಬಚಾವಾಗಲು ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.

ಈ ಸರ್ಕಾರಕ್ಕೆ ದೂರದೃಷ್ಟಿ ಇಲ್ಲ. ಹೀಗಾಗಿ ಯಾವ ಇಲಾಖೆಯಲ್ಲೂ ದೊಡ್ಡ ಮಟ್ಟದ ಪ್ರಗತಿ ಕಾಣುತ್ತಿಲ್ಲ. ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ 67 ಸಾವಿರ ಕೋಟಿ ರುಪಾಯಿ ಸಾಲ ಮಾಡಿ ರಾಜ್ಯವನ್ನು ದಿವಾಳಿಯಂಚಿಗೆ ತಂದು ನಿಲ್ಲಿಸಿದ್ದಾರೆ. ಈ ಸರಕಾರ ವೈಫಲ್ಯಗಳು ಮೂಟೆ ಎಂದರು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಡಾ. ಅಶ್ವತ್, ವಿಜಯಕುಮಾರ್, ಸುನಿಲ್ ಕುಮಾರ್ ಜತೆಯಲ್ಲಿದ್ದರು.

ಮಲ್ಯ ಗಡಿಪಾರು ಸಾಧ್ಯವಿಲ್ಲ ಎಂದ ಬ್ರಿಟನ್

ಉದ್ದೇಶಿತ ಸುಸ್ಥಿದಾರ ಹಣೆಪಟ್ಟಿಯೊಂದಿಗೆ ತಲೆಮರಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಬ್ರಿಟನ್ ತಿಳಿಸಿದೆ. ಯಾರನ್ನೇ ಆಗಲಿ ದೇಶದಿಂದ ಗಡಿಪಾರು ಮಾಡಲು ಕೇವಲ ಅಸಿಂಧುವಾಗಿರುವ ಪಾಸ್ ಪೋರ್ಟ್ ಒಂದೇ ಕಾರಣ ಸಾಕಾಗುವುದಿಲ್ಲ ಎಂದು ಬ್ರಿಟನ್ ಭಾರತಕ್ಕೆ ತಿಳಿಸಿದೆ. ಇದರೊಂದಿಗೆ ಬ್ಯಾಂಕ್ ಗಳು ಈತನಿಗೆ ನೀಡಿರುವ ಸುಮಾರು ₹ 9 ಸಾವಿರ ಸಾಲವನ್ನು ವಸೂಲಿ ಮಾಡಲು ಕಷ್ಟವಾಗಲಿದೆ. ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಪ್ರಕರಣದ ವಿಚಾರಣೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ ನಂತರ ಬ್ರಿಟನ್ ಗೆ ನಾವು ಮಲ್ಯರನ್ನು ಗಡಿಪಾರು ಮಾಡುವಂತೆ ಆಗ್ರಹಿಸುವುದು ನಮ್ಮ ಮುಂದಿರುವ ಮತ್ತೊಂದು ದಾರಿ ಎಂದು ತಿಳಿಸಿದ್ದಾರೆ.

ಕಾಲ್ ಡ್ರಾಪ್ ಗೆ ಕಂಪನಿ ನಷ್ಟ ತುಂಬಬೇಕಿಲ್ಲ: ಸುಪ್ರೀಂ

ಕಾಲ್ ಡ್ರಾಪ್ ಆದರೆ ಟೆಲಿಕಾಂ ಕಂಪನಿಗಳು ಗ್ರಾಹಕರ ನಷ್ಟ ತುಂಬಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ. ಇದರಿಂದ ಟೆಲಿಕಾಂ ಸಂಸ್ಥೆಗಳು ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್ ಎಐ) ಗ್ರಾಹಕರು ಕರೆ ಮಾಡಿದಾಗ ಮಧ್ಯದಲ್ಲೇ ಸಂಪರ್ಕ ಕಡಿತವಾದರೆ, ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಪರಿಹಾರ ನೀಡಬೇಕು ಎಂದು ಘೋಷಿಸಿತ್ತು. ಅಲ್ಲದೆ ಪ್ರತಿ ಕರೆ ಕಟ್ ಆದಾಗಲೂ ಗ್ರಾಹಕರಿಗೆ ₹ 1 ನೀಡಬೇಕು. ಇಲ್ಲದಿದ್ದರೆ ದಿನಕ್ಕೆ  ₹ 3 ದಂಡ ಎಂದು ಹೇಳಿತ್ತು.

ಹಾವೇರಿಯಲ್ಲಿ ಮೊದಲು ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆ

ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮೊದಲು ಸೋರಿಕೆ ಆದದ್ದು ಹಾವೇರಿ ಜಿಲ್ಲೆಯ ಹಾನಗಲ್ ಉಪಖಜಾನೆಯಲ್ಲಿ. ಇಲ್ಲಿನ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಪರುಶರಾಮ ಅಗಸಿಮಣಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ವ್ಯಕ್ತಿ ಎಂದು ಸಿಐಡಿ ಡಿಜಿಪಿ ಕಿಶೋರ್ ಚಂದ್ರ ತಿಳಿಸಿದ್ದಾರೆ.

ಸಂತೋಷ್ ಮುಚ್ಚಿದ ಲಕೋಟೆಯನ್ನು ನಾಜೂಕಾಗಿ ತೆರೆದು, ಪ್ರಶ್ನೆಪತ್ರಿಕೆಯನ್ನು ಫೋಟೋ ಕಾಪಿ ಮಾಡಿ, ಮತ್ತೆ ಲಕೋಟೆಯನ್ನು ಸೀಲ್ ಮಾಡಿ ಇಡುತ್ತಿದ್ದ. ಹೀಗೆ ಕದ್ದ ಪ್ರಶ್ನೆಪತ್ರಿಕೆಯನ್ನು ಕಿಂಗ್ ಪಿನ್ ಶಿವಕುಮಾರ್ ಗೆ ದಾಟಿಸುತ್ತಿದ್ದ ಎಂದು ಶಿವಕುಮಾರಯ್ಯನ ಸಹೋದರನ ಮಗ ಕಿರಣ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಕಿರಣ್ ಗೂ ಹೆಣ್ಣುಮಕ್ಕಳ ಚಟವಿದ್ದು, ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ರಶ್ನೆ ಪತ್ರಿಕೆ ಲೀಕ್ ಮಾಡುತ್ತಿದ್ದ ಎಂದು ಅವರು ವಿವರಿಸಿದರು.

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು..

  • ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರ ಪೆರೋಲ್ ಅವಧಿಯನ್ನು ಸುಪ್ರೀಂ ಕೋರ್ಟ್ 11ರ ವರೆಗೂ ವಿಸ್ತರಿಸಿದೆ. ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ)ಗೆ ₹ 200 ಕೋಟಿ ಠೇವಣಿ ಇಡಲು ಕೋರ್ಟ್ ಪೆರೋಲ್ ಅವಧಿ ವಿಸ್ತರಿಸಿದೆ.
  • ಕರ್ನಾಟಕದ ಹಾಕಿ ಆಟಗಾರ ವಿ.ಆರ್ ರಘುನಾಥ್ ಮತ್ತು ಭಾರತ ಮಹಿಳಾ ಹಾಕಿ ತಂಡದ ನಾಯರಿ ರಿತು ರಾಣಿ ಅವರ ಹೆಸರನ್ನು ಹಾಕಿ ಇಂಡಿಯು ಬುಧವಾರ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ.

Leave a Reply