ಹಾಜಿ ಅಲಿ ದರ್ಗಾಕ್ಕೆ ತೃಪ್ತಿ ದೇಸಾಯಿ ಪ್ರವೇಶ, ಇತರ ಮಹಿಳೆಯರಿಗೆ ಅವಕಾಶ ನೀಡಲು 15 ದಿನ ಗಡವು

ಡಿಜಿಟಲ್ ಕನ್ನಡ ಟೀಮ್

ಭೂಮಾತಾ ಬ್ರಿಗೆಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಗುರುವಾರ ಹಾಜಿ ಅಲಿ ದರ್ಗಾ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದರು. 15 ದಿನದೊಳಗೆ ಮಹಿಳೆಯರಿಗೂ ಪ್ರವೇಶ ಅವಕಾಶ ನೀಡುವಂತೆ ದರ್ಗಾ ಟ್ರಸ್ಟಿಗಳಿಗೆ ಗಡವು ನೀಡಿದ್ದಾರೆ.

ಏಪ್ರಿಲ್ 28 ರಂದು ಬೆಂಬಲಿಗರೊಂದಿಗೆ ತೃಪ್ತಿ, ದರ್ಗಾ ಪ್ರವೇಶಿಸಲು ಯತ್ನಿಸಿದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಮೂವರು ಮಹಿಳೆಯರೊಂದಿಗೆ ಬೆಳಗ್ಗೆ 6 ಗಂಟೆಗೆ ಸರತಿಯಲ್ಲಿ ನಿಂತು ದರ್ಗಾ ಪ್ರವೇಶಿಸಿದರು. ತೃಪ್ತಿ ಅವರಿಗೆ ಒಳ ಕೋಣೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ದರ್ಗಾ ಪ್ರವೇಶಿಸುವ ಬಗ್ಗೆ ಬುಧವಾರವೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ.

ಶನಿಸಿಗ್ನಾಪುರ ದೇಗುಲಕ್ಕೂ ಮಹಿಳೆಯರ ಪ್ರವೇಶಕ್ಕೆ ಗಡವು ನೀಡಿ ಯಶಸ್ವಿಯಾಗಿದ್ದ ತೃಪ್ತಿ ದೇಸಾಯಿ ಅವರ ಮುಂದಿನ ಗುರಿ ಹಾಜಿ ಅಲಿ ದರ್ಗಾ ಆಗಿತ್ತು. ತೃಪ್ತಿ ಅವರ ಆಗ್ರಹಕ್ಕೆ ದರ್ಗಾ ಟ್ರಸ್ಟಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Leave a Reply