ಕೇರಳದಲ್ಲಿ ಸೌರ ಬೋಟು, ಪರಿಸರ ಕಾಪಿಡುವಲ್ಲಿ ಇವರ ಪ್ರಯತ್ನ ಗ್ರೇಟು!

ಡಿಜಿಟಲ್ ಕನ್ನಡ ಟೀಮ್

ಕೇರಳವು ಸೋಮಾಲಿಯಾ ಹೌದೋ ಅಲ್ಲವೋ ಎಂಬ ಚರ್ಚೆಯಿಂದ ಈಗ ಮುಂದಕ್ ಹೋಗೋಣ. ಆ ರಾಜ್ಯದಲ್ಲಾಗುತ್ತಿರುವ ಕೆಲವು ಒಳ್ಳೆಯ ಪ್ರಯತ್ನಗಳನ್ನು ಗಮನಿಸಬೇಕಾದ ಸಮಯವಿದು. ಜುಲೈನಲ್ಲಿ ದೇವರ ನಾಡಿನ ಕೊಚ್ಚಿ ಕಡಲ ತೀರದಲ್ಲಿ ಇದೇ ಜುಲೈನಿಂದ ಸೋಲಾರ್ ಬೋಟುಗಳು ನೀರಿಗಿಳಿಯಲಿವೆ.

ಕೇರಳ ವಾಟರ್ ಟ್ರಾನ್ಸ್ ಪೋರ್ಟ್ ಡಿಪಾರ್ಟ್ ಮೆಂಟ್ (ಕೆ ಎಸ್ ಡಬ್ಲ್ಯು ಟಿ ಡಿ) ಸಹಯೋಗದಲ್ಲಿ ಆಗಿರುವ ಕಾರ್ಯ ಇದು. ಎರಡು ವರ್ಷಗಳ ಸಮಯ ತೆಗೆದುಕೊಂಡು ನವಾಲ್ಟ್ ಸೋಲಾರ್ ಅಂಡ್ ಎಲೆಕ್ಟ್ರಿಕ್ ಕಂಪನಿ ಎಂಬ ನವೋದ್ದಿಮೆಯೊಂದು ಪ್ರಾಯೋಗಿಕ ಸೋಲಾರ್ ಬೋಟ್ ಅನ್ನು ಯಶಸ್ವಿಯಾಗಿಸಿ ತೋರಿಸಿದೆ. ಫ್ರಾನ್ಸ್ ನ ಕಂಪನಿ ಆಲ್ಟೆನ್ ಮತ್ತು ಭಾರತದ ನವಗತಿ ಸೇರಿಕೊಂಡು ಸೋಲಾರ್ ಬೋಟ್ ನಿರ್ಮಿಸಿವೆ.

ಕೆಲ ಪರಿಕರಗಳನ್ನು ಫ್ರೆಂಚ್ ಕಂಪನಿ ಅಭಿವೃದ್ಧಿಗೊಳಿಸಿದ್ದರೆ, ಇಲ್ಲಿ ಅದರ ನಿರ್ಮಾಣದ ಹೊಣೆಯನ್ನು ನವೋದ್ದಿಮೆಯಾದ ನವಗತಿ ಹೊತ್ತುಕೊಂಡಿದೆ. ಡಿಸೆಲ್ ಬೋಟುಗಳ ಬದಲಾಗಿ ಸೋಲಾರ್ ಬೋಟ್ ಬಳಸಿದರೆ ಮಾಲಿನ್ಯ ತಗ್ಗುತ್ತದೆ. ನವೀಕೃತ ಇಂಧನಮೂಲ ಬಳಕೆಗೆ ಇದೊಂದು ಮುನ್ನುಡಿ. ಪ್ರಯಾಣಿಕರಿಗೆ ಸಹ ಶಬ್ದದ ಕಿರಿಕಿರಿ ಇರದು. ಡಿಸೆಲ್ ಎಂಜಿನ್ ಗೆ ಹೋಲಿಸಿದರೆ ಕುಲುಕಾಟವೂ ಇರುವುದಿಲ್ಲ.

ಆದರೆ ಸೋಲಾರ್ ಬೋಟುಗಳ ಆರಂಭಿಕ ಬೆಲೆ ಡಿಸೆಲ್ ಬೋಟುಗಳಿಗೆ ಹೋಲಿಸಿದರೆ ಸ್ವಲ್ಪ ದುಬಾರಿ. ಡಿಸೆಲ್ ಬೋಟ್ ಒಂದಕ್ಕೆ 1.5 ಕೋಟಿ ರುಪಾಯಿಗಳ ಬೆಲೆಯಾದರೆ, ಇಂಥದೇ ಸೋಲಾರ್ ಬೋಟ್ ವೆಚ್ಚ2.2 ಕೋಟಿ ರುಪಾಯಿಗಳು. ಆದರೆ, 2 ವರ್ಷಗಳ ಅವಧಿಯಲ್ಲಿ ಈ ವೆಚ್ಚ ತುಂಬಿಹೋಗುತ್ತದೆ. ಏಕೆಂದರೆ ಇಲ್ಲಿ ಡಿಸೆಲ್ ಗಾಗಿ ವ್ಯಯಿಸುವುದು ಬೇಕಿಲ್ಲ. ಉಳಿದಂತೆ, ಎಲ್ಲ ಬೋಟುಗಳಂತೆ ಇದರದ್ದೂ ಬಾಳಿಕೆ 20 ವರ್ಷಗಳ ಅವಧಿಯದ್ದು. ಮುನ್ನಾರ್, ತೇಕ್ಕಡಿ, ಅಳೆಪ್ಪಿಯಂಥ ಪ್ರವಾಸಿ ತಾಣಗಳಲ್ಲಿ ಹಾಳೆತಟ್ಟೆ, ಅಡಿಕೆಹಾಳೆಯದ್ದೇ ಪ್ಯಾಕಿಂಗ್, ಬಟ್ಟೆ ಕವರುಗಳು ಇಂಥ ಆಪ್ತ ದೃಶ್ಯಗಳೇ ಕಾಣುತ್ತವೆ.

ಬೋಟ್ ವಿಷಯದಲ್ಲಿ ಸಹ ಪರಿಸರಪೂರಕ ಪ್ರಯತ್ನಕ್ಕೆ ಇಳಿದಿರುವ ಕೇರಳಕ್ಕೆ ಶುಭವಾಗಲಿ.

1 COMMENT

  1. Marvelous.It is a good skills of pollution free. Implementation of solar roofs in railway station platforms is economy installation and environmental protection. Pl try to impliment in one platform and study. GOOD LUCK

Leave a Reply