ಚಾಚಿ 420 ಬಾಲನಟಿ ಈಗ ದಂಗಲ್ ಕುಸ್ತಿಪಟು!

ಡಿಜಿಟಲ್ ಕನ್ನಡ ಟೀಮ್

ಚಲನಚಿತ್ರಗಳಲ್ಲಿ ಬೇಬಿ, ಮಾಸ್ಟರ್ ಗಳಾಗಿ ನಟಿಸುವ ಚಿಣ್ಣರು ದೊಡ್ಡವರಾಗಿ ಏನಾಗುತ್ತಾರೆ ಎಂಬುದು ನಮ್ಮಲ್ಲಿ ಯಾವತ್ತೂ ಕುತೂಹಲಕ್ಕೆ ಕಾರಣವಾಗುವ ಅಂಶ.

ಚಾಚಿ 420 ಸಿನಿಮಾ ಗೊತ್ತಲ್ಲ? ವಿಚ್ಛೇದನ ಕೇಳಿ ಬೇರಾದ ಹೆಂಡತಿಯ ಬಳಿ ಇರುವ ತನ್ನ ಮಗಳನ್ನು ಬಿಡಲಾಗದೇ, ಕಮಲ ಹಾಸನ್, ಅಜ್ಜಿ ವೇಷದಲ್ಲಿ ಆ ಮನೆಯಲ್ಲಿ ಸೇವಕಿಯಂತೆ ಸೇರಿಕೊಳ್ಳುವ ಕಾಮಿಡಿ ಪಡಿಪಾಟಲು ನೋಡೋದಕ್ಕೆ ಚೆಂದ. ಅದರಲ್ಲಿ ಪುಟಾಣಿ ಮಗಳ ಪಾತ್ರ ಮಾಡಿ ಮನಗೆದ್ದಿದ್ದ ಸಾನಾ ಶೇಖ್, ಈಗ ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

ಮಹಾವೀರ್ ಸಿಂಗ್ ಪೊಗಟ್ ಎಂಬ ಕುಸ್ತಿಪಟು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕುಸ್ತಿಪಟುಗಳನ್ನಾಗಿ ರೂಪಿಸುವ, ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಜ್ಜುಗೊಳಿಸುವ
ನಿಜಕತೆಯನ್ನು ಹೊಂದಿದೆ ದಂಗಲ್ ಚಿತ್ರ. ಮಹಾವೀರ್ ಪಾತ್ರದಲ್ಲಿ ಆಮೀರ್ ಖಾನ್ ಅಭಿನಯಿಸುತ್ತಿದ್ದಾರೆ. ಮಹಿಳಾ ಕುಸ್ತಿಪಟುಗಳಾದ ಗೀತಾ, ಬಬಿತಾರ ಪಾತ್ರಗಳ ಪೈಕಿ ಒಂದರ ಭೂಮಿಕೆ ನಿಭಾಯಿಸಲಿದ್ದಾರಂತೆ ಸಾನಾ ಶೇಖ್.

ಆಮೀರ್ ಚಿತ್ರ ಅಂದ್ರೆ ಅದರಲ್ಲಿ ಕೇವಲ ಗ್ಲಾಮರ್ ಬಲ ಇದ್ದರಾಗಲಿಲ್ಲ, ಕತೆಗೆ ತಕ್ಕಂತೆ ತಯಾರಾಗುವ ಅಭಿನಯ ಕೌಶಲ ಇರಬೇಕಲ್ವೇ? ಹಾಗೆಂದೇ ಸಾನಾ ಶೇಖ್ ಕುರಿತೊಂದ ಕುತೂಹಲ.

Leave a Reply