ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ, ಬಾಲಕೀಯರದ್ದೇ ಮೇಲುಗೈ, ಶೇ.100 ರಷ್ಟು ಅಂಕ ಪಡೆದ ಭದ್ರಾವತಿಯ ರಂಜನ್

SSLC 1st Rank Student Rajan, 2nd Rank Eashu from Mysore.

 

ಡಿಜಿಟಲ್ ಕನ್ನಡ ಟೀಮ್

ರಾಜ್ಯದ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇ. 79.16 ರಷ್ಟು ಉತ್ತೀರ್ಣರಾಗಿದ್ದು, ಬಾಲಕೀಯರೇ ಮೋಲುಗೈ ಸಾಧಿಸಿದ್ದಾರೆ. ಈ ಫಲಿತಾಂಶದಲ್ಲಿ ಬಾಲಕರು ಶೇ. 75.84 ರಷ್ಟು ಹಾಗೂ ಬಾಲಕೀಯರು ಶೇ. 82.64 ರಷ್ಟು ತೇರ್ಗಡೆಯಾಗಿದ್ದಾರೆ.

ಭದ್ರಾವತಿ ತಾಲೂಕಿನ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿ ರಂಜತ್.ಎಸ್, 625 ಅಂಕಗಳನ್ನು ಪಡೆದು ಶೇ.100 ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಆ ಮೂಲಕ ಇತಿಹಾಸ ಬರೆದಿದ್ದಾರೆ. ಮೈಸೂರಿನ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ಈಶು, ಬೆಂಗಳೂರು ಬನಶಂಕರಿಯ ಹೋಲಿ ಚೈಲ್ಡ್ ಶಾಲೆಯ ಸುಪ್ರಿಯಾ, ಶಿರಸಿಯ ಶ್ರೀದೇವಿ ಪ್ರೌಢಶಾಲೆಯ ಮಂಜುನಾಥ ಅವರು 624 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ 7,58,698 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5,97,973 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಒಟ್ಟಾರೆ ಫಲಿತಾಂಶ ಸುಮಾರು ಶೇ. 81 ರಷ್ಟಿದ್ದು, ಈ ಬಾರಿ ಕುಸಿತ ಕಂಡಿದೆ.

ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಶೇ. 89.63 ರೊಂದಿಗೆ ಮೊದಲ ಸ್ಥಾನಪಡೆದರೆ, ಶೇ. 89.52 ರಷ್ಟು ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನದಲ್ಲಿದೆ. ಬಳ್ಳಾರಿ ಶೇ. 56.68 ಱಷ್ಟು ಫಲಿತಾಂಶದೊಂದಿಗೆ ಕಡೇಯ ಸ್ಥಾನದಲ್ಲಿದೆ. ಜಿಲ್ಲಾವಾರು ಫಲಿತಾಂಶ ಪಟ್ಟಿ ಇಲ್ಲಿದೆ.

IMG-20160516-WA0005

IMG-20160516-WA0006

ಈ ಬಾರಿ 52 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಆ ಪೈಕಿ ಮೂರು ಸರ್ಕಾರಿ ಶಾಲೆಗಳು, ಆರು ಅನುದಾನಿತ ಹಾಗೂ 43 ಅನುದಾನ ರಹಿತ ಶಾಲೆಗಳಿವೆ. ಜೂನ್ 20 ರಿಂದ 27 ರವರೆಗೆ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ನಡೆಸಲಾಗುವುದು. ಅನುತ್ತೀರ್ಣರಾದವರು ಧೃತಿಗೆಡದೇ ಪೂರಕ ಪರೀಕ್ಷೆಗೆ ತಯಾರಿ ನಡೆಸಿ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸುದ್ದಿಗೋಷ್ಠಿಯಲ್ಲಿ ಸೋಮವಾರ ಫಲಿತಾಂಶದ ವಿವರ ನೀಡಿ ತಿಳಿಸಿದರು.

1 COMMENT

Leave a Reply