ಕಂಡೀಷನ್ ಒಪ್ಪಿದರೆ ಭಾರತಕ್ಕೆ ವಾಪಸ್ ಬರ್ತೀನಿ ಅಂತಿದ್ದಾರೆ ವಿಜಯ್ ಮಲ್ಯ

ಡಿಜಿಟಲ್ ಕನ್ನಡ ಟೀಮ್

ಉದ್ಯಮಿ ವಿಜಯ್ ಮಲ್ಯ ಭಾರತ ತೊರೆದು ಸುಮಾರು ಎರಡೂವರೆ ತಿಂಗಳು ಕಳೆದಿವೆ. ಲಂಡನ್ ನಲ್ಲಿ ತಲೆ ಮರೆಸಿಕೊಂಡಿರೋ ಮಲ್ಯರನ್ನ ಸೆರೆ ಹಿಡಿದು ತರಲು ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಈಗ ಮಲ್ಯ ಭಾರತಕ್ಕೆ ಮರಳಲು ನಿರ್ಧರಿಸಿದ್ದಾರಂತೆ. ಅದೂ ಷರತ್ತುಗಳನ್ನು ಒಪ್ಪಿಕೊಂಡರೆ ಮಾತ್ರ.

ಭಾರತದಲ್ಲಿ ತಮ್ಮ ಭದ್ರತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಿದ್ದರೆ ಮಾತ್ರ ಮರಳುತ್ತಾರಂತೆ. ಅಲ್ಲದೆ ಭಾರತೀಯ ಸ್ಟೇಟ್ ಬ್ಯಾಂಕ್ ಸಾಲ ಮರುಪಾವತಿ ಬಗ್ಗೆ ಹೊಸ ಆಫರ್ ಕೊಟ್ಟಿದ್ದಾರೆ.

ಕಳೆದ ಶುಕ್ರವಾರ ಮುಂಬೈನಲ್ಲಿ ನಡೆದ ಯುನೈಟೆಡ್ ಬ್ರೇವರಿಸ್ (ಯುಬಿಎಲ್) ಮಂಡಳಿ ಸಭೆಗೆ ಲಂಡನ್ ನ ಅಜ್ಞಾತ ಸ್ಥಳದಿಂದ ಮಲ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧ್ಯಕ್ಷತೆ ವಹಿಸಿದ್ದರು. ಈ ಬಗ್ಗೆ ಸದಸ್ಯರು ಸಾಕಷ್ಟು ಅಂಶಗಳ ಬಗ್ಗೆ ಮಲ್ಯರೊಂದಿಗೆ ಚರ್ಚಿಸಿದರು. ಅಲ್ಲದೆ ಸಮಸ್ಯೆಗಳನ್ನು ಹೇಳಿಕೊಂಡರು. ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಬಗ್ಗೆ ಮತ್ತೆ ಸಂದಾನಕ್ಕೆ ಮುಂದಾಗುವುದಾಗಿ ಭರವಸೆ ನೀಡಿದ್ದಾರೆ. ಮಲ್ಯ ಭಾರತಕ್ಕೆ ಮರಳುವ ಮನಸ್ಸು ಮಾಡಿದ್ದು, ಇಲ್ಲಿ ಭದ್ರತೆ ಹಾಗೂ ಸ್ವತಂತ್ರ್ಯದ ಭರವಸೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಮಂಡಳಿ ಸದಸ್ಯ ಕಿರಣ್ ಮಜೂಂದಾರ್ ಶಾ ತಿಳಿಸಿದ್ದಾರೆ.

Leave a Reply