ಯಾವೆಲ್ಲ ಚಿತ್ರಗಳು ಈ ವಾರ ತೆರೆಗೆ?, ಇಲ್ಲಿದೆ ಕಣ್ತುಂಬಿಸಿಕೊಳ್ಳಬಹುದಾದ ಚಿತ್ರಪಟ

ನೀರ್ ದೋಸೆ

 

ಯೂಟರ್ನ್

ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರ ಯೂ ಟರ್ನ್ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಕ್ರೌಡ್ ಫಂಡಿಂಗ್ ಮೂಲಕ ಲೂಸಿಯಾ ನಿರ್ಮಿಸಿದ್ದ ಪವನ್ ಕುಮಾರ್ ಹೊಸ ಸಾಹಸವಿದು. ಚಿತ್ರದ ಟ್ರೇಲರ್ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಅಭಿಮಾನಿಗಳಿಗೆ ರೋಚಕ ಅನುಭವ ನೀಡಲು ಸಜ್ಜಾಗಿದೆ.

ಚಿತ್ರ ಆರಂಭವಾದ ಮೊದಲ ವಾರವೇ ಚಿತ್ರವನ್ನು ವೀಕ್ಷಿಸಿ, ಪತ್ರಿಕೆಗಳಲ್ಲಿ ವಿಮರ್ಶೆ ಬರುವವರೆಗೂ ಕಾಯಬೇಡಿ. ಅಲ್ಲಿಯವರೆಗೂ ತಡ ಮಾಡಿದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರವನ್ನು ಎತ್ತಂಗಡಿ ಮಾಡುತ್ತಾರೆ ಎಂದು ಪವನ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈಗಾಗಲೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಎರಡು ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆ ಪಡೆದಿರುವ ಯೂ ಟರ್ನ್, ಲೂಸಿಯಾ ರೀತಿಯಲ್ಲೇ ಜನರ ಮನ ಗೆಲ್ಲುವುದೇ ಎಂಬುದನ್ನು ಕಾದು ನೋಡಬೇಕು. ಚಿತ್ರದ ತಾರಾಗಣದಲ್ಲಿ ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್, ದಿಲೀಪ್ ರಾಜ್ ಮುಂತಾದವರು ಅಭಿನಯಿಸಿದ್ದಾರೆ.

ಕಥಾ ವಿಚಿತ್ರ”  ಡಿಟಿಎಸ್ ಮುಕ್ತಾಯ

ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ-ಕೊರೇನ್ ಕೊರಿಯ ನಿರ್ಮಾಣದ ‘ಕಥಾ ವಿಚಿತ್ರ’ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಡಿಟಿಎಸ್ ಕಾರ್ಯ ಪೂರ್ಣಗೊಂಡಿತು.  ಅನುಪ್ ಅಂತೋಣಿ ನಿರ್ದೇಶನದ, ಚಿತ್ರಕ್ಕೆ ಅಭಿಲಾಶ್ ಕಲತಿ ಛಾಯಾಗ್ರಹಣ, ಆಶಿಕ್ ಅರುಣ್ ಸಂಗೀತ, ನಾಗೇಂದ್ರ ಅರಸ್ ಸಂಕಲನವಿದೆ. ತಾರಾಗಣದಲ್ಲಿ  ಹರ್ಷವರ್ಧನ್, ಅನು, ಹ್ಯಾರಿ, ಮುಂತಾದವರು ಅಭಿನಯಿಸಿದ್ದಾರೆ.

cinema-katha

ಯು ಸರ್ಟಿಫಿಕೆಟ್ ಪಡೆದ `ಮಿ. ಮೊಮ್ಮಗ’ 27 ರಂದು ಬಿಡುಗಡೆ

ಸುಮುಖ ಎಂಟರ್ ಪ್ರೈಸಸ್ ಲಾಂಛನದಲ್ಲಿ, ರಘುಗೌಡ ನಿರ್ಮಾಣದ “ಮಿ||ಮೊಮ್ಮಗ” ಚಿತ್ರಕ್ಕೆ  ಸೆನ್ಸಾರ್ ಮಂಡಳಿಯು ‘ಯು’ ಸರ್ಟಿಫಿಕೆಟ್ ನೀಡಿದೆ.  ಚಿತ್ರವು ಇದೇ ತಿಂಗಳು 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರ ತಾತ ಮತ್ತು  ಮೊಮ್ಮಗನ ಬಾಂಧವ್ಯದ ಕಥಾವಸ್ತುವುಳ್ಳ ಈ ಚಿತ್ರವು ಕಳೆದ ವರ್ಷ ತಮಿಳಿನಲ್ಲಿ ಯಶಸ್ವೀ ಚಿತ್ರಗಳಲ್ಲೊಂದಾದ ‘ಮಂಜಾಪೈ’ ಚಿತ್ರದ ರೀಮೇಕ್.  ಮೂಲ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಾಘವನ್, ಕನ್ನಡದಲ್ಲಿ ಕಥೆ-ಚಿತ್ರಕತೆ-ನಿರ್ದೇಶನ ಮಾಡುತ್ತಿದ್ದಾರೆ. ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ನಾಗೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ ಸಾಹಿತ್ಯ, ರಘುನಂದನ್ ಸಂಗೀತ, ದೇವ ರಾಘವನ್ ಸಂಕಲನ, ಶಿವು ಅವರ ಸಾಹಸವಿದೆ. ತಾರಾಗಣದಲ್ಲಿ ರವಿ, ಓವಿಯಾ (ಕಿರಾತಕ ಚಿತ್ರದ ನಾಯಕಿ), ರಂಗಾಯಣ ರಘು, ಅವಿನಾಶ್, ಕುರಿ ಪ್ರತಾಪ್, ಮುಂತಾದವರಿದ್ದಾರೆ.

cinema-mommaga

`ನೀರ್ ದೋಸೆ’ ಚಿತ್ರಕ್ಕೆ ರೀರೆಕಾರ್ಡಿಂಗ್

ಸ್ಕಂದ ಎಂಟರ್ ಟೇನ್ಮೆಂಟ್ ಲಾಂಛನದಲ್ಲಿ ಪ್ರಸನ್ನ ಮತ್ತು ಶಶಿಕಲಾಬಾಲಾಜಿ ಅವರು ನಿರ್ಮಿಸುತ್ತಿರುವ `ನೀರ್ ದೋಸೆ’  ಚಿತ್ರಕ್ಕೆ ಅನೂಪ್ ಸೀಳಿನ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ನಡೆಯುತ್ತಿದೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಚಿತ್ರದ ಹಾಡುಗಳ ಸೀಡಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ವಿಜಯ್ ಪ್ರಸಾದ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ನಾಯಕರಾಗಿ ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದಾರೆ. ಹರಿಪ್ರಿಯ, ದತ್ತಣ್ಣ, ಸುಮನ್ ರಂಗನಾಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಅರಸ್ ಅವರ ಸಂಕಲನವಿದೆ. ನಾರಾಯಣ ಪಿಳ್ಳೈ ಅವರು ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನವಿದೆ.

ತಾಂಡವ

ಕಕ್ಕರಪ್ಪಗೌಡ ಫಿಲಂಸ್ ಲಾಂಛನದಲ್ಲಿ ಸ್ವಾತಿ ಅಂಬರೀಶ್ ನಿರ್ಮಾಣದ “ತಾಂಡವ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಗೋಪಾಲ್ ಅವರ ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ, ಸತೀಶ್ ಆರ್ಯನ್ ಅವರ ಸಂಗೀತ,ಪವನ್ ಕುಮಾರ್ ಅವರ ಛಾಯಾಗ್ರಹಣ, ದೇವರಾಜ್, ಸಾಲೋಮನ್ ಕೆ ಜಾರ್ಜ್ ಸಂಕಲನ, ಕೌರವ ವೆಂಕಟೇಶ್, ಗಣೇಶ್, ಥವಸಿ ರಾಜ್ ಅವರ ಸಾಹಸ, ಕೆ ಕಲ್ಯಾಣ್, ಮಂಜುನಾಥ್ ರಾವ್ ಸಾಹಿತ್ಯಹೊಂದಿರುವ ಈ ಚಿತ್ರದಲ್ಲಿ ವಸಂತ್, ಚಾಂದಿನಿ, ಧರ್ಮ, ಮೈಕೋನಾಗರಾಜ್, ಶ್ರೀನಿವಾಸಪ್ರಭು, ಸ್ವಾತಿ ಅಂಬರೀಶ್, ಅಶ್ವಿನ್, ಮೈಕೋ ಶಿವು, ಮಂಜುನಾಥ್ ಗೌರಿಬಿದನೂರು, ನಯನ, ಪೂಜಾ, ರೇಣು ಅವರ ತಾರಾಗಣವಿದೆ. ಈ ಚಿತ್ರದ ಚಿತ್ರೀಕರಣ ನೆಲಮಂಗಲ, ಕುಣಿಗಲ್, ರಾಮನಗರ, ಬೆಂಗಳೂರು ಸುತ್ತ ಮುತ್ತ ನಡೆದಿದೆ.

cinema-tandava

ಯಶಸ್ಸಿನ ಹಾದಿಯಲ್ಲಿ “ತಲೆಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ”

ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ವಿಕ್ರಮ್ ಆರ್ಯ ಹಾಗೂ ಕಾಮಿಡಿ ಕಿಂಗ್ ಚಿಕ್ಕಣ್ಣ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರ “ತಲೆಬಾಚ್ಕೊಳ್ಳಿ ಪೌಡರ್ ಹಾಕ್ಕೊಳ್ಳಿ” ಚಿತ್ರ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಕನ್ನಡಿಗರ ಮನವನ್ನು ಗೆದ್ದಿದೆ. ಚಿತ್ರದ ನಾಯಕಿಯರಾದ ನಿಖಿತಾ ಹಾಗೂ ಅಮಾನ್ ಗ್ರೇವಾಲ್ ರವರ ಅಭಿನಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ನಡೆಯುವಂತಹ ಹಲವಾರು ಘಟನೆಗಳನ್ನು ಈ ಚಿತ್ರ ಕಥೆಯಲ್ಲಿ ಅಳವಡಿಸಿಕೊಂಡಿರುವ ನಿರ್ದೇಶಕ ವೇಣುಗೋಪಾಲ್ ಅವರು ಈಗೀನ ಯುವಕರು ಹೇಗೆಲ್ಲಾ ಮೋಸಹೋಗುತ್ತಾರೆ ಎಂಬುದನ್ನು ಇಬ್ಬರು ಅಮಾಯಕ ಯುವಕರ ಮೂಲಕ ತೋರಿಸಿದ್ದಾರೆ. ಈವರೆಗೂ ಕೇವಲ ಹಾಸ್ಯ ಪಾತ್ರಗಳಿಂದಲೇ ನೋಡುಗರನ್ನು ರಂಜಿಸುತ್ತಿದ್ದ ಚಿಕ್ಕಣ್ಣ ಸೆಂಟಿಮೆಂಟ್ ಟಚ್ಚಿರುವ ಪಾತ್ರವನ್ನು ಕೂಡ ನಿಭಾಯಿಸಬಲ್ಲೇ ಎಂದು ನಿರೂಪಿಸಿದ್ದಾರೆ.

ಮಾದ ಮತ್ತು ಮಾನಸಿ’ ಗೆ ಹಿನ್ನೆಲೆ ಸಂಗೀತ

ರಾಜೇಶ್ ಮತ್ತು ದೇವಿ ಫಿಲಂಸ್ ಲಾಂಛನದಲ್ಲಿ ಮನೋಮೂರ್ತಿ ಸಂಗೀತ ನೀಡಿ ನಿರ್ಮಾಣ ಮಾಡುತ್ತಿರುವ ‘ಮಾದ ಮತ್ತು ಮಾನಸಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಸತೀಶ್ ಪ್ರಧಾನ್ ನಿರ್ದೇಶನದ, ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣವಿದೆ. ಇಮ್ರಾನ್, ಕಲೈ, ಪ್ರಭು ಶ್ರೀನಿವಾಸ್ ಅವರ ನೃತ್ಯ, ಡಿಫರೆಂಟ್ ಡ್ಯಾನಿ ಸಾಹಸ, ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ. ತಾರಾಗಣದಲ್ಲಿ ಪ್ರಜ್ವಲ್ ದೇವರಾಜ್, ಶೃತಿ ಹರಿಹರನ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಶೋಭರಾಜ್, ಪವನ್, ವಾಣಿಶ್ರೀ, ಶೃತಿ ನಾಯಕ್, ನಿರಂಜನ್ ಯತಿರಾಜ್, ಮುಂತಾದವರಿದ್ದಾರೆ.

mada maanasi

 

`ದಂಡುಪಾಳ್ಯ ಭಾಗ 2’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ

ವೆಂಕಟ್ ಮಾವೀಸ್ ಲಾಂಛನದಲ್ಲಿ ವೆಂಕಟ್(ನಾಟಿಕೋಳಿ) ಅವರು ನಿರ್ಮಿಸುತ್ತಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ  `ದಂಡುಪಾಳ್ಯ ಭಾಗ 2’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಒಟ್ಟು 25 ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.

ದಂಡುಪಾಳ್ಯ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಅವರೆ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೆಂಕಟ್ ಪ್ರಸಾದ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಹಾಗೂ ಪ್ರಭು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಪೂಜಾಗಾಂಧಿ, ಮಕರಂದ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಶ್ರುತಿ, ಸುಚೀಂದ್ರಪ್ರಸಾದ್, ಯತಿರಾಜ್, ಮುನಿ, ಡ್ಯಾನಿ, ಜಯದೇವ್, ಪೆಟ್ರೋಲ್ ಪ್ರಸನ್ನ, ಸಂಜನ ಮುಂತಾದವರಿದ್ದಾರೆ. ನಟಿ ಸಂಜನಾ ವಿಶೇಷಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

`ದೂಮ್ 5’ ಆರಂಭ

ಪುಣ್ಯ ಫಿಲಮ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ದೂಮ್ 5’ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಆರ್.ಟಿ.ನಗರದ ಶಿರಡಿ ಸಾಯಿ ದೇವಸ್ಥಾನದಲ್ಲಿ ನೆರವೇರಿತು.

ಪ್ರತೀಕ್ ಗೌಡ ಹಾಗೂ ರಘು ಅವರ ಸಹ ನಿರ್ಮಾಣವಿರುವ ಈ ಚಿತ್ರವನ್ನು ಪವನ್ ಕುಮಾರ್ ಎಂ.ಎಸ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಹಾಡುಗಳನ್ನು ಪವನ್ ಕುಮಾರ್ ಅವರೆ ಬರೆದಿದ್ದಾರೆ. ಅರುಣ್ ಆಂಡ್ರ್ಯು ಸಂಗೀತ ನಿರ್ದೇಶನ, ರಾಜರತ್ನ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಸೂರಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ವಿಶೃತ್ ರಾಜ್(ಒರಟ ಪ್ರಶಾಂತ್ ಸಹೋದರ), ಅನಿಲ್, ಮೋಹನ್, ಆದರ್ಶ, ದಕ್ಷಿಣ್ ಐದು ಜನ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.  ಸಂಜನ, ವಿಂದ್ಯಾ, ರಾಕ್‍ಲೈನ್ ಸುಧಾಕರ್, ಪ್ರದೀಪ್ ರಾಜ್, ಕುರಿ ಪ್ರತಾಪ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

Leave a Reply