ವೈದ್ಯ ಶಿಕ್ಷಣ ಸಾಮಾನ್ಯ ಪ್ರವೇಶ ಪರೀಕ್ಷೆ ಗೊಂದಲ, ಮುಂದಿನ ವರ್ಷದಿಂದ ನೀಟ್ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಿದ ಕೇಂದ್ರ

Gandhinagar: People shout slogans during a protest against NEET exam outside BJP headquarters in Gandhinagar on Wednesday. PTI Photo (PTI5_4_2016_000185B)

ಡಿಜಿಟಲ್ ಕನ್ನಡ ಟೀಮ್

ವೈದ್ಯಕೀಯ ಶಿಕ್ಷಣಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಕುರಿತಂತೆ ಉದ್ಭವಿಸಿದ್ದ ಸಾಕಷ್ಟು ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮೇ 9ರಂದು ದೇಶದಾದ್ಯಂತ ನೀಟ್ ಜಾರಿಗೊಳಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿನ ವರ್ಷದಿಂದ ಜಾರಿಗೊಳಿಸಲು ಶುಕ್ರವಾರ ಕೇಂದ್ರ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಸಿಇಟಿ ಮತ್ತು ನೀಟ್ ಪರೀಕ್ಷೆಗಳ ಮಧ್ಯೆ ಸಿಲುಕಿ ಪರದಾಡುತ್ತಿದ್ದ ವಿದ್ಯಾರ್ಥಿಗಳು ಈಗ ನಿರಾಳರಾಗಿದ್ದಾರೆ. ಈ ವರ್ಷ ಸಿಇಟಿ ಹಾಗೂ ಇತರೆ ಪರೀಕ್ಷೆಗಳ ಅನುಸಾರ ವೈದ್ಯಕೀಯ ಶಿಕ್ಷಣ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ವರ್ಷದಿಂದ ನೀಟ್ ಖಡ್ಡಾಯವಾಗಲಿದೆ. ಕೇಂದ್ರದ ಈ ಸುಗ್ರೀವಾಜ್ಞೆ ರಾಜ್ಯ ಸರ್ಕಾರಗಳ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಲಿದೆ. ಇದರೊಂದಿಗೆ ಈ ಬಾರಿ ಎಲ್ಲರೂ ತಮ್ಮ ಸ್ವಂತ ಪರೀಕ್ಷೆಯನ್ನು ನಡೆಸಿ ಪ್ರವೇಶ ಪ್ರಕ್ರಿಯೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕೇಂದ್ರ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಮ್ಯಾನೆಜ್ಮೆಂಟ್ ಕೋಟಾದ ಸೀಟು ಪಡೆಯಲು ಇಚ್ಛಿಸುವವರಿಗೆ ನೀಟ್ ಪರೀಕ್ಷೆ ಅನ್ವಯವಾಗಲಿದೆ.

ಕಳೆದ ಕೆಲ ದಿನಗಳಿಂದ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ಸಚಿವರ ನಡುವೆ ನಿರಂತರ ಮಾತುಕತೆ ನಡೆದಿತ್ತು. ಇನ್ನು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ನ್ಯಾಯಾಲಯದ ತೀರ್ಪನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದವು. ಈ ಎಲ್ಲದರ ಪರಿಣಾಮ ಕೇಂದ್ರ ಸುಗ್ರೀವಾಜ್ಞೆ ಜಾರಿಗೊಳಿಸಲು ನಿರ್ಧರಿಸಿದೆ.

Leave a Reply