ನಾಸಿರ್- ಕಲ್ಕಿ ನವಿರು ನಡೆಗಳಲ್ಲೇ ಆಸಕ್ತಿ ಮೂಡಿಸುತ್ತಿದೆ ‘ವೇಟಿಂಗ್’

 

ಡಿಜಿಟಲ್ ಕನ್ನಡ ಟೀಮ್

ಬರೋ ಶುಕ್ರವಾರ, ಮೇ 27ಕ್ಕೆ ಬಿಡುಗಡೆ ಆಗಲಿರುವ ಹಿಂದಿ ಚಿತ್ರ ವೇಟಿಂಗ್, ತನ್ನ ನವಿರು ಟ್ರೈಲರ್ ಮೂಲಕ ಅದಾಗಲೇ ವೀಕ್ಷಕರಿಗೆ ವೇಟ್ ಮಾಡುತ್ತ ಕುಳಿತಿರಬೇಕಾದ ಭಾವವೊಂದನ್ನು ಹುಟ್ಟಿಸಿದೆ. ಏಕೆಂದರೆ ಅನು ಮೆನನ್ ನಿರ್ದೇಶನದ ಚಿತ್ರ ಕೌತುಕದ ಕತೆಯೊಂದನ್ನು ಬಿಚ್ಚಿಡುವಂತೆ ತೋರುತ್ತಿದೆ.

ಮುಖ್ಯ ಭೂಮಿಕೆಯಲ್ಲಿರುವ ನಾಸಿರುದ್ದೀನ್ ಶಾ ಮತ್ತು ಕಲ್ಕಿ ಕೊಚ್ಲಿನ್ ಇಬ್ಬರದ್ದೂ ಆಸ್ಪತ್ರೆಯಲ್ಲಿ ಕಾಯುವ ಪಾತ್ರ. ಇಬ್ಬರ ಬಾಳ ಸಂಗಾತಿಗಳೂ ಆಸ್ಪತ್ರೆಯಲ್ಲಿ ಮಲಗಿದ್ದಾರೆ. ನಾಸಿರ್ ಸಂಗಾತಿ ಪಾತ್ರದಲ್ಲಿ ಸುಹಾಸಿನಿ ಮಣಿರತ್ನಂ ಕಾಣಿಸಿಕೊಂಡಿದ್ದಾರೆ. ಕೋಮಾದಲ್ಲಿ ಮಲಗಿರುವ ಹೆಂಡತಿಯ ಬಗ್ಗೆ ಆಪ್ತವಾಗುತ್ತ, ಭರವಸೆಗೆ ತುಡಿಯುತ್ತ ನಾಸಿರ್ ಕಾಣಿಸಿಕೊಂಡಿದ್ದಾರೆ. ಕಲ್ಕಿ ತೀರ ಭಿನ್ನ ಹಿನ್ನೆಲೆಯಿಂದ ಬಂದಂತಿದ್ದಾಳೆ. ಇವರಿಬ್ಬರ ನಡುವಿನ ಬದುಕಿನ ಸಂವಾದದಲ್ಲಿ ಅರಳಿರುವಂತೆ ಕಾಣುತ್ತಿದೆ ಈ ಸಿನಿಮಾ.

2015ರಲ್ಲೇ ನಿರ್ಮಾಣಗೊಂಡಿದ್ದ ಚಿತ್ರ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶಿತಗೊಂಡು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಸಾಮಾನ್ಯರು ಕಣ್ತುಂಬಿಸಿಕೊಳ್ಳಬಹುದಾದ ಅವಕಾಶ. ಯೂಟ್ಯೂಬಿನಲ್ಲಿ ಲಭ್ಯವಿರುವ ಟ್ರೈಲರ್, ಹಾಡು ಇಲ್ಲಿವೆ.

1 COMMENT

Leave a Reply