ತಾಜ್ ಮಹಲ್ ಸೌಂದರ್ಯವನ್ನು ಕೀಟಗಳು ತಿನ್ತಿವೆ!

ಡಿಜಿಟಲ್ ಕನ್ನಡ ಟೀಮ್: ತಾಜ್ ಮಹಲ್.. ಭಾರತದ ಹೃದಯ ಭಾಗದಲ್ಲಿರೋ ಪ್ರೀತಿಯ ಸಂಕೇತದ ಅದ್ಭುತ ಪ್ರತಿಮೆ, ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ಹೀಗೆ.. ಹಲವು ವಿಶೇಷಗಳೊಂದಿಗೆ ಯಮುನಾ ತೀರದಲ್ಲಿ ಶ್ವೇತ ವರ್ಣದಿಂದ ಕಂಗೊಳಿಸುತ್ತಿರುವ ಪ್ರೇಮ ಸ್ಮಾರಕದ ಸೌಂದರ್ಯಕ್ಕೆ ಈಗ ಕುತ್ತು ಬಂದಿದೆ. ಬಿಳಿ ಬಣ್ಣದ ಸೌಂದರ್ಯಕ್ಕೆ ಹಸಿರು ಕಲೆಗಳು ಹೆಚ್ಚುತ್ತಿವೆ.

ಹೌದು, 17ನೇ ಶತಮಾನದಲ್ಲಿ ನಿರ್ಮಿತಗೊಂಡ ಈ ತಾಜ್ ಮಹಲ್ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಆದರೆ, ಯಮುನಾ ನದಿಯ ಮಲಿನಗೊಂಡಿರುವುದರಿಂದ ಇಲ್ಲಿ ಉತ್ಪತ್ತಿಯಾಗುತ್ತಿರೋ ಕ್ರಿಮಿ ಕೀಟಗಳು ತಾಜ್ ಮಹಲ್ ಮೇಲೆ ದಾಳಿ ಮಾಡಿ ಸೌಂದರ್ಯವನ್ನು ಹೀರುತ್ತಿವೆ. ಇದರ ಶ್ವೇತ ವರ್ಣದ ಅಮೃತ ಶೀಲೆಯ ಮೇಲೆ ಪಾಚಿಯಂತೆ ಹಸಿರು ಬಣ್ಣದ ಕಲೆಗಳು ಹೆಚ್ಚುತ್ತಿವೆ.

taj1

ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಪ್ರೇಮ ಪ್ರತೀಕವನ್ನೊಮ್ಮೆ ನೋಡಲೇಬೇಕು ಎಂಬ ಕನಸು ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಪ್ರೇಮಿಗಳದ್ದು. ಇಂತಹ ಅದ್ಭುತ ಕಲಾಕೃತಿ ಪರಿಸರ ಮಾಲಿನ್ಯದಿಂದ ತನ್ನ ವೈಭವವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಆತಂಕ ಸೃಷ್ಟಿಸಿದೆ. ಪುರಾತತ್ವ ತಜ್ಞರ ಪ್ರಕಾರ, ಜಿಯೊಲ್ಡಿಕಿರೊನಮಸ್ ಎಂಬ ಕೀಟಗಳು ಈ ಸ್ಮಾರಕದ ಮೇಲೆ ದಾಳಿ ಮಾಡಿವೆ. ತಾಜ್ ಮಹಲ್ ಇರುವ ಯಮುನಾ ನದಿ ತೀರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದರಿಂದ ಈ ಕೀಟಗಳು ಸ್ಮಾರಕವನ್ನು ಆವರಿಸಿದೆ.

ಇನ್ನು ಕೀಟಶಾಸ್ತ್ರತಜ್ಞರು ಹೇಳೋದೆನಂದರೆ, ಈ ಕೀಟಗಳು ತಾಜ್ ಮಹಲ್ ಅನ್ನು ಆವರಿಸಿದೆಯಾದರೂ ಇದರ ಅಮೃತ ಶಿಲೆಗೆ ಯಾವುದೇ ತೊಂದರೆ ಮಾಡುವುದಿಲ್ಲ. ನೀರಿನಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಾದಾಗ ಇವು ಹುಟ್ಟುಕೊಳ್ಳುತ್ತವೆ. ಇವು ಸಾಮಾನ್ಯವಾಗಿ ನೀರಿನಲ್ಲಿ ಹುಟ್ಟಿದರೂ ಕಲ್ಲು ಹಾಗೂ ಶಿಲೆಗಳತ್ತ ಬೇಗ ಆಕರ್ಷಿತವಾಗುತ್ತವೆ. ಯಮುನಾ ನದಿ ತೀರದಲ್ಲೇ ತಾಜ್ ಮಹಲ್ ಇರುವುದರಿಂದ ಕೀಟಗಳು ಈ ಸ್ಮಾರಕದ ಮೇಲೆ ದಾಳಿ ಮಾಡಿವೆ. ಇವುಗಳು ಹೊರಹಾಕುವ ತ್ಯಾಜ್ಯಗಳು ಸಸ್ಯಗಳಿಗೆ ಹಸಿರು ಬಣ್ಣ ಕೊಡುವ ಹರಿತ್ತು ಅಂಶವನ್ನು ಹೊಂದಿರುತ್ತವೆ. ಹೀಗಾಗಿ ತಾಜ್ ಮಹಲ್ ನ ಬಿಳಿ ಶಿಲೆಯ ಮೇಲೆ ಹರಿಸು ಬಣ್ಣದ ಕಲೆ ಸೃಷ್ಟಿಯಾಗುತ್ತಿವೆ.

taj 2

ಯಮುನಾ ನದಿ ತೀರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವುದರ ಜತೆಗೆ, ಶವಗಳನ್ನು ಸುಡುತ್ತಿರುವುದರಿಂದ ಆಗುವ ವಾಯು ಮಾಲಿನ್ಯವೂ ಈ ಸ್ಮಾರಕದ ಸೌಂದರ್ಯಕ್ಕೆ ಮಾರಕವಾಗುತ್ತಿದೆ.

Leave a Reply