ಯುರೋಪ್ ನಲ್ಲಿ ತ್ಯಾಜ್ಯ ನಿರ್ವಹಣೆಗೆ ನರಿಗಳು ಹೇಗೆ ನೆರವಾಗುತ್ತಿವೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ತ್ಯಾಜ್ಯ ನಿರ್ವಹಣೆ.. ಆಧುನಿಕ ನಗರಗಳಲ್ಲಿ ತಲೆದೊರಿರೋ ಸಮಸ್ಯೆ. ಇದು ವಿಶ್ವದ ಎಲ್ಲಾ ಪ್ರಮುಖ ನಗರಗಳ ಸಮಸ್ಯೆ. ಈ ಸಮಸ್ಯೆಯ ಪರಿಹಾರಕ್ಕೆ ಯುರೋಪ್ ಒಂದು ವಿಭಿನ್ನ ಮಾರ್ಗ ಕಂಡುಕೊಂಡಿದೆ. ಅದೇನೆಂದರೆ, ತ್ಯಾಜ್ಯ ನಿರ್ವಹಣೆಗೆ ನರಿಗಳನ್ನ ಬಳಸಿಕೊಳ್ಳುವುದು.

ಯುರೋಪ್ ನಲ್ಲಿ ತ್ಯಾಜ್ಯ ನಿರ್ವಹಣೆಗೆ ನರಿಗಳ ಕೊಡುಗೆಯಿಂದ ಪ್ರತಿ ವರ್ಷಕ್ಕೆ 2 ಮಿಲಿಯನ್ ಯ್ಯೂರೊ (₹ 15 ಕೋಟಿ) ಉಳಿಕೆಯಾಗುತ್ತಿರೋದು ಅಚ್ಚರಿಯ ಸಂಗತಿ. ಅರೆ, ನರಿ ಕಾಡು ಪ್ರಾಣಿ. ಅದಕ್ಕೂ ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಗೂ ಏನು ಸಂಬಂಧ ಅಂತಾ ಕೇಳಬಹುದು. ಇವುಗಳ ಸಂಬಂಧ ಏನು? ತ್ಯಾಜ್ಯ ನಿರ್ವಹಣೆಯಲ್ಲಿ ನರಿಗಳ ಉಪಯೋಗ ಹೇಗೆ? ಎಂಬುದು ಇಲ್ಲಿದೆ ನೋಡಿ.

ಸಾಮಾನ್ಯವಾಗಿ ನರಿಗಳು ಇತರೆ ಮಾಂಸಹಾರಿ ಪ್ರಾಣಿಗಳು ಭೇಟೆಯಾಡಿ ತಿಂದು ಬಿಟ್ಟ ಮಾಂಸ ಅಥವಾ ಸತ್ತ ಪ್ರಾಣಿಗಳ ಮಾಂಸ ತಿನ್ನುತ್ತವೆ. ಅದೇ ರೀತಿ ಯುರೋಪ್ ರಾಷ್ಟ್ರಗಳಲ್ಲಿ ಮಾಂಸಹಾರಿ ಉತ್ಪನ್ನ ತಯಾರಿಕೆ ನಂತರ ಉಳಿಯುವ ತ್ಯಾಜ್ಯ ಮಾಂಸವನ್ನು ಈ ನರಿಗಳು ತಿನ್ನುತ್ತಿವೆ. ಇದರೊಂದಿಗೆ ಯುರೋಪ್ ನಲ್ಲಿ ಮಾಂಸ ತ್ಯಾಜ್ಯ ನಿರ್ವಹಣೆಯಲ್ಲಿ ನರಿಗಳ ಪಾತ್ರ ಮಹತ್ವದ್ದಾಗಿದೆ.

ಸಿಂಹ, ಹುಲಿ, ಮೊಸಳೆಯಂತಹ ನರಭಕ್ಷಕ ಪ್ರಾಣಿಗಳು ಇಲ್ಲದಿರುವ ಕಡೆ ನರಿಗಳು ಜೈವಿಕ ವ್ಯವಸ್ಥೆ ಸಮತೋಲನ ಕಾಪಿಡುವಲ್ಲಿ ಉತ್ತಮ ಕೊಡುಗೆ ನೀಡುತ್ತವೆ. ಇವು ಸತ್ತ ಪ್ರಾಣಿಗಳ ಉಳಿಕೆಯನ್ನು ತಿನ್ನುತ್ತವೆ. ಇದರಿಂದ ಪ್ರಾಣಿಗಳ ಮೃತ ದೇಹ ಕೊಳೆತು ರೋಗಗಳು ಸೃಷ್ಠಿಯಾಗುವುದು ತಪ್ಪುತ್ತಿದೆ ಎಂಬುದು ಸರ್ಬಿಯಾದ ಬೆಲ್ಗ್ರೇಡ್ ಯೂನಿವರ್ಸಿಟಿಯ ಸಂಶೋಧಕ ಡಸ್ಕೊ ಸಿರೊವಿಕ್ ವಾದ.

ಯುರೋಪ್ ನಲ್ಲಿನ ಅಧ್ಯಯನದ ಪ್ರಕಾರ ಇಲ್ಲಿನ ನರಿಗಳು ಪ್ರತಿ ವರ್ಷ 3700 ಟನ್ ಗಳಷ್ಟು ಪ್ರಾಣಿಗಳ ತ್ಯಾಜ್ಯ ಮಾಂಸವನ್ನು ತಿನ್ನುತ್ತಿವೆ. 13.2 ಮಿಲಿಯನ್ ನಷ್ಟು ಇಲಿ, ಹೆಗ್ಗಣದಂತ ಬೆಳೆ ಹಾನಿಕಾರಕ ಪ್ರಾಣಿಗಳನ್ನು ಆಹಾರವಾಗಿ ಉಪಯೋಗಿಸುತ್ತಿವೆ. ಇದರಿಂದ ಯುರೋಪ್ ನಲ್ಲಿ ವರ್ಷಕ್ಕೆ ₹ 15 ಕೋಟಿ ಮೊತ್ತದಷ್ಟು ತ್ಯಾಜ್ಯ ನಿರ್ವಹಣೆ ಮಾಡುವ ಖರ್ಚು ಉಳಿಯುತ್ತಿದೆ.

Leave a Reply