ಈ ವಾರಾಂತ್ಯದಲ್ಲಿ ನೀವು ನೋಡಬಹುದಾಗಿದ್ದು- ‘ಬೆಂಗಳೂರು ಡ್ರ್ಯಾಗ್ ಫೆಸ್ಟ್-2016’

ಮೇ 28 ಮತ್ತು 29ರಂದು ಬೆಂಗಳೂರಿನ ಹೊಸೂರು ತನೇಜಾ ಏರೋಸ್ಪೇಸ್ ಅಂಡ್ ಏವಿಯೇಷನ್ ರನ್‍ವೇಯಲ್ಲಿ ‘ಟೀಮ್ 46 ರೇಸಿಂಗ್ ಕಮ್ಯುನಿಟಿ’ ಕಾರು- ಬೈಕುಗಳ ರೇಸ್ ಹಬ್ಬವನ್ನು ಆಯೋಜಿಸಿದೆ.

ಈ ಬಗ್ಗೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುವುದು-  ಕಳೆದ 6 ವರ್ಷಗಳಿಂದ ಸಕ್ರಿಯವಾಗಿರುವ ಟೀಮ್-46 ರೇಸಿಂಗ್ ಪ್ರೈ.ಲಿ. ಈ ಬಾರಿಯೂ ಅತ್ಯಂತ ವೃತ್ತಿಪರವಾಗಿ ಕಾರ್, ಬೈಕ್ ರೇಸಿಂಗ್ ಸ್ಪರ್ಧೆ ಆಯೋಜಿಸಿದೆ. ಬೆಂಗಳೂರು ಡ್ರ್ಯಾಗ್ ರೇಸ್ 402 ಮೀಟರ್ ಉದ್ದದ ಟ್ರ್ಯಾಕ್‍ನಲ್ಲಿ ನಡೆಯಲಿದ್ದು, 350ಕ್ಕೂ ಹೆಚ್ಚು ಕಾರುಗಳು, 450 ಹೆಚ್ಚು ಬೈಕ್‍ಗಳು ಈ ಡ್ರ್ಯಾಗ್ ಫೆಸ್ಟ್ ನಲ್ಲಿ ಪಾಲ್ಗೊಳ್ಳಲಿವೆ. ವೃತ್ತಿಪರ ಚಾಲಕರು ತಮ್ಮ ಚಾಲನಾ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಇಲ್ಲಿ ಅನಾವರಣಗೊಳಿಸಲಿದ್ದಾರೆ.. ಒಟ್ಟಾರೆ, 45 ಮೀಟರ್ ಅಗಲ, 2.2 ಕಿ.ಮೀ. ಉದ್ದ ಇರೋ ಇದ್ದು, ಹೊಸೂರಿನ ಈ ವಾಯುನೆಲೆ ರೇಸಿಂಗ್ ಕಾರು, ಬೈಕ್‍ಗಳ ಅದ್ಭುತ ಸಾಹಸ ಪ್ರದರ್ಶನಕ್ಕೆ ವೇದಿಕೆಯಾಗಲಿದೆ.  ಅತಿ ವೇಗವಾಗಿ ಚಲಿಸುವ ವಾಹನಗಳ ನಿಯಂತ್ರಣ ವ್ಯವಸ್ಥೆಗೆ ಪೂರಕವಾಗಿ ರನ್‍ವೇಯಲ್ಲಿ ಅಧಿಕವಾಗಿ 700 ಮೀಟರ್ ಉದ್ದದ ಟ್ರ್ಯಾಕ್ ಅನ್ನು ಮುಕ್ತವಾಗಿಡಲಾಗಿದೆ.  600ಕ್ಕೂ ಹೆಚ್ಚು ಮಂದಿ ಸ್ಪರ್ಧಾಳುಗಳ ಮೈ ನವಿರೇಳಿಸುವ ಕಾರು, ಬೈಕ್‍ಗಳ ಸಾಹಸವನ್ನು ನೀವು ಕಣ್ ತುಂಬಿಕೊಳ್ಳಬಹುದು..

ಏನಿದು ಡ್ರ್ಯಾಗ್ ರೇಸಿಂಗ್?: ಕಾರು ಮತ್ತು ಬೈಕ್ ರೇಸಿಂಗ್‍ನಲ್ಲಿ ಹಲವು ವಿಧಗಳಿವೆ. ಆಟೋಕ್ರಾಸ್ ರ್ಯಾಲಿಗಳು, ಸರ್ಕಿಟ್ ರೇಸಿಂಗ್, ಡರ್ಟ್ ಟ್ರ್ಯಾಕ್, ಹಿಲ್ ಕ್ಲೈಂಬ್ ಮತ್ತು ಡ್ರ್ಯಾಗ್ ರೇಸಿಂಗ್… ಹೀಗೆ ಹಲವು ಬಗೆಯಲ್ಲಿ ಕಾರ್ ಮತ್ತು ಬೈಕ್ ರೇಸ್‍ಗಳು ನಡೆಯುತ್ತವೆ. ಈ ಪೈಕಿ ಡ್ರ್ಯಾಗ್ ರೇಸಿಂಗ್ ವಿಶಿಷ್ಟವಾದುದು. ತುಂಬ ಕಡಿಮೆ ದೂರದ ರೇಸ್ ಸ್ಪರ್ಧೆ ಇದು. ಏಕಕಾಲಕ್ಕೆ ಎರಡು ವಾಹನಗಳನ್ನು ಸ್ಪರ್ಧೆಗಿಳಿಸಲಾಗುತ್ತದೆ. ಯಾವುದು ಮೊದಲಾಗಿ ಗುರಿ ತಲುಪುತ್ತದೆ ಎಂಬುದನ್ನು ಅತ್ಯಂತ ಕರಾರುವಾಕ್ ಎಲೆಕ್ಟ್ರಾನಿಕ್ ಟೈಮಿಂಗ್ ಮತ್ತು ಸ್ಪೀಡ್ ಸೆನ್ಸಿಂಗ್ ಸಿಸ್ಟಮ್ ಮೂಲಕ ನಿರ್ಧರಿಸಲಾಗುತ್ತದೆ. ಡ್ರ್ಯಾಗ್ ರೇಸ್‍ನ್ನು ನಯವಾದ ರಸ್ತೆಗಳು ಅಥವಾ ವಿಮಾನ ರನ್‍ವೇಗಳಂಥ ನಿಯಂತ್ರಿತ ಟ್ರ್ಯಾಕ್‍ಗಳಲ್ಲಿ ಆಯೋಜಿಸಲಾಗುತ್ತದೆ.

race1

ಸ್ಪರ್ಧಿಗಳಿಗೆ ಮತ್ತು ಪ್ರೇಕ್ಷಕರಿಗೂ ಸಾಂಕೇತಿಕ ಪ್ರವೇಶ ಶುಲ್ಕ ಇದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಪ್ರೇಕ್ಷಕರ ಸುರಕ್ಷತೆಗೂ ಗರಿಷ್ಠ ಕಾಳಜಿ ವಹಿಸಲಾಗಿದೆ ಎಂದು ಟೀಂ 46 ರೇಸಿಂಗ್ ಕಮ್ಯುನಿಟಿಯ ರಾಘವೇಂದ್ರ ತಿಳಿಸಿದ್ದಾರೆ. ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ರನ್‍ವೇಗಳಲ್ಲಿ ಇಂತಹ ಇನ್ನಷ್ಟು ಡ್ರ್ಯಾಗ್ ರೇಸ್‍ಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ರೇಸ್‍ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

Leave a Reply