ಗ್ರಾಮ ಪಂಚಾಯ್ತಿ ಕಚೇರಿಯಲ್ಲೇ ಅತ್ಯಾಚಾರಕ್ಕೆ ಮುಂದಾದ ಅಧ್ಯಕ್ಷ, ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ

ಡಿಜಿಟಲ್ ಕನ್ನಡ ಟೀಮ್:

ಗ್ರಾಮಸ್ಥರ ಹಿತ ಕಾಪಾಡಬೇಕಾದ ಪಂಚಾಯ್ತಿ ಅಧ್ಯಕ್ಷನೇ ತನ್ನ ಜವಾಬ್ದಾರಿ ಮರೆತು ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.

ಮಂಡ್ಯದ ಕಿಸ್ತೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಚಂದ್ರಹಾಸ ಈ ಹೀನ ಕೃತ್ಯ ಮಾಡಿದ ವ್ಯಕ್ತಿ. ವಿಧವೆ ಎಂಬ ಅನುಕಂಪದ ಆಧಾರದ ಮೇಲೆ ಕಳೆದ ಆರು ವರ್ಷಗಳಿಂದ ಡಿ ಗ್ರೂಪ್ ನೌಕರಳಾಗಿ ಕೆಲಸ ಮಾಡುತ್ತಿರುವ ಮಹಿಳೆ ಮೇಲೆ ಸಂಜೆ ಆರು ಗಂಟೆ ಸುಮಾರಿಗೆ ಅತ್ಯಾಚಾರ ಪ್ರಯತ್ನ ನಡೆಸಿದ್ದಾನೆ.

ಆಕೆ ಒಬ್ಬಂಟಿ, ಏನೇ ಮಾಡಿದರೂ ಕೇಳುವವರಿಲ್ಲ ಎಂಬ ಧೈರ್ಯವೋ ಏನೊ, ಚಂದ್ರಹಾಸ ಆಕೆಯ ಮೇಲೆ ದೌರ್ಜನ್ಯಕ್ಕೆ ಮುಂದಾದ. ಸಂಜೆ ಎಲ್ಲ ಸಿಬ್ಬಂದಿಗಳು ಹೋದ ನಂತರ ಚಂದ್ರಹಾಸ ಈ ಕೃತ್ಯ ಎಸಗಿದ್ದಾನೆ. ಆಕೆ ಆತನಿಂದ ತಪ್ಪಿಸಿಕೊಂಡು ಗ್ರಾಮಸ್ಥರ ಬಳಿ ತನಗಾದ ದೌರ್ಜನ್ಯ ಹೇಳಿಕೊಂಡಳು.

ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ತಾನು ಕಸ ಗುಡಿಸುವಂತೆ ಆಕೆಯ ಕೈ ಹಿಡಿದು ಎಳೆದೆ. ಅತ್ಯಾಚಾರ ಪ್ರಯತ್ನ ಮಾಡಿಲ್ಲ ಎಂದು ಸಮರ್ಥನೆ ನೀಡಿದ. ನಂತರ ಕಚೇರಿಯಲ್ಲಿದ್ದ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ, ಚಂದ್ರಹಾಸ ಈಕೆಯನ್ನು ಎಳೆದಾಡಿ, ಅಸಭ್ಯ ವರ್ತನೆ ತೋರಿರುವುದು ಬೆಳಕಿಗೆ ಬಂದಿದೆ. ನಂತರ ಗ್ರಾಮಸ್ಥರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply