ಫೇಸ್ ಬುಕ್ನಲ್ಲಿ ನೆಹರು ಸಮರ್ಥಿಸಿ ಪೋಸ್ಟ್ ಹಾಕಿದ್ದಕ್ಕೆ ಎತ್ತಂಗಡಿಯಾದ್ರೆ ಜಿಲ್ಲಾಧಿಕಾರಿ ?

ಡಿಜಿಟಲ್ ಕನ್ನಡ ಟೀಮ್: ಮಧ್ಯಪ್ರದೇಶದ ಬರ್ವಾನಿಯ ಜಿಲ್ಲಾಧಿಕಾರಿ ಅಜಯ್ ಸಿಂಗ್ ಗಂಗ್ವಾರ್ ಅವರನ್ನು ಸರ್ಕಾರ ರಾತ್ರೋರಾತ್ರಿ ಎತ್ತಂಗಡಿ ಮಾಡಿದೆ. ಕಾರಣ ಏನು ಗೊತ್ತಾ? ಅವರು ತಮ್ಮ ಫೇಸ್ ಬುಕ್ ನಲ್ಲಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಅವರನ್ನು ಹೊಗಳಿದ್ದು.

ಅಜಯ್ ಸಿಂಗ್ ‘ನೆಹರು ಅವರು ಮಾಡಿರದ ತಪ್ಪುಗಳೇನು ಎಂಬುದನ್ನು ತಿಳಿಯೋಣ’ ಎಂದು ಬರೆದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ವೈರಲ್ ಆಗಿದ್ದ ಪತ್ರದ ಸಾರ ಹೀಗಿತ್ತು- ‘1947ರಲ್ಲಿ ದೇಶ ಹಿಂದೂ ತಾಲಿಬಾನ್ ರಾಷ್ಟ್ರವಾಗುವುದನ್ನು ತಪ್ಪಿಸಿ ನಮ್ಮನ್ನು ರಕ್ಷಿಸಿದ್ದು ನೆಹರು ಅವರ ತಪ್ಪೇ? ಐಐಟಿ, ಇಸ್ರೊ, ಬಿಎಆರ್ ಸಿ, ಐಐಎಸ್ ಬಿ, ಐಐಎಂ, ಬಿಎಚ್ಇಎಲ್ ಸ್ಟೀಲ್ ಪ್ಲಾಂಟ್, ಡ್ಯಾಮ್ ಗಳು, ಥರ್ಮಲ್ ಪವರ್ ಸ್ಥಾಪಿಸಿದ್ದು ತಪ್ಪೇ? ಅಸಾರಾಮ್ ಮತ್ತು ರಾಮ್ ದೇವ್ ರಂತಹ ಬುದ್ಧಿಜೀವಿಗಳ ಬದಲಾಗಿ ಸಾರಾಭಾಯಿ, ಹೊಮಿ ಜಹಂಗೀರ್ ಅವರನ್ನು ಗೌರವಿಸಿದ್ದು ಅವರ ತಪ್ಪೇ?’ ಇವು ಅಜಯ್ ಸಿಂಗ್ ಅವರ ಪೋಸ್ಟ್ ನ ಪ್ರಮುಖ ಅಂಶಗಳು. ಈ ಪೋಸ್ಟ್ ಹಾಕಿದ ನಂತರ ಅಜಯ್ ಸಿಂಗ್ ಅವರನ್ನು ಜಿಲ್ಲೆಯಿಂದ ಹೊರ ಹಾಕುವ ಬಗ್ಗೆ ವ್ಯಾಪಕ ವದಂತಿಗಳು ಸಹ ಹರಡಿದ್ದವು.

ಈ ಪೋಸ್ಟ್ ಅನ್ನು ಹಿರಿಯ ಅಧಿಕಾರಿಗಳು ಸೇವೆಯ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬುದು ಸರ್ಕಾರಿ ಅಧಿಕಾರಿಗಳ ಸಮರ್ಥನೆ. ಆದರೆ ವರ್ಗಾವಣೆ ಆದೇಶದಲ್ಲಿ ಈ ಕಾರಣವನ್ನೇನೂ ಉಲ್ಲೇಖಿಸಲಾಗಿಲ್ಲ.

Leave a Reply