ಬರ್ತ್‌ಡೇ ಸಂಭ್ರಮಗಳನ್ನು ಅಣುಕಿಸಬೇಡ್ರೀ.. ಸಾಮಾನ್ಯನೊಬ್ಬ ಸೆಲಿಬ್ರಿಟಿ ಆಗೋ ದಿನ ಇದುರೀ..

ಶಿವಶಂಕರ್, ಐಟಿ ಉದ್ಯೋಗಿ

——-

ನ್  ಪ್ಲಾನ್ಸ್  ಇವತ್ತು…..?

ಎಲ್ಲರಿಗೂ ಒಂದು ಸಲಾಮ್! ಇನ್ನೂ ಶುರು ಮಾಡೋಣ ನಮ್ಮ ಕಾಮ್!

ವರ್ಷಕ್ಕೆ ಒಂದ್ಸಲಿ ಹುಟ್ಟುಹಬ್ಬ ಬರೋದಂತು ಗ್ಯಾರೆಂಟೀ. ಎಷ್ಟು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತೀವಿ  ಅನ್ನೋದಂತು ಗ್ಯಾರೆಂಟೀ ಇಲ್ಲ. ಒಂದು 20 ವರ್ಷ ವಾರಂಟಿ ಕೊಡಬಹುದು. ಆದರೆ, ಅದರ ಮೇಲೆ  ಹೇಳೋಕೆ ಆಗಲ್ಲ. ಹೋಗ್ಲಿ ಚಿಂತೆ ಬಿಡಿ, ಹುಟ್ಟು ಹಬ್ಬಗಳ ಜಲಕ್ ನೋಡೋಣ ಬನ್ನಿ.

ನಾವು ಹುಟ್ಟಿದ ಕೂಡಲೇ ಅಳೋಕೆ ಶುರು ಮಾಡಿದ್ವಿ. ಆಸ್ಪತ್ರೆಯ ನರ್ಸ್ (ಏಲೀಯಸ್ ಸಿಸ್ಟರ್)  ಎತ್ತಿಕೊಂಡಿದ್ದ ಕೂಡಲೇ ನಗುತ್ತಾ ಜೋಕಾಲಿ ಆಡಿದ್ವಿ. ಅದಾದ  ನಂತರವೇ, ತಾಯಿಯ ಮಡಿಲಲ್ಲಿ  ಮಲ್ಕೊಂಡ್ವಿ. ಈಗ ಪ್ರಪಂಚಕ್ಕೆ ಕಾಲಿಟ್ಟಾಯಿತು, ಪ್ರತಿ ವರ್ಷ ಹುಟ್ಟುಹಬ್ಬ ಆಚರಿಸುವುದು  ಸಾಮಾನ್ಯವಾಯಿತು.

ಒಂದು ವರ್ಷ ಮುಗೀತಾ ಬಂದಂತೆ ಅಂಬೆಗಾಲಿಡ್ತಾ, ನಡೆಯುವುದೇ ಕಷ್ಟವಾಗಿತ್ತು. ಬೆರಳಿನ ಉಗುರು  ಕಚ್ಚೋಣ ಅಂದರೆ ನೆಟ್ಟಗೆ  ಹಲ್ಲು ಸಹ  ಬೆಳದಿರಲಿಲ್ಲ. ಆವಾಗೆಲ್ಲ ಕೇಕ್, ಕ್ಯಾಂಡಲ್ ಇತ್ತು ಅನ್ನೋದೇ  ಗೊತ್ತಿರಲಿಲ್ಲ. ನಮ್ಮ ಹೆಸರಲ್ಲಿ ಪಕ್ಕದಮನೆ ಆಂಟೀ, ಅಂಕಲ್ಗಳು ಎಷ್ಟು ಕೇಕ್ ತಿಂದಿರುತ್ತಾರೋ ಎಂದು  ಉಹಿಸಲು ಸಾಧ್ಯವಿಲ್ಲ.

ಎರಡು ಮೂರು ವರ್ಷದ ನಂತರ, ಪೇಪರ್ ಪ್ಲೇಟ್ನಲ್ಲಿ ಚಿಪ್ಸು, ಕೇಕ್ ಮತ್ತೆ ಪ್ಲಾಸ್ಟಿಕ್ ಗ್ಲಾಸ್ ನಲ್ಲಿ  ರಸ್ನಾ(ಇವಾಗ ಯಾರಪ್ಪಾ ಅವಳು ಅಂತ ಕೇಳಿದ್ರೂ ಆಶ್ಚರ್ಯ ಇಲ್ಲ) ಕೊಡೋದು ಶುರುವಾಯಿತು. ಮನೆಗೆ ಬಂದ ಅತಿಥಿಗಳು ಬರಿ ಖಾಲಿ ಕೈಯಲ್ಲಿ ವಿಶ್ ಮಾಡಿ ಹೋಗುತ್ತಿರಲಿಲ್ಲ. ಉಡುಗೊರೆ ಕೊಡುವುದು ಒಂದು ರೂಡಿ. ಆಗ ನೆನಪಿಗೆ ಬರುವುದೇ ಎನ್ವೆಲಪ್. ದುಡ್ಡು ಕೊಟ್ಟು ಆಶೀರ್ವಾದ ಮಾಡೋದು ಅಥಿತಿಗಳ(ಗೆಸ್ಟ್) ಪದ್ಧತಿ, ಖುಷಿಯಿಂದ ಇಸ್ಕೊಂಡು, “ಅಯ್ಯೋ! ಬೇಡ ಬಿಡಿ”, ಅನ್ನೋದು ಆತಿಥೇಯರ(ಹೋಸ್ಟ್) ಪದ್ಧತಿ ಆಗಿತ್ತು. ನಮಗೋ ಮೂಗಲ್ಲಿ, ಬಾಯಲ್ಲಿ ಬೆರಳು ಇಟ್ಕೊಂಡು,  ನಗುತ್ತಾ,  ಕೆಲವೊಮ್ಮೆ  ಅಳೋದು  ಬಿಟ್ಟರೆ,  ಇವೆಲ್ಲ  ಅರ್ಥಾನೇ  ಆಗುತ್ತಿರಲಿಲ್ಲ.

 ಆಮೇಲೆ, ಈ ಚಡ್ಡಿ ಹಾಕ್ಕೊಳ್ಳೋ ಸ್ಟೇಜ್ ಮುಗಿತ್ತಿದ್ದಂತೆ, ಪೈಜಾಮಗೆ ಲಾಡಿ ಕಟ್ಟಿಸಿಕೊಳ್ಳೋ ಸ್ಟೇಜ್ ಬಂತು. ಅಮ್ಮ! ಅದುಕೊಡು, ಇದುಕೊಡು ಅಂತ ಹೇಳೋದಿಕ್ಕೆ ಶುರುಮಾಡಿದ್ವಿ. ಆವಾಗಿನ ಕಾಲದಲ್ಲಿ ‘ಸ್ವೀಟ್ ಚ್ಯಾರಿಯಟ್’,’ ‘ಜಸ್ಟ್ ಬೇಕ್”, ಅಂತ ಏನು ಇರಲಿಲ್ಲ. ಇದ್ದಿದ್ದು ಒಂದೇ -“ದ ಐಯಂಗಾರ್ ಬೇಕರೀ”. ಬಣ್ಣ, ಬಣ್ಣದ ಕೇಕ್ ಗಳು ಸಿಗುತ್ತಿದ್ದವು. ಬನ್ ಮೇಲೆ ಕ್ರೀಮ್ ಸವರಿ, ಅದರ ಮೇಲೆ ಮಿಕೀ ಮೌಸ್ ಚಿತ್ರ ಬಿಡಿಸಿದರೆ ಸಾಕ್ಕಿತ್ತು. ನೋಡಿ, ಆವಾಗ್ಲೇನೆ ಅದು ಬರ್ತ್‌ಡೇ ಕೇಕ್ ರೂಪದಲ್ಲಿ ಕಾಣೋದು. ಕೇಕು ಸುತ್ತ ಚುಟುಕು ಬಣ್ಣದ ಕ್ಯಾಂಡಲ್ಸ್, ಮಧ್ಯದಲ್ಲಿ ನಮ್ಮ ವಯಸಿನ ಸಂಖ್ಯೆಯ ಒಂದು ದೊಡ್ಡ ಕ್ಯಾಂಡಲ್. ಒಂದು ಕೈಯಲ್ಲಿ ಕೇಕ್ ಅನ್ನ ಕತ್ತರಿಸುತ್ತಾ, ಮತ್ತೊಂದು ಕೈಯಲ್ಲಿ ಚೆರೀ ಹಣ್ಣನ್ನು ತಿನ್ನುವಾಗ ಫ್ಯಾನ್ಮೇಲೆ ಸಿಗ್ಸಿರೋ ‘ಬಲ್ಲೋನ್ಸ್’ ಗಳನ್ನು ಎಣಿಸುತ್ತಾ ಹೋದೆ. ಹಾಗೆ ಗೊತಿಲ್ಲದೇನೆ, ನಂಬರ್ಸ್ ಸಹ ಕಲಿತುಬಿಟ್ವಿ. ವರ್ಷ ಕಳೆದಂತೆ, ಜನಸಮೂಹ ಜಾಸ್ತಿ ಆಯಿತು. ಮನೆ ಹೊರಗಡೆ, ಚಪ್ಪಲ್ಲಿಗಳನ್ನು ಇಡೊದಿಕ್ಕೆ ಸ್ಟಾಂಡ್ ತರಬೇಕಾಗಿ ಬಂತು.

ಸ್ಕೂಲ್ನಲ್ಲಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದೆ ನೆನಪಿಲ್ಲ. ಮೇ ನಲ್ಲಿ ಹುಟ್ಟಿದ್ನಲ್ಲ, ಆವಾಗ ಸಮ್ಮರ್ ಹಾಲಿಡೇಸ್. ಮನೆಯಲ್ಲೇ ನನ್ನ ಹುಟ್ಟು ಹಬ್ಬದ ಆಚರಣೆ. ಬೆಳಿಗ್ಗೆ ಎದ್ದು, ವಿಧ ವಿಧವಾದ ಚಾಕ್ಲೇಟ್ ಗಳನ್ನ ಡಬ್ಬಿಯಲ್ಲಿ ಹಾಕಿಕ್ಕೊಂಡು ಮನೆ ಮನೆಗೆ ಓಡುತ್ತಿದ್ದೆ. ಕಾಲಿಂಗ್ ಬೆಲ್ ಹೊಡಿದು, ‘ಇವತ್ತು ನನ್ನ ಹ್ಯಾಪಿ ಬರ್ತ್‌ಡೇ ಚಾಕ್ಲೇಟ್ ತೊಗೊಳ್ಳಿ’ ಅಂತ ಹೇಳುತ್ತಿದೆ. ಇನ್ನೂ ಅಂಕಲ್, ಆಂಟೀ ಕೆನ್ನೆ ಚಿವುಟಂಗಿಲ್ಲ, ‘ಬೇರೆ ಮನೆಗಳಿಗೆ ಹೋಗ್ಬೇಕು, ಬರ್ತೀನಿ’ ಅಂತ ಅಲ್ಲಿಂದ ಓಡಿ ಗೆಳೆಯರನ್ನ ಮನೆಗೆ ಬರಮಾಡಿಕೊಳ್ಳುತಿದ್ದೆ.

ಸ್ಕೂಲ್ ಶುರುವಾಗಿದ್ದೆ ತಡ ಗೆಳೆಯರಿಗೆ ಕಾಫೀಬೈಟ್, ಪೊಪ್ಪಿನ್ಸ್ ಚಾಕ್ಲೇಟ್ ಕೊಡುವ ಕಾತುರ. ಮೊದಲಿಗೆ ನಮ್ಮ ಮಿಸ್, “Students, today Shiva (ನಿಮ್ಮ ಹೆಸರು ಅಂತ ಅಂದು ಕೊಳ್ಳಿ) is celebrating his birthday. Let us all wish him a very happy birthday”. ಇನ್ನೂ ಬರ್ತ್‌ಡೇ ಸಾಂಗ್ ಶುರು. ಚೂರು ಸಿಂಕ್ ಆಗುತ್ತಿರಲಿಲ್ಲ. ಒಬ್ಬ ಹ್ಯಾಪೀ ಅಂತ ಹೇಳ್ತಿದ್ರೆ, ಇನ್ನೊಬ್ಬ ಬರ್ತ್‌ಡೇ ಅಂತ ಹೇಳುತ್ತಿದ್ದ. ಹಾಡೆಲ್ಲ ಮುಗಿದ ನಂತರ, ಚಪ್ಪಾಳೆಯ ಸುರಿಮಳೆ. ಸೆಂಟರ್ ಸ್ಟೇಜ್ ನಲ್ಲಿ ಇರೋ ನನಗೆ ಒಂಥರಾ ಆನಂದ. ಪಕ್ಕದಲ್ಲೇ ಕೂತಿರೊ ಕ್ಲಾಸ್‌ಮೇಟ್ ಜೊತೆ ಚಾಕ್ಲೇಟ್ ವಿತರಣೆ. ಬರ್ತ್‌ಡೇ ನನ್ನದು, ಚಾಕ್ಲೇಟ್ ಕೊಡುವುದು ಅವನು. ಆವಾಗ್ಲೇ ಫ್ರೆಂಡ್‌ಶಿಪ್ ಅನ್ನೋದು ತಿಳಿತ ಬಂತು.

ಬರ್ತ್‌ಡೇ ಅಂದ ಮೇಲೆ ಗೆಳೆಯರು ಮನೆಗೆ ಬರುತ್ತಾರೆ, ಕೈತುಂಬ ಗಿಫ್ಟ್ ತರುತ್ತಾರೆ. ಅವರನ್ನ ಬರಿ ಕುರ್ಚಿ ಮೇಲೆ ಕುಳಿಸಿ ಕಳಿಸಿಬಿಟ್ಟರೆ ಸರಿಯೇ? ಖಂಡಿತ ಇಲ್ಲ. ನಮ್ಮ ಲೈಫ್ ಅಲ್ಲಿ ಸ್ವಲ್ಪ ಮ್ಯೂಸಿಕ್ ಬೇಕು ಅನಿಸಿತು. ರೇಡಿಯೋನಲ್ಲಿ ಪಾಸ್ ಅಂಡ್ ಪ್ಲೇ  ಬಟನ್ ಇದೆ ಅಂತ ಗೊತ್ತಾಗಿದ್ದೆ ತಡ, ಸ್ನೇಹಿತರ ಜೊತೆ ಗೂಡಿ ಮ್ಯೂಸಿಕಲ್ ಚೇರ್ ಆಡಿದ್ವಿ. ಗುಲಾಬ್ ಜಾಮೂನ್ ಬರ್ತ್‌ಡೇಯ ಸ್ಪೆಶಲ್ ಡಿಶ್. ಆಗಂತೂ ಯೋಚನೆ ಕಮ್ಮಿ, ಖುಷಿ ಜಾಸ್ತಿ. ದುಡ್ಡಿನ ಬಗ್ಗೆ ಅಂತೂ ಚಿಂತೆನೆ ಇರುತ್ತಿರಲಿಲ್ಲ ಬಿಡಿ.

ಇಲ್ಲಿಗೆ ಸ್ಕೂಲ್ ಲೈಫ್ ಮುಗೀತು. ಚಡ್ಡಿ ದೋಸ್ತಗಳು ದೂರವಾದರು.

ಕಾಲೇಜ್ ಲೈಫ್: ಕಾಲೇಜ್ ಲೈಫ್ ಗೆ ಸ್ಟೈಲಿಷ್ ಆಗಿ ಎಂಟ್ರೀ ಕೋಟ್ವಿ. ಬರ್ತ್‌ಡೇ ಸೆಲೆಬ್ರೇಶನ್ಸ್ ನ ವಿನೂತನ ರೀತಿಯಲ್ಲೇ ವೆಲ್‌ಕಮ್ ಮಾಡಿಕೊಂಡ್ವಿ. “ಟ್ರೀಟ್” ಎಂಬ ಪದ ಸೃಷ್ಟಿ ಆಗಿದ್ದೆ ಆವಾಗ. ಮನೆಗಿಂತ ಹೋಟೆಲ್, ರೆಸ್ಟೂರಂಟ್ಗಳಲ್ಲಿ ಊಟ, ಉಪಚಾರಗಳು ನಡಿಯುವ ಮೂಲಕ ಹೊಸ ಪೀಳಿಗೆಗೆ ಮಾದರಿ ಆದ್ವಿ. ಕೇಕ್ ಅಂತೂ ಮಿಸ್ ಆಗುತ್ತಿರಲಿಲ್ಲ. ತಿನ್ನೋದಲ್ಲದೆ, ಮುಖಕ್ಕೆ ಬಳಿಯಲುಬಹುದು ಅಂತ ಗೊತ್ತು ಮಾಡ್ಕೊಂಡ್ವಿ. ಗುಂಪು ಕಟ್ಟಿಕೊಂಡು ಬರ್ತ್‌ಡೇ ಹುಡುಗನನ್ನು ಎತ್ತಿ, ಎಲ್ಲರೂ ಜಾಡಿಸಿ ಒದೀಲು ಬಹುದು ಅಂತ ಒಬ್ಬನಿಂದ, ಇನ್ನೊಬ್ಬ ತಿಳಿದುಕೊಂಡಿದ್ದ. ‘ಬರ್ತ್‌ಡೇ ಬಂಪ್ಸ್’ ಅನ್ನೋದು ಕಾಲೇಜ್ ನ ದಿನಗಳಲ್ಲಿ ಅನುಸರಿಸಿಕೊಂಡು ಬಂದ ನಿಯಮ.

 ಎರಡು ವರ್ಷ PUC ಮುಗಿದಿದ್ದೇ ಗೊತ್ತಾಗಲಿಲ್ಲ, 4 ವರ್ಷ ಇಂಜಿನಿಯರಿಂಗ್ ಓದೋದಕ್ಕೆ ಸಜ್ಜಾಗಿದ್ವಿ.ಇಂಟರ್‌ನೆಟ್ ಯುಗ ಮುಂದುವರಿತಲೆ, ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್ಸ್ ಪಾಪ್ಯುಲರ್ ಆದವು. ಫೇಸ್ಬುಕ್, ಟ್ವಿಟರ್, ‘ಜೀಟಾಕ್’ ಗಳನ್ನು ಬಳ್ಸೋ ಜನ ಹೆಚ್ಚಾದರು. ಬರ್ತ್‌ಡೇಗಳಿಗೆ ಸೇರುವವರು ಕಮ್ಮಿ ಆದರು. ಮೆಸೇಜ್, ವ್ಹಾಟ್ಸಪ್ ಮೂಲಕಾನೆ ಶುಭ ಕೋರಿದರು. ಬಜೆಟ್ನಲ್ಲಿ ಬರ್ತ್‌ಡೇ  ಸೆಲೆಬ್ರೇಟ್ ಮಾಡಬೇಕಾಗಿ ಬಂತು. ಕೇಕ್ ಬೆಲೆ ಜಾಸ್ತಿ ಆಯಿತು. ಕೆಲವೊಮ್ಮೆ ಇಂಜಿನಿಯರಿಂಗ್ ಪುಸ್ತಕಗಳನ್ನು ಮಾರಿ ಗಿಫ್ಟ್ ಕೊಳ್ಳೋಕೆ ಹಣ ಸೇರಿಸಬೇಕಾಗಿ ಬಂತು. ಇಲ್ಲಿ ವಾಸ್ತವಕ್ಕೆ ತಕ್ಕಂತೆ ನಾವು ನಡೆದುಕೊಂಡು ಹೋಗಬೇಕಾಗಿತ್ತು. ಏನೇ ಆಗಲಿ ಗೆಳೆಯನ ಬರ್ತ್‌ಡೇ ಸೆಲೆಬ್ರೇಟ್ ಮಾಡಲೇ ಬೇಕಿತ್ತು.

ಹಲವಾರು ಸಿಹಿ ನೆನಪುಗಳನ್ನು ಕಟ್ಟಿಕೊಟ್ಟ ಕಾಲೇಜ್ ಡೇಸ್ ಮುಗೀತು.

ಐ. ಟಿ. ಬಿ. ಟಿ. –  ಕ್ಯಾಂಪಸ್ ನಲ್ಲೇ ಸೆಲೆಕ್ಟ್ ಆದೆ, ಐ.ಟಿ.ಗೆ ಸೇರ್ಪಡೆಗೊಂಡೆ. ಬಹಳಷ್ಟು ಸ್ನೇಹದ ಬಳಗವನ್ನುಹೊಂದಿದ್ದರೂ, ಹೊಸ ಪರಿಚಯ, ನೂತನ ಹಾದಿ. ಆದರೆ ಅದೇ ಹುಮ್ಮಸ್ಸಿನಿಂದ ಬರ್ತ್‌ಡೇ ಸೆಲೆಬ್ರೇಟ್ ಮಾಡೋದು ಬಿಡಲಿಲ್ಲ. ರಾತ್ರಿ 12 ಗಂಟೆಗೆ ಮನೆಗೆ ಕೇಕ್ ತೊಗೊಂಡು ಹೋಗೋದು ನೂತನ ಪದ್ದತಿ ಆಯಿತು. ಬೆಳಿಗ್ಗೆ ಎದ್ದು ತಲೆ ಸ್ನಾನ ಮಾಡಿ, ಟೆಂಪಲ್ ಗೆ ಹೋಗೋದು ಹಿಂದೂ ಧರ್ಮದ ಸಂಪ್ರದಾಯವಾಯಿತು.

ಬರ್ತ್‌ಡೇ ಅನ್ನೋದು ಎಲ್ಲರ ಜೀವನದಲ್ಲಿ ಒಂದು ಅವಿಸ್ಮರಣೀಯ ದಿನ! ಅಂದು ಬಯಸದೆ ಬರುವ ಕರೆಗಳು, ವ್ಹಾಟ್ಸಪ್ಪ್ ಹಾಗು ಫೇಸ್ಬೂಕ್ ಮೆಸೇಜ್ ಗಳು, ಸ್ನೇಹಿತರಿಂದ ಬರುವ ಗಿಫ್ಟ್‌ಗಳು…ಇವೆಲ್ಲವನ್ನೂ ನೋಡುತ್ತಿದ್ದರೆ ಪ್ರತಿ ದಿನ ಬರ್ತ್‌ಡೇ ಆಚರಿಸಿಕೊಳ್ಳಬೇಕು ಅಂತ ಅನಿಸೋದು ಅಂತೂ ನಿಜ ಕಣ್ರೀ. ಅಧಿಕಾರಿ ಆಗಬೇಕು ಅಂತ ಇಲ್ಲ ಅಥವಾ ಸಿನಿಮಾದಲ್ಲಿ ಹೀರೊ ಆಗಿ ನಟಿಸಬೇಕಾಗಿಯೂ ಇಲ್ಲ. ಬರ್ತ್‌ಡೇ ದಿನ ಒಂದೇ ಸಾಕು ಸೆಲೆಬ್ರಿಟಿಯಾಗಿ ಕಾಣಿಸಿಕೊಳ್ಳುವುದಕ್ಕೆ. ಏನಂತೀರಾ??

ಬರ್ತ್‌ಡೇ ಗಳು ನಡೆದುಕೊಂಡು ಬಂದಿದ್ದೆ ಹೀಗೊ ಅಥವಾ ನಾವು ನಡೆದಂತೆ ಅದು ಬದಲಾಗುತ್ತಾ ಹೋದವೋ ತಿಳಿಯುತ್ತಿಲ. ಒಟ್ನಲ್ಲಿ ಪ್ರತಿ ವರ್ಷ ಕೇಕ್ ಕಟ್ ಮಾಡಿ ಎಲ್ಲರ ಜೊತೆ ಸೇರಿ ಸಂಭ್ರಮಿಸುವ ಆ ಕ್ಷಣ ಇದ್ಯಲ್ಲ, ಸಿಂಪ್ಲಿ ಮ್ಯಾಜಿಕಲ್ ಕಣ್ರೀ. ಹೃದಯದಲ್ಲಿ ಸವಿ ನೆನಪಾಗಿ ಉಳಿದುಬಿಡುತ್ತೆ.

“ಅಯ್ಯೋ! ದಿಲ್ ತೋ ಬಚ್ಚಾ ಹೈ ಜೀ! ಬರ್ತ್‌ಡೇ ಸೈಕಲ್ ಏರಿ ಇನ್ನೊಂದು ರೌಂಡ್ ಹೋಗೋಣ ಜೀ??”

1 COMMENT

Leave a Reply