ಕತಾರ್ ನಲ್ಲಿ ಮೋದಿ ಬಿಸಿನೆಸ್, ಮತ್ತೆ ಜಾಟ್ ಮೀಸಲು ಹೋರಾಟ, ಮಥುರಾ ಗಲಭೆ ಗುಂಪಿನ ನಾಯಕ ಮೃತ, ಮಠ ಗಲಾಟೆ…

ಡಿಜಿಟಲ್ ಕನ್ನಡ ಟೀಮ್:

  • ಕತಾರ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಸೃಷ್ಟಿಸಿರುವ ಬಂಡವಾಳ ಹೂಡಿಕೆ ಸ್ನೇಹಿ ಅವಕಾಶಗಳನ್ನು ಬಳಸಿಕೊಳ್ಳುವಂತೆ ಅಲ್ಲಿನ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. ಪ್ರವಾಸದ ಎರಡನೇ ದಿನ ಕತಾರ್ ಉದ್ಯಮಿಗಳ ಜತೆ ಚರ್ಚಿಸಿದ ಮೋದಿ, ಕಳೆದ ಎರಡು ವರ್ಷಗಳಲ್ಲಿ ಸರ್ಕಾರ ಉದ್ಯಮಿಗಳಿಗೆ ಕಲ್ಪಿಸಿರುವ ಅವಕಾಶಗಳನ್ನು ವಿವರಿಸಿದ್ದಾರೆ. ವಿದೇಶಿ ನೇರ ಬಂಡವಾಳ ಹೂಡಿಕೆಗೆ ಈ ಹಿಂದೆ ಇದ್ದ ನಿಯಮಗಳನ್ನು ಬದಲಿಸಲಾಗಿದ್ದು, ಸುಲಭ ಮಾರ್ಗ ಕಲ್ಪಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಮನವರಿಕೆ ಮಾಡಿದ್ದಾರೆ. ರೈಲ್ವೇ, ಭದ್ರತೆ, ತಯಾರಿಕೆ, ಆಹಾರ ಉತ್ಪನ್ನ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಲಭ್ಯವಿರುವ ಅವಕಾಶದ ಬಗ್ಗೆ ಉದ್ಯಮಿಗಳೊಂದಿಗೆ ಚರ್ಚಿಸಿದ್ದಾರೆ. ದೋಹಾದಲ್ಲಿ ಭಾರತೀಯ ಕೆಲಸಗಾರರ ಜತೆ ಬೆರೆತು, ಉಪಾಹಾರ ಸ್ವೀಕರಿಸಿದ್ದು ಆಪ್ತಕ್ಷಣಗಳಲ್ಲಿ ಒಂದಾಗಿತ್ತು.

 

  • ಮೀಸಲಾತಿ ಕುರಿತಂತೆ ಹರ್ಯಾಣದಲ್ಲಿ ತಣ್ಣಗಾಗಿದ್ದ ಜಾಟ್ ಸಮುದಾಯದ ಹೋರಾಟ ಮತ್ತೆ ಜೀವ ಪಡೆದುಕೊಂಡಿದೆ. ಹೋರಾಟ ಆರಂಭವಾಗಿರುವ ಬೆನ್ನಲ್ಲಿ ಹರ್ಯಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಪ್ಯಾರಾಮಿಲಿಟರಿ ಸಿಬ್ಬಂದಿ ನಿಯೋಜಿಸಲಾಗಿದೆ. ಇತ್ತೀಚೆಗೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಜಾಟ್ ಸಮುದಾಯಕ್ಕೆ ನೀಡಿದ್ದ ಮೀಸಲಾತಿ ನಿರ್ಧಾರಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಇದರ ಬೆನ್ನಲ್ಲಿ ಅಖಿಲ ಭಾರತೀಯ ಜಾಟ್ ಸಮಿತಿಯು ‘ಜಾಟ್ ನ್ಯಾಯ ರಾಲಿ’ ಅನ್ನು ರಾಜ್ಯಾದುದ್ದಕ್ಕು ಹಮ್ಮಿಕೊಂಡಿದೆ. ಫೆಬ್ರವರಿಯಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಹೀಗಾಗಿ ಈ ಬಾರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ 144 ನೇ ಸೆಕ್ಷನ್ ಜಾರಿಗೊಳಿಸಲಾಗಿದೆ. ಪ್ರತಿಭಟನಾಕಾರರು ಈ ಬಾರಿ ನಗರ ಪ್ರದೇಶಗಳ ಬದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಹೋರಾಟ ಹಮ್ಮಿಕೊಂಡಿರುವ ಬಗ್ಗೆ ವರದಿಯಾಗಿವೆ.
  • ಮಥುರಾದ ಜವಾಹರ್ ಬಾಘ್ ನಲ್ಲಿ ನಡೆದ ಪೊಲೀಸ್ ಹಾಗೂ ಅಕ್ರಮ ನಿವಾಸಿಗಳ ನಡುವಣ ಸಂಘರ್ಷದಲ್ಲಿ ಸ್ವಾಧೀನ್ ಭಾರತ ಸಂಘಟನೆಯ ಮುಖ್ಯಸ್ಥ ರಾಮ್ ಬ್ರಿಕ್ಷ ಯಾದವ್ ಮೃತಪಟ್ಟಿರುವುದು ಈಗ ಬೆಳಕಿಗೆ ಬಂದಿದೆ. ಸಂಘರ್ಷಣೆಯ ವೇಳೆ ಇವರು ಬೆಂಕಿಗೆ ಆಹುತಿಯಾಗಿದ್ದು, ಇವರ ದೇಹವನ್ನು ಅವರ ಹಿಂಬಾಲಕರು ಗುರುತಿಸಿದ್ದಾರೆ ಎಂದು ಪೊಲೀಸರು ಅಧಿಕೃತವಾಗಿ ಹೇಳಿದ್ದಾರೆ. ಇದೇ ವೇಳೆ ಪೊಲೀಸರು ಅಕ್ರಮ ನಿವಾಸಿಗಳ ವಿರುದ್ಧ ಈವರೆಗೂ ಒಟ್ಟು 45 ಪ್ರಕರಣ ದಾಖಲಿಸಿದ್ದು, 3 ಸಾವಿರ ಮಂದಿ ಆರೋಪಿಗಳಾಗಿದ್ದಾರೆ. ಇನ್ನು ಜವಾಹರ್ ಬಾಘ್ ನಲ್ಲಿನ ಕಾರ್ಯಾಚರಣೆ ಸೋಮವಾರವೂ ಮುಂದುವರಿಯಲಿದೆ. ಪರಿಸ್ಥಿತಿ ನಿಭಾಯಿಸುವ ಸಂದರ್ಭದಲ್ಲಿ ಹೊಂದಾಣಿಕೆ ಕೊರತೆ ತೋರಿದ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ಮತ್ತು  ಎಸ್ಪಿ ಅವರನ್ನು ಅಮಾನತುಗೊಳಿಸಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ನಿರ್ಧರಿಸಿದ್ದಾರೆ. ಈ ಪ್ರಕರಣದ ಕುರಿತ ತನಿಖೆಯನ್ನು ಅಲಿಘರ್ ವಿಭಾಗೀಯ ಆಯುಕ್ತರಾದ ಚಂದ್ರಕಾಂತ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂಬ ಮಾಹಿತಿಗಳು ಬಂದಿವೆ. ಗುರುವಾರ ನಡೆದ ಈ ಘರ್ಷಣೆಯಲ್ಲಿ ಮೃತ ಪಟ್ಟವರ ಸಂಖ್ಯೆ 29 ಕ್ಕೆ ಏರಿದೆ.
  • ಸಮಾನ ಮನಸ್ಕ ಹವ್ಯಕರ ವೇದಿಕೆಯು ಶಿವಮೊಗ್ಗದ ಸಾಗರದಲ್ಲಿ ರಾಮಚಂದ್ರಾಪುರ ಮಠದ ಸ್ವಾಮೀಜಿ ರಾಘವೇಶ್ವರರ ಪೀಠತ್ಯಾಗ ಆಗ್ರಹಿಸಿ ನಡೆಸಿದ್ದ ಸಭೆ ವೇಳೆ ಸ್ವಾಮೀಜಿ ಸಮರ್ಥಕರು ಮತ್ತು ವಿರೋಧಿಗಳ ನಡುವೆ ಭಾರಿ ಸಂಘರ್ಷ ಏರ್ಪಟ್ಟಿತು. ಪ್ರತಿಭಟನೆ ಸ್ಥಳದಲ್ಲಿ ಚಪ್ಪಲ್ಲಿ, ಪೊರಕೆ ಹಿಡಿದು ಘರ್ಷಣೆಯಲ್ಲಿ ನಿರತರಾಗಿರುವ ದೃಶ್ಯಗಳು ಸುದ್ದಿವಾಹಿನಿಗಳಲ್ಲಿ ಭಿತ್ತರಗೊಂಡಿವೆ.

—–

ಭಾನುವಾರ ವಿಶ್ವ ಪರಿಸರ ದಿನ. ನಗರದಲ್ಲಿ ಆ ಪ್ರಯುಕ್ತ ಹಲವು ಕಾರ್ಯಕ್ರಮಗಳು. ಕಂಠೀರವ ಕ್ರೀಡಾಂಗಣದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಿಡ ನೆಟ್ಟರು. ಲಾಲ್ ಭಾಗ್ ನಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಗಿಡ ನೆಟ್ಟರು.

Chief Minister, Siddaramaiah planting tree on the Ocassion of Wo

Environtment Day- ananth

Leave a Reply