ಕೋನಾರ್ಕ ಹೇಗೆ 2 ಸಾವಿರ ವರ್ಷ ಹಳೆದಾಗುತ್ತೆ, ಟ್ವೀಟಿಗರು ವ್ಯಂಗ್ಯ ಮಾಡಿದ ಮೋದಿಯವರ ಮಿನಿಸ್ಕರ್ಟ್ ಮಹಿಳೆ ಕತೆ

 

ಡಿಜಿಟಲ್ ಕನ್ನಡ ಟೀಮ್:

ಭಾರತಕ್ಕೆ ಸೇರಿದ್ದ 200 ಸಾಂಸ್ಕೃತಿಕ ಸಂಪತ್ತನ್ನು ಅಮೆರಿಕ ಹಿಂತಿರುಗಿಸಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸುತ್ತ ಮಿನಿಸ್ಕರ್ಟ್ ಲೇಡಿಯ ಕತೆಯೊಂದನ್ನು ಹೇಳಿದ್ದರು. ಇದರಲ್ಲಿನ ಐತಿಹಾಸಿಕ ತಥ್ಯದ ದೋಷ ಹುಡುಕಿರುವ ಟ್ವೀಟಿಗರು ಮೋದಿಯವರನ್ನು ಲೇವಡಿ ಮಾಡಿದ್ದಾರೆ.

‘ವ್ಯಾಪಾರ ಮಾಡುವವರಿಗೆ ಇದು ಅರಬ್ ಡಾಲರುಗಳಲ್ಲಿ ಅಳೆಯುವ ಸರಕಾಗಿರಬಹುದು. ಆದರೆ ನಮಗೆ ಇವು ನಮ್ಮ ಪಾಲಿಗೆ ನಮ್ಮ ಸಾಂಸ್ಕೃತಿಕ ಗುರುತು ಹಾಗೂ ಭವ್ಯ ಇತಿಹಾಸವನ್ನು ಸಾರುವಂಥವುಗಳು. ಇಂದು ನಾವು ಸ್ಕರ್ಟ್ ಧರಿಸಿ ಕೈಯಲ್ಲಿ ಪರ್ಸ್ ಹಿಡಿದ ಆಧುನಿಕ ಮಹಿಳೆಯನ್ನು ಕಾಣುತ್ತೇವೆ. ಆದರೆ 2000 ವರ್ಷಗಳ ಹಿಂದೆಯೇ ಕೋನಾರ್ಕದ ದೇವಾಲಯ ಆವರಣದಲ್ಲಿ ಅಂಥದೊಂದು ಚಿತ್ರವನ್ನು ನಮ್ಮ ಶಿಲ್ಪಿಗಳು ಕಲ್ಲಿನಲ್ಲಿ ನಿರ್ಮಿಸಿದ್ದರು’ ಇದು ಪ್ರಧಾನಿ ಮಾತು. ಆದರೆ ಕೋನಾರ್ಕ ದೇವಾಲಯ 13ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಅದು ಹೇಗೆ ತಾನೇ 2000 ವರ್ಷಗಳಷ್ಟು ಹಳೆಯದಾಗುತ್ತೆ ಅನ್ನೋದು ಟ್ವೀಟಿಗರ ಪ್ರಶ್ನೆ. ಅಲ್ಲದೇ, ಕೈಯಲ್ಲಿ ಚೀಲ ಹಿಡಿದ ಮಹಿಳೆಯ ಭಂಗಿ ಇರೋದಾದರೂ ಎಲ್ಲಿ ಅಂತಲೂ ಶಂಕೆ ಎತ್ತಿದ್ದಾರೆ.

Leave a Reply