56 ಔಷಧಗಳ ಬೆಲೆ ಇಳಿದಿದೆ, ಆದ್ರೆ ಸಾಮಾನ್ಯ ಬಳಕೆ ಮದ್ದಿನಿಂದಲೇ ಪರಿಹಾರ ಭರಿಸಲಾಗಿದೆ!

ಪ್ರಾತಿನಿಧಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಕೇಂದ್ರ ಸರ್ಕಾರ ಸೆಸ್, ಗೂಗಲ್ ಟ್ಯಾಕ್ಸ್ ಇತ್ಯಾದಿ ತೆರಿಗೆಗಳ ಮೂಲಕವೇ ಶಾಕ್ ಕೊಡುತ್ತಿತ್ತು. ಈ ನಡುವೆ ಈಗೊಂದು ಸಮಾಧಾನದ ಸುದ್ದಿ. ಕ್ಯಾನ್ಸರ್, ಸಕ್ಕರೆ ಕಾಯಿಲೆ, ಬ್ಯಾಕ್ಟೀರಿಯಾ ಸೋಂಕು ಮತ್ತು ರಕ್ತದ ಒತ್ತಡಗಳಿಗೆ ಸಂಬಂಧಿಸಿದ 56 ಔಷಧಗಳ ಬೆಲೆಯನ್ನು ಸರ್ಕಾರ ನಿಯಂತ್ರಿಸುವ ನಿರ್ಧಾರ ತೆಗೆದುಕೊಂಡಿರುವುದರಿಂದ, ಅವುಗಳ ಬೆಲೆಯಲ್ಲಿ ಸರಾಸರಿ  ಶೇ. 25ರಷ್ಟು ಇಳಿಕೆ ಆಗಲಿದೆ.

ಅಂದರೆ ಕೆಲವು ಔಷಧಗಳು ಶೇ. 10-15ರವರೆಗೆ ಇನ್ನು ಕೆಲವು ಶೇ. 45-50ರವರೆಗೂ ಬೆಲೆ ಇಳಿಕೆಗೆ ಒಳಪಡುತ್ತವೆ.

ರಾಷ್ಟ್ರೀಯ ಫಾರ್ಮಾಸೂಟಿಕಲ್ ಬೆಲೆ ನಿಶ್ಚಯ ಪ್ರಾಧಿಕಾರ (ಎನ್ ಪಿ ಪಿ ಎ) ತೆಗೆದುಕೊಂಡಿರುವ ಈ ನಿರ್ಧಾರ ಬಯೊಕಾನ್, ಸಿಪ್ಲಾ, ನೊವಾರ್ಟಿಸ್ ಸೇರಿದಂತೆ ಹಲವು ಔಷಧ ಕಂಪನಿಗಳು ಇದರ ಪರಿಣಾಮ ಎದುರಿಸಲಿವೆ. ಆದರೆ, ರೋಗಿಗಳು ನುಂಗಬೇಕಾದ ಕಹಿ ಅಂಶವೂ ಇಲ್ಲಿದೆ. ಅದೆಂದರೆ ಸಾಮಾನ್ಯ ಬಳಕೆಯಲ್ಲಿರುವ ಗ್ಲುಕೋಸ್ ಮತ್ತು ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ ಗಳ ಬೆಲೆ ಹೆಚ್ಚಾಗಲಿದೆ. ಅಂದರೆ ವ್ಯಾಪಕ ಬಳಕೆಯಲ್ಲಿರುವದರಿಂದ ಹೆಚ್ಚು ಹಣ ಪಡೆದು ಮೇಲ್ಮಟ್ಟದ ದುಬಾರಿ ಔಷಧಗಳ ಬೆಲೆ ಇಳಿಸುವ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಯೂ ಹುಟ್ಟುತ್ತಿದೆ.

Leave a Reply