ಹೊಸ ವಿಮಾನಯಾನ ನೀತಿ, ನೀವು ತಿಳಿಯಬೇಕಿರುವ 3 ಸಂಗತಿ

ಡಿಜಿಟಲ್ ಕನ್ನಡ ಟೀಮ್:

ದೇಶಕ್ಕೊಂದು ಹೊಸ ವಿಮಾನಯಾನ ನೀತಿ ಬೇಕು ಎಂಬುದು ಹತ್ತು ವರ್ಷಗಳಿಂದ ಚಾಲ್ತಿಯಲ್ಲಿದ್ದ ಮಾತು. ಈಗ ಅದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯಲ್ಲಿ ಗಮನಿಸಬೇಕಾದ ಮುಖ್ಯಾಂಶಗಳಿವು.

– ಮೂವತ್ತು ನಿಮಿಷದ ವಿಮಾನಯಾನಕ್ಕೆ ₹1200 ಕ್ಕಿಂತ ಹೆಚ್ಚು ದರ ವಿಧಿಸುವಂತಿಲ್ಲ ಹಾಗೂ 60 ನಿಮಿಷದ ಫ್ಲೈಟಿಗೆ ₹2500 ಗರಿಷ್ಠ ಮಿತಿ. ಇದರಿಂದ  ಅನುಭವಿಸಬಹುದಾಗಿರುವ ನಷ್ಟದ ಶೇ. 80ರಷ್ಟನ್ನು ಕೇಂದ್ರ ಸರ್ಕಾರ ತುಂಬಿಕೊಡುವ ಪ್ರಸ್ತಾವವೂ ಇದೆ.

– ವಿಮಾನಯಾನ ಕಂಪನಿಗಳು ವಿದೇಶಿ ವಿಭಾಗದಲ್ಲಿ ಹಾರಾಟ ನಡೆಸುವುದಕ್ಕೆ ಮೊದಲಿದ್ದ ನಿಯಮವೆಂದರೆ ಅದು 20 ವಿಮಾನಗಳನ್ನು ಹೊಂದಿರಬೇಕು ಹಾಗೂ ದೇಶದ ಒಳಗೆ 5 ವರ್ಷ ಸೇವೆ ಒದಗಿಸಿರಬೇಕು ಎಂಬುದು. ಈಗ ಆ 5 ವರ್ಷದ ಮಿತಿ ತೆಗೆದು 20 ವಿಮಾನಗಳಿದ್ದರೆ ಸಾಕು ಎಂದು ನೀತಿ ಬದಲಾಯಿಸಿರುವುದರಿಂದ ಹೆಚ್ಚು ನವೋದ್ದಿಮೆಗಳು ಈ ವಿಭಾಗ ಪ್ರವೇಶಿಸುವುದಕ್ಕೆ ಅನುಕೂಲ ಒದಗಿದೆ.

– ಪ್ರಾದೇಶಿಕ ಸಂಪರ್ಕಜಾಲ ಬಲಪಡಿಸುವುದಕ್ಕೆ ವಿಮಾನ ಟಿಕೆಟ್ ಗಳಿಂದ ಶೇ. 2ರ ಲೆವಿ ಸಂಗ್ರಹಿಸಿ, ಪ್ರಾದೇಶಿಕ ಮಾರ್ಗಗಳಲ್ಲಿ ವಿಮಾನಸೇವೆಗೆ ಕಂಪನಿಗಳಿಗೆ ಉತ್ತೇಜಿಸುವ ನಿರ್ಧಾರ.

 ಹೊಸ ನೀತಿ ಪ್ರಕಟವಾಗುತ್ತಿದ್ದಂತೆ ವಾಯುಯಾನ ವಲಯದ ಷೇರುಗಳಲ್ಲಿ ಶೇ. 5ರ ಏರಿಕೆ ದಾಖಲಾಗಿದೆ.

Leave a Reply