ವಿದೇಶಿ ದುಡ್ಡಲ್ಲಿ ನ್ಯಾಪ್ಕಿನ್ ಖರೀದಿಸಿದ್ದ ತಿಸ್ತಾ ಎನ್ಜಿಒ ನೋಂದಣಿ ರದ್ದು

 

ಡಿಜಿಟಲ್ ಕನ್ನಡ ಟೀಮ್:

ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡರ ಸಬರಂಗ್ ಸ್ವಯಂಸೇವಾ ಸಂಸ್ಥೆಯ ನೋಂದಣಿಯನ್ನು ಗುರುವಾರ ಗೃಹ ಸಚಿವಾಲಯ ರದ್ದುಪಡಿಸಿದೆ.

‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ದೇಣಿಗೆ ಹಣವನ್ನು ಅನ್ಯಕಾರ್ಯಗಳಿಗೆ ಬಳಸಲಾಗಿದೆ. 2,50,000 ಡಾಲರ್ ಹಣವನ್ನು ಫೋರ್ಡ್ ಫೌಂಡೇಶನ್ ಮೂಲಕ ಸಬರಂಗ್ ಪಡೆದುಕೊಂಡಿತ್ತು. ಶೈಕ್ಷಣಿಕ ಮತ್ತು ಸಾಮಾಜಿಕ ಸಂಘಟನೆ ಎಂದು ನೋಂದಣಿ ಮಾಡಿಸಿಕೊಂಡಿರುವ ಸಬರಂಗ್ ಸ್ವಯಂಸೇವಾಸಂಸ್ಥೆಯು ಈ ಹಣವನ್ನು ಮಾಧ್ಯಮ ಲಾಬಿಗೆ ಬಳಸಿಕೊಂಡಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಪ್ರಕಾರ ದೇಣಿಗೆ ಹಣದ ಶೇ. 50ಕ್ಕಿಂತ ಹೆಚ್ಚು ಭಾಗ ಆಡಳಿತಾತ್ಮಕ ವೆಚ್ಚಕ್ಕೆ ವ್ಯಯಿಸುವಂತಿಲ್ಲ. ಇದನ್ನು ಇಲ್ಲಂಘಿಸಿರುವ ಸಬರಂಗ್ ದೇಣಿಗೆ ಮೊತ್ತದ ಶೇ. 64 ಭಾಗವನ್ನು ಆಡಳಿತಾತ್ಮಕ ವೆಚ್ಚಕ್ಕೆ ಖರ್ಚು ಮಾಡಿದೆ.’ ಎಂದು ಗೃಹ ಸಚಿವಾಲಯದ ವರದಿ ಹೇಳಿದೆ.

ತೀಸ್ತಾ ಸೆತಲ್ವಾಡ್ ಅವಿರತವಾಗಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡು ಬಂದಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಕಳೆದ ಸೆಪ್ಟೆಂಬರ್ ನಲ್ಲಿ ತೀಸ್ತಾರ ಸ್ವಯಂಸೇವಾ ಸಂಸ್ಥೆಯನ್ನು ಗೃಹ ಸಚಿವಾಲಯ ಅಮಾನತಿನಲ್ಲಿಟ್ಟಾಗ ಇದು ರಾಜಕೀಯ ವಿರೋಧಿ ಕ್ರಮ ಎಂಬ ಪ್ರತಿರೋಧವೂ ಬಂತು. ಆದರೆ ಅಮಾನತಿನ ನಂತರ, ಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವ ಎಲ್ಲ ಅವಕಾಶಗಳನ್ನೂ ಕೊಟ್ಟು ಇದೀಗ ನಿಯಮ ಉಲ್ಲಂಘನೆ ಎಲ್ಲೆಲ್ಲಿ ಆಗಿದೆ ಎಂಬ ಉದಾಹರಣೆಗಳೊಂದಿಗೆ ಪರವಾನಗಿ ರದ್ದುಗೊಳಿಸಲಾಗಿದೆ. ಅರ್ಥಾತ್ ಇನ್ನು ತೀಸ್ತಾರ ಸಬರಂಗ್ ವಿದೇಶಿ ದೇಣಿಗೆ ಸ್ವೀಕರಿಸುವಂತಿಲ್ಲ.

ಮೇಲಿನ ಮುಖ್ಯ ಕಾರಣಗಳೊಂದಿಗೆ, ಸಬರಂಗದ ನಿರ್ದೇಶಕರಾದ ತೀಸ್ತಾ ಸೆತಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ವಿದೇಶಿ ದೇಣಿಗೆಯನ್ನು ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಂಡಿರುವ ಬಗ್ಗೆಯೂ ಸಚಿವಾಲಯ ಆಕ್ಷೇಪಿಸಿದೆ. ದೇಣಿಗೆ ಹಣವನ್ನು ತೀಸ್ತಾ ಸೆತಲ್ವಾಡ್ ಸ್ಯಾನಿಟರಿ ನ್ಯಾಪ್ಕಿನ್ ತೆಗೆದುಕೊಳ್ಳುವುದಕ್ಕೆ ಹಾಗೂ ಅವರ ಪತಿ ಕಿವಿ ಸ್ವಚ್ಛಗೊಳಿಸುವ ಹತ್ತಿಕಡ್ಡಿಗಳನ್ನು ಖರೀದಿಸುವುದಕ್ಕೆ ಬಳಸಿದ್ದರು ಎಂಬ ವಾಕ್ಯವೂ ಸಚಿವಾಲಯದ ಹೇಳಿಕೆಯಲ್ಲಿದೆ. ತೀಸ್ತಾ ಮತ್ತವರ ಪತಿಯ ಕ್ರೆಡಿಟ್ ಕಾರ್ಡ್ ಪಾವತಿಯನ್ನೂ ಸಬರಂಗ್ ಟ್ರಸ್ಟ್ ಹಣದಲ್ಲಿ ಮಾಡಲಾಗಿದೆ ಎಂದು ಹೇಳಿದೆ.

ಕೇಂದ್ರ ಸರ್ಕಾರವು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿರುವ ಸ್ವಯಂಸೇವಾ ಸಂಸ್ಥೆಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿರುವುದಕ್ಕೆ ಇದೊಂದೇ ಉದಾಹರಣೆ ಅಲ್ಲ. ಓದಿ… ಹಳೆಓದು-ಮರುಓದು: ‘ಅಸಹಿಷ್ಣುತಾ ಪರ್ವ’ ಮತ್ತೆ ಆರಂಭವಾದೀತು, ಏಕಂದ್ರೆ ಇಂದಿರಾ ಜೈಸಿಂಗ್ ಎನ್ಜಿಒಗೆ ಹೋಗಿದೆ ನೋಟೀಸು!

1 COMMENT

Leave a Reply