ಗುಲ್ಬರ್ಗ್ ಹತ್ಯೆ- ದಂಗೆ, 11 ಮಂದಿಗೆ ಜೀವಾವಧಿ ಶಿಕ್ಷೆ

Only a few turned up to pay homage to their loved ones who were killed this day at the Gulberg Society in Ahmedabad in the post Godhra riots of 2002, on Friday, marking the 12th anniversary. Express Photo by Javed Raja. 28.02.2014.

ಡಿಜಿಟಲ್ ಕನ್ನಡ ಟೀಮ್:

ಗುಜರಾತ್ ನ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ 2002, ಫೆ.28 ರಂದು ನಡೆದ ಗಲಭೆಯ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಗೋಧ್ರಾ ಹತ್ಯಾಕಾಂಡದ ಬೆನ್ನಲ್ಲಿ ನಡೆದ ಈ ಗಲಭೆ, ಕಾಂಗ್ರೆಸ್ ನ ಇಶಾನ್ ಜಫ್ರಿ ಸೇರಿದಂತೆ 69 ಮಂದಿ ಪ್ರಾಣ ಬಲಿ ಪಡೆದಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಅಹಮದಾಬಾದ್ ನ್ಯಾಯಾಲಯ ಕಳೆದ ವಾರವಷ್ಟೇ 66 ಆರೋಪಿಗಳ ಪೈಕಿ 24 ಮಂದಿಯನ್ನು ಅಪರಾಧಿಗಳು ಎಂದು ತೀರ್ಪು ನೀಡಿತ್ತು. ಈ ಅಪರಾಧಿಗಳಿಗೆ ಶುಕ್ರವಾರ ಶಿಕ್ಷೆ ಪ್ರಮಾಣ ವಿಧಿಸಿದ್ದು, 11 ಮಂದಿಗೆ ಜೀವಾವಧಿ ಶಿಕ್ಷೆ ನೀಡುವುದರ ಜತೆಗೆ, ಉಳಿದ 12 ಅಪರಾಧಿಗಳಿಗೆ ಕಡಿಮೆ ಪ್ರಮಾಣದ ತಪ್ಪಿನ ಆಧಾರದ ಮೇಲೆ 7 ವರ್ಷ ಜೈಲುವಾಸದ ಶಿಕ್ಷೆ ನೀಡಿದೆ.

66 ಆರೋಪಿಗಳ ಪೈಕಿ 36 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ನ್ಯಾಯಾಲಯ ನಿರಪರಾಧಿ ಎಂದು ಪರಿಗಣಿಸಿತ್ತು. ಉಳಿದಂತೆ ಐವರು ವಿಚಾರಣೆ ಅವಧಿಯಲ್ಲಿ ಮೃತಪಟ್ಟಿದ್ದು, ಒಬ್ಬ ವ್ಯಕ್ತಿ ಕಾಣೆಯಾಗಿದ್ದಾನೆ. ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಇಲ್ಲಿ ಓದಬಹುದು.

Leave a Reply