ರಕ್ಷಣಾ ವಿಮಾನ ವಿಭಾಗದಲ್ಲಿ ಸ್ವದೇಶಿ ಅಧ್ಯಾಯದ ಮುನ್ನುಡಿ, ಎಚ್ಎಎಲ್ ನಲ್ಲಿ ಎಚ್ ಟಿಟಿ-40 ತರಬೇತಿ ಜೆಟ್ ಪ್ರಾಯೋಗಿಕ ಹಾರಾಟ

 

ಡಿಜಿಟಲ್ ಕನ್ನಡ ಟೀಮ್:

ಹಿಂದೂಸ್ಥಾನ್ ಟರ್ಬೊ ಟ್ರೈನರ್-40 (ಎಚ್ ಟಿಟಿ-40) ಜೆಟ್ ಶುಕ್ರವಾರ ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿ ಶುಕ್ರವಾರ ಪರೀಕ್ಷಾರ್ಥ ಹಾರಾಟ ನಡೆಸಿದೆ. ಈ ಹಾರಾಟದ ವೇಳೆ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕರ್ ಉಪಸ್ಥಿತರಿದ್ದು, ಈ ಜೆಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

2,800 ಕೆ.ಜಿ ತೂಕದ ಈ ಜೆಟ್ 950 ಎಸ್ಎಚ್ಪಿ ಕ್ಲಾಸ್ ಎಂಜಿನ್ ಹೊಂದಿದೆ. ಶೇ.80ರಷ್ಟು ಸ್ವದೇಶಿ ನಿರ್ಮಿತವಾಗಿದ್ದು, 90 ಭಾಗಗಳ ಪೈಕಿ 75 ಭಾಗಗಳನ್ನು ಸ್ಥಳೀಯ ಎಂಜಿನಿಯರ್ ಗಳೇ ನಿರ್ಮಿಸಿರುವುದು ಜೆಟ್ ನ ವಿಶೇಷ. ಇನ್ನು ಭಾರತೀಯ ವಾಯು ಸೇನೆ ಅಗತ್ಯಕ್ಕೆ ತಕ್ಕಂತೆ ಈ ತರಬೇತಿ ಜೆಟ್ ನಲ್ಲಿ ಶಸ್ತ್ರಗಳನ್ನು ಹೊತ್ತು ಸಾಗುವ ಅವಕಾಶ ಕಲ್ಪಿಸಲಾಗಿದೆ.

2013ರ ಆಗಸ್ಟ್ ನಲ್ಲಿ ಎಚ್ಎಎಲ್ ಆಂತರಿಕ ಧನ ಸಹಾಯದ ಮೂಲಕ ಈ ಜೆಟ್ ರೂಪುಗೊಂಡಿದ್ದು, ಕಳೆದ ವರ್ಷ ಮೇ ತಿಂಗಳಲ್ಲೇ ನಿರ್ಮಾಣವಾಗಿತ್ತು. ಒಂದು ವರ್ಷ ತಡವಾಗಿ ಮೊದಲ ಹಾರಾಟ ನಡೆಸಿದರೂ, ಈ ಜೆಟ್ ಯಶಸ್ವಿಯಾಗಿರುವುದು ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಈ ಮಾದರಿಯ ಸುಮಾರು 70 ಜೆಟ್ ನಿರ್ಮಾಣ ಮಾಡುವ ಗುರಿಯೂ ಇದೆ.

ಪರೀಕ್ಷಾರ್ಥ ಹಾರಾಟ ನಡೆಸಿದ ನಂತರ ಜೆಟ್ ಒಳಗೆ ಕೂತು ಪರೀಕ್ಷಿಸಿದ ಪರಿಕರ್, ಎಚ್ಎಎಲ್ ನ ಯುವ ಎಂಜಿನಿಯರ್ ಗಳ ಕಾರ್ಯಕ್ಕೆ ಪ್ರಶಂಸೆ ನೀಡಿದರು. ಇದು ‘ಮೇಕ್ ಇನ್ ಇಂಡಿಯಾ’ದ ಯಶಸ್ಸು ಅಂತಲೂ ಸಚಿವರು ಟ್ವೀಟ್ ಮಾಡಿದ್ದಾರೆ.

parikar

Central Minister for Defence, Manohar Parikar with others during

Central Minister for Defence, Manohar Parikar with others during

Leave a Reply