ರಾಜು ಶ್ರೀವಾತ್ಸವ್ ಹಾಸ್ಯದ ಜತೆಗೆ ಸ್ಫೂರ್ತಿದಾಯಕ ವಾರಾಂತ್ಯಕ್ಕೆ ಸಾಕ್ಷಿಯಾಯ್ತು ಆರ್ಸಿಸಿಯ ‘ಉಮೀದ್’ ಕಾರ್ಯಕ್ರಮ

‘ಉಮೀದ್’ ಕಾರ್ಯಕ್ರಮದಲ್ಲಿ ಜಿಎಂ ಸ್ವಿಚ್ಚಸ್ ನ ಜಯಪ್ರಕಾಶ್, ಪದಮ್ ಕಿಂಚಾ, ಪಿಜನ್ ಸಂಸ್ಥೆಯ ರಾಜೇಂದ್ರ ಗಾಂಧಿ ಹಾಗೂ ರಾಜಸ್ತಾನ ಕಾಸ್ಮೋ ಕ್ಲಬ್ ನ ಸದಸ್ಯರು

ಡಿಜಿಟಲ್ ಕನ್ನಡ ಟೀಮ್:

ಪಾರ್ಟಿ, ಹ್ಯಾಂಗೌಟ್, ಗೆಟ್ ಟು ಗೆದರ್, ಮೂವಿ… ಇವು ಬಹುತೇಕರು ಈ ವಾರಾಂತ್ಯ ಕಳೆದ ರೀತಿ. ಆದ್ರೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಭಾನುವಾರ ನಡೆದ ‘ಉಮೀದ್’ ಕಾರ್ಯಕ್ರಮ ಇವೆಲ್ಲಕ್ಕಿಂತ ಭಿನ್ನವಾಗಿತ್ತು. ಬಡ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಜತೆಗೆ ಖ್ಯಾತ ಸ್ಟ್ಯಾಂಡಿಂಗ್ ಕಾಮಿಡಿಯನ್ ರಾಜು ಶ್ರೀವಾತ್ಸವ್ ಹಾಸ್ಯದ ಮನರಂಜನೆಯಿಂದ ವಾರಾಂತ್ಯ ಪರಿಪೂರ್ಣವಾಯ್ತು.

ಜಿ.ಎಂ ಸ್ವಿಚ್ಚಸ್ ಪ್ರಾಯೋಜಕತ್ವದಲ್ಲಿ ರಾಜಸ್ಥಾನ್ ಕಾಸ್ಮೋ ಕ್ಲಬ್ ಆಯೋಜಿಸಿದ್ದ 11 ನೇ ವರ್ಷದ ಉಮೀದ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಾಲಾ ಬಡ ಮಕ್ಕಳಿಗೆ ಸಮವಸ್ತ್ರ, ಶೂ, ಸ್ಕೂಲ್ ಬ್ಯಾಗ್ ವಿತರಣೆ ಮಾಡಲಾಯಿತು. ಇದರೊಂದಿಗೆ ಈ ವರ್ಷ 10 ಸಾವಿರ ಮಕ್ಕಳಿಗೆ ಈ ನೆರವು ಲಭಿಸಿತು.

ಸಮವಸ್ತ್ರ ವಿತರಣೆ ನಂತರ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಗಾಯಕಿ ಶಿಲ್ಪಿ ಪೌಲ್ ಸಂಗೀತ ರಸಸಂಜೆ ಹಾಗೂ ರಾಜು ಶ್ರೀವಾಸ್ತವ್ ಹಾಸ್ಯ ಪ್ರೇಕ್ಷಕರನ್ನು ಮನರಂಜನೆಯ ಕಡಲಲ್ಲಿ ಮುಳುಗಿಸಿತು. ರಾಜು ಶ್ರೀವಾತ್ಸವ್ ಹಾಸ್ಯ ಚಟಾಕಿಯ ಆಯ್ದ ತುಣುಕುಗಳು ನಿಮಗಾಗಿ..

–      ಇಂತಹ ಸಭೆ ಸಮಾರಂಭದಲ್ಲಿ ಯಾರನ್ನು ಬೇಕಾದರು ಮಾತನಾಡಿಸಬಹುದು. ಮಕ್ಕಳ ತಂಟೆಗೆ ಮಾತ್ರ ಹೋಗಬಾರ್ದು. ಹೀಗೆ ಸಮಾರಂಭವೊಂದಕ್ಕೆ ಹೋಗಿದ್ದಾಗ ಅಲ್ಲಿ ಚಿಕ್ಕ ಹುಡುಗನನ್ನು ಮಾತಾಡಿಸಿದೆ. ಆಗ ಸಹಜವಾಗಿ ನಿಮ್ಮ ಅಪ್ಪ ಏನು ಮಾಡ್ತಾರೆ ಅಂತಾ ಕೇಳಿದೆ..
ಅದಕ್ಕೆ ಅವನಂದ… ‘ನನಗೆ ಗೊತ್ತಿಲ್ಲಾ ಆಂಕಲ್.. ನಾನು ಬೇಗ ಮಲ್ಕೊಬಿಡ್ತಿನಿ ’

–      ಕುಡುಕನೊಬ್ಬ ಸಾಯುವ ಹಂತದಲ್ಲಿದ್ದ ಆಗ ಶಿವ ಪ್ರತ್ಯಕ್ಷನಾಗಿ ನಿನ್ನ ಕೊನೆ ಆಸೆ ಏನು ಅಂತಾ ಕೇಳಿಕೋ ಅಂತ ವರ ನೀಡಿದ. ಅದಕ್ಕೆ ‘ನನಗೆ ಮುಂದಿನ ಜನ್ಮದಲ್ಲಿ ಎರಡು ಹಲ್ಲು ಕೊಟ್ಟರೂ ಪರವಾಗಿಲ್ಲ.. 20 ಲಿವರ್ ಕೊಟ್ಬೀಡು..’ ಅಂದಾ ಕುಡುಕ.

–      ಈಗ ವಿಜಯ್ ಮಲ್ಯ ಸಖತ್ ಸುದ್ದಿಯಲ್ಲಿದ್ದಾರೆ.. ಆದ್ರೆ ಆತ ನಿಜವಾಗ್ಲೂ ಧೈರ್ಯವಂತ ಉದ್ಯಮಿ. ಈಗಲೂ ಆತ 2016 ಕ್ಯಾಲೆಂಡರ್ ಬಿಡುಗಡೆ ಮಾಡಿದರೂ ಸಖತ್ ಸೇಲ್ ಆಗ್ತವೆ. ಕಾರಣ, ‘ಈಗ ಕ್ಯಾಲೆಂಡರ್ ನಲ್ಲಿ ವಿವಿಧ ಭಂಗಿಯಲ್ಲಿ ನಿಲ್ಲೋದು ಮಾಡೆಲ್ ಗಳಲ್ಲ.. ಬದಲಿಗೆ ವಿವಿಧ ಬ್ಯಾಂಕ್ ಮುಖ್ಯಸ್ಥರು..’

–      ನಮ್ಮ ದೇಶವನ್ನು ಬದಲಿಸುವುದಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರೇ ಬಗೆ ಹರಿಸಬೇಕು. ಇಲ್ಲವಾದರೆ ಯಾರಿಂದಲೂ ಸಾಧ್ಯವಾಗದು. ಮೋದಿ ಅವರ ಸಾರ್ವಜನಿಕ ಸಭೆಯೊಂದಕ್ಕೆ ಹೋಗಿದ್ದೆ.. ಅಲ್ಲಿ ಎಲ್ಲರ ಬಾಯಲ್ಲಿ ಮೋದಿ.. ಮೋದಿ ಎಂಬ ಉದ್ಘಾರ. ಬಳಿಯೇ ಇದ್ದ 2 ವರ್ಷದ ಮಗು ಸಹ ಮೋದೀ… ಮೋದೀ.. ಅಂತಾ ಕೂಗುತ್ತಿತ್ತು. ಅದನ್ನು ನೋಡಿ ಅರೇ.., ಚಿಕ್ಕ ಮಕ್ಕಳೂ ಮೋದಿ ಅಭಿಮಾನಿ ಎಂದು ಅಚ್ಚರಿಯಿಂದ ಹೇಳಿದೆ.
ತಕ್ಷಣವೇ ಆ ಮಗುವಿನ ತಾಯಿ ಕೂಗಿ ಹೇಳಿದಳು.. ಸರಿಯಾಗಿ ಕೇಳಿಸ್ಕೋ.. ಅದು ಮೋದಿ.. ಮೋದಿ.. ಅಲ್ಲ ಗೋದಿ.. ಗೋದಿ.. ಅಂತಾ ಕೋಪಗೊಂಡಳು. ಆಮೇಲೆ ತಿಳಿಯಿತು, ‘ಆಕೆ ಕಾಂಗ್ರೆಸ್ ನವಳು ಅಂತಾ..’

–      ಬಿಜೆಪಿ ಸಮಾರಂಭದಲ್ಲಿ ಮೋದಿ ಹೇಳಿದರು.. ನಾನು ಈ ಮಟ್ಟಕ್ಕೆ ಏರಲು ಕಾರಣ ಅಡ್ವಾಣಿ ಜೀ… ಪ್ರಧಾನಿಯಾಗಲು ಕಾರಣ ಅಡ್ವಾಣಿ ಜೀ.. ನಂತರ ಮಾತನಾಡಿದ ಅಡ್ವಾಣಿ ಹೇಳಿದ್ರೂ, ‘ನನ್ನ ಈಗಿನ ಪರಿಸ್ಥಿತಿಗೆ ಕಾರಣ, ಮೋದಿಜೀ…’

–      ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲನುಭವಿಸಿತು. ನಂತರ ಮಾಧ್ಯಮದವರಿಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದು ಹೀಗೆ: ‘ವಿರಾಟ್ ಕೊಹ್ಲಿ ಹಾಗೂ ಆಶಿಶ್ ನೆಹ್ರಾ ಇಬ್ಬರೂ ದೆಹಲಿ ಆಟಗಾರರು. ಅವರ ಪ್ರದರ್ಶನ ಉತ್ತಮವಾಗಿಯೇ ಇತ್ತು. ಆದರೆ ಮಿಕ್ಕ ಆಟಗಾರರ ವೈಫಲ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ..’

–      ಕ್ರಿಕೆಟ್ ಪಂದ್ಯದಲ್ಲಿ ಸುರೇಶ್ ರೈನಾ ಕ್ಯಾಚ್ ಕೈಚೆಲ್ಲಿದರು. ಆಗ ಎಲ್ಲರು ಟೀಕೆ ಮಾಡಲು ಆರಂಭಿಸಿದರು. ಆಗ ಮಧ್ಯ ಪ್ರವೇಶಿಸಿದ ಲಾಲು ಪ್ರಸಾದ್ ಯಾದವ್, ‘ಅರೆ, ಕ್ಯಾಚ್ ಬಿಟ್ಟಿದ್ದಕ್ಕೆ ಯಾಕೆ ರೈನಾ ವಿರುದ್ಧ ಟೀಕೆ ಮಾಡ್ತೀರಿ. ಕೆಲವೊಮ್ಮೆ ಕ್ಯಾಚ್ ಕೈಚೆಲ್ಲೋದು ಸಹಜ. ಬೇಕಾದರೆ ರಿಪ್ಲೇ ಹಾಕಿ ಆಗ ರೈನಾ ಖಂಡಿತಾ ಕ್ಯಾಚ್ ಹಿಡಿಯುತ್ತಾರೆ..

Leave a Reply