ಕುಂದಾಪುರದಲ್ಲಿ ರಸ್ತೆ ಅಪಘಾತ, 8 ವಿದ್ಯಾರ್ಥಿಗಳ ದುರ್ಮರಣ

ಡಿಜಿಟಲ್ ಕನ್ನಡ ಟೀಮ್:

ಕುಂದಾಪುರ ತಾಲೂಕಿನ ತ್ರಾಸಿ ಬಳಿ ಮಂಗಳವಾರ ಬೆಳಗ್ಗೆ 9.45 ರ ವೇಳೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 8 ಶಾಲಾ ಮಕ್ಕಳು ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಮೊವಾಡಿ ಕ್ರಾಸ್ ಬಳಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಾರುತಿ ಒಮ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಉಂಟಾಗಿದೆ. ಹೆಮ್ಮಾಡಿಯ ಸುಳ್ಸೆಯಿಂದ ಈ ಶಾಲಾ ಮಕ್ಕಳನ್ನು ತ್ರಾಸಿಯ ಡಾನ್ ಬಾಸ್ಕೋ ಶಾಲೆಗೆ ಕರೆದೋಯ್ಯಲಾಗುತ್ತಿತ್ತು. ಈ ಕಾರಿನಲ್ಲಿದ್ದದ್ದು ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳು ಎಂದು ಹೇಳಲಾಗಿದೆ.

ಅಪಘಾತದ ನಡೆದಾಗ ಸ್ಥಳದಲ್ಲೇ ಮೂವರು ಮಕ್ಕಳು ಸಾವನ್ನಪ್ಪಿದ್ದು, ನಂತರ ಆಸ್ಪತ್ರೆಯಲ್ಲಿ ಐವರು ಮಕ್ಕಳು ಮೃತಪಟ್ಟಿವೆ. ಚಾಲಕ, ಆತನ ಪತ್ನಿ ಮತ್ತು ಒರ್ವ ಶಾಲಾ ಶಿಕ್ಷಕಿಗೂ ಅಪಘಾತದಲ್ಲಿ ಗಂಭೀರ ಗಾಯಗಳಾಗಿದ್ದು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply