ಸಿಂಧು ನಾಗರೀಕತೆಯ ವೈಭವವನ್ನು ಹೊತ್ತು ತರುತ್ತಿದೆ ಆಶುತೋಷರ ಮೊಹೆಂಜೊ ದಾರೊ

ಡಿಜಿಟಲ್ ಕನ್ನಡ ಟೀಮ್:

ಲಗಾನ್ ಖ್ಯಾತಿಯ ಆಶುತೋಷ್ ಗೊವರಿಕರ್ ಅವರ ಮುಂದಿನ ಚಿತ್ರ ಮೊಹೆಂಜೊ ದಾರೊ ಈಗಾಗಲೇ ಸಾಕಷ್ಟು ನಿರೀಕ್ಷೆ ಹೆಚ್ಚಿದೆ. ಬಾಲಿವುಡ್ ನಟ ಹೃತಿಕ್ ರೋಷನ್, ಪೂಜಾ ಹೆಗಡೆ ಅಭಿನಯದ ಚಿತ್ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಕಾವು ಏರುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಒಂದೇ ದಿನದಲ್ಲಿ 15 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಸಿಂಧು ನಾಗರೀಕತೆಯ ಆರಂಭದ ಇತಿಹಾಸಕ್ಕೆ ಕರೆದೊಯ್ಯುವಂತೆ ಚಿತ್ರದ ಟ್ರೇಲರ್ ಸೂಚನೆ ನೀಡಿದೆ. ಯೂಟ್ಯೂಬ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರ ಸಿಂಧು ಬಯಲಿನ ನಾಗರೀಕತೆಯ ಗತಕಾಲವನ್ನು ನೆನಪಿಸಲಿದೆ. ಮಾನವನ ದುರಾಸೆಗೆ ಭಾರತದ ಪುರಾತನ ನಗರವಾದ ಮೊಹೆಂಜೊ ದಾರೊ ನಾಶಗೊಂಡ ಕಥೆಯಾಗಿದೆ. ಸರ್ಮನ್ ಎಂಬ ಯುವ ರೈತ ಈ ನಗರಕ್ಕೆ ಆಗಮಿಸಿದಾಗ ಅಲ್ಲಿನ ಅರ್ಚಕರ ಮಗಳು ಚಾನಿಯನ್ನು ಭೇಟಿ ಮಾಡುತ್ತಾನೆ. ಆಕೆಯ ಪ್ರೀತಿಯನ್ನು ಗೆಲ್ಲುವುದಕ್ಕಾಗಿ ಪ್ರಯತ್ನ ನಡೆಸುವ ವೇಳೆ, ಚಾನಿ, ಮೊಹೆಂಜೊ ದಾರೊ ಹಾಗೂ ತನ್ನ ಬಗ್ಗೆ ಯಾರಿಗೂ ತಿಳಿಯದಂತಹ ಹಿನ್ನೆಲೆಯನ್ನು ತೆರೆದಿಡುವ ಕಥೆ ಇದಾಗಿದೆ.

ಒಟ್ಟಿನಲ್ಲಿ ಮೊಹೆಂಜೊ ದಾರೊ ಸಿನಿಮಾ ಒಂದು ಇತಿಹಾಸದ ಪ್ರೇಮ ಕಥೆಯಾಗಿದೆ. ಈ ಚಿತ್ರದ ರೋಚಕ ಟ್ರೇಲರ್ ಇಲ್ಲಿದೆ ನೋಡಿ..

Leave a Reply