ಅರವಿಂದ್ ಸುಬ್ರಮಣಿಯನ್ ವಿರುದ್ಧ ಮುಂದುವರಿದಿದೆ ಸ್ವಾಮಿ ಸಮರ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ವಿರುದ್ಧ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದು, ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಬಿಜೆಪಿ ನಾಯಕರು ಅರವಿಂದ್ ಅವರ ಬೆಂಬಲಕ್ಕೆ ನಿಂತದ್ದು ಗೊತ್ತಿರೋ ವಿಚಾರ. ಆದ್ರೆ, ಬಿಜೆಪಿ ಪಕ್ಷದ ಸಮರ್ಥನೆಯ ಹೊರತಾಗಿಯೂ ಸ್ವಾಮಿ ಮಾತ್ರ ಸುಮ್ಮನಾಗಿಲ್ಲ. ಅರವಿಂದ್ ವಿರುದ್ಧ ತಮ್ಮ ಸಮರ ಮುಂದುವರಿಸಿದ್ದಾರೆ.

ಗುರುವಾರವೂ ಸುಬ್ರಮಣಿಯನ್ ಸ್ವಾಮಿ ತಮ್ಮ ವಾಗ್ದಾಳಿ ಮುಂದುವರಿಸಿರೋದು ಸರಣಿ ಟ್ವೀಟ್ ಗಳಲ್ಲೇ. ಸ್ವಾಮಿ ಟ್ವೀಟ್ ಗಳಲ್ಲಿ ಹೇಳಿದ್ದೇನು, ಇಲ್ಲಿದೆ ನೋಡಿ:

  • ‘ಗುಜರಾತ್ ಕಥೆ ಏನು? ಮೋದಿ ಅವರನ್ನು ಸಾಧಾರಣ ಸಾಧಕ (ತೆರಿಗೆ ಸಂಗ್ರಹ ಮತ್ತು ಸಾಮಾಜಿಕ ಪರಿಣಾಮ ಆಧರಿಸಿ) ಎಂದು ಅರವಿಂದ್ ಸುಬ್ರಮಣಿಯನ್ 23-1-13ರಲ್ಲಿ ಹೇಳಿದ್ದರು.’
  • ‘ಕೇಂದ್ರ ಬಿಜೆಪಿ ಸರ್ಕಾರ ಅರವಿಂದ್ ಸುಬ್ರಮಣಿಯನ್ ಬಗ್ಗೆ ಎಲ್ಲವೂ ಗೊತ್ತಿದೆ, ಆದರೂ ಅವರೇ ನಮ್ಮ ಪ್ರಮುಖ ಅಸ್ತ್ರ ಎಂದರೆ ನಾನು ನನ್ನ ಆಗ್ರಹವನ್ನು ಹಿಂಪಡೆಯುತ್ತೇನೆ. ಇದರ ಫಲಿತಾಂಶಕ್ಕಾಗಿ ಕಾಯುತ್ತೇನೆ.’
  • ‘ಭಾರತದ ರಫ್ತುದಾರರು ಮತ್ತು ಕಂಪನಿಗಳ ವಿರುದ್ಧ ಪಕ್ಷಪಾತ ನಿಲುವು ತಾಳಿ ಒತ್ತಡ ಹೇರುವ ಸಲಹೆಯನ್ನು  ಅರವಿಂದ್ 13-3-13ರಲ್ಲಿ ನೀಡಿದ್ದರು.’
  • ‘ಭಾರತೀಯನಾಗಿ, ದೇಶಭಕ್ತ ಎಂದು ಹೇಳಿಕೊಂಡು ಭಾರತಕ್ಕೆ ಕೇಡು ಬಯಸಲು ವಿದೇಶಗಳಿಗೆ ಕುಮ್ಮಕ್ಕು ನೀಡಲು ಹೇಗೆ ಸಾಧ್ಯ. ಅವರ ತಪ್ಪು ಕ್ಷಮೆಗೆ ಅರ್ಹವೆಂದಾದರೆ, ಅವರನ್ನು ಕಿತ್ತು ಹಾಕಿ ಎಂಬ ನನ್ನ ಆಗ್ರಹವನ್ನು ಕೈಬಿಡುತ್ತೇನೆ.’

Leave a Reply