ಯುರೋಪ್ ಒಕ್ಕೂಟದಿಂದ ಹೊರಬಂತು ಬ್ರಿಟನ್

ಡಿಜಿಟಲ್ ಕನ್ನಡ ಟೀಮ್:

ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಬ್ರಿಟನ್ ಮತ ಹಾಕಿದೆ. ಇದರೊಂದಿಗೆ ಪ್ರಬಲ ಆರ್ಥಿಕ ನೀತಿ ಹೊಂದುವುದು ಹಾಗೂ ವಲಸಿಗರ ಸಮಸ್ಯೆ ತಡೆಯಲು ಪ್ರಬಲ ಗಡಿ ನಿಯಂತ್ರಣ ಸಾಧಿಸುವ ಪ್ರಯತ್ನ ಈ ನಿರ್ಧಾರದಲ್ಲಿದೆ.

ಗುರುವಾರ ನಡೆದ ಮತದಾನದಲ್ಲಿ ಶೇ.52 ರಷ್ಟು ಜನ ಯುರೋಪಿಯನ್ ಒಕ್ಕೂಟದಿಂದ ಹೊರಬರಲು ಬಯಸಿದರೆ, ಶೇ. 48 ರಷ್ಟು ಜನ ಒಕ್ಕೂಟದಲ್ಲೇ ಮುಂದುವರಿಯಲು ಬಯಸಿದ್ದರು. ಬ್ರಿಟನ್ ನ ಈ ನಿರ್ಧಾರದಿಂದ ಎರಡನೇ ಮಹಾಯುದ್ಧದ ನಂತರ ಮೊದಲ ಬಾರಿಗೆ ಯುರೋಪಿಯನ್ ಒಕ್ಕೂಟದ ಒಗ್ಗಟ್ಟು ಛಿದ್ರವಾಗಿದೆ. ಅಲ್ಲದೇ 28 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟ ಈಗ 27ಕ್ಕೆ ಇಳಿದಿದೆ.

status

ಹಲವು ವರ್ಷಗಳಿಂದ ವ್ಯಾಪಾರ, ವ್ಯವಹಾರ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಈಗ ಯುರೋಪಿಯನ್ ಒಕ್ಕೂಟದಿಂದ ಬೇರೆಯಾಗುವ ಬ್ರಿಟನ್ ನಿರ್ಧಾರ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸುಮಾರು ಎರಡು ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಬ್ರೆಕ್ಸಿಟ್ ಜನಮತ ಗಣನೆಯಲ್ಲಿ ಪ್ರಧಾನಿ ಡೇವಿಡ್ ಕೆಮರೂನ್ ಯುರೋಪಿಯನ್ ಒಕ್ಕೂಟದಿಂದ ಹೊರಹೋಗದಿರುವ ಅಭಿಮತ ವ್ಯಕ್ತಪಡಿದ್ದರು. ಆದರೆ, ಜನರ ಈ ತೀರ್ಮಾನ ಪ್ರಧಾನಿಯ ಜನಪ್ರಿಯತೆ ಮಂಕಾಗಿಸಿದೆ. ಈ ಬೆಳವಣಿಗೆ ಕೆಮರೂನ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡುವ ಒತ್ತಡಕ್ಕೆ ಸಿಲುಕಿಸಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿವೆ.

ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರನಡೆದಿದ್ದರಿಂದ ಅರ್ಥವ್ಯವಸ್ಥೆಗೆ ಆಗುವ ಪರಿಣಾಮದ ಬಗ್ಗೆ ಈ ಹಿಂದೆ ಪ್ರಕಟಿಸಿದ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

Leave a Reply