ಮೌನ ಮುರಿದ ಮೋದಿ, ರಾಜನ್ ಬಗ್ಗೆ ಪ್ರಶಂಸೆ, ಸ್ವಾಮಿ ವಿರುದ್ಧ ಪರೋಕ್ಷ ಅಸಮಾಧಾನ

ಡಿಜಿಟಲ್ ಕನ್ನಡ ಟೀಮ್:

ಆರ್ಬಿಐ ಗವರ್ನರ್ ರಘುರಾಮ್ ರಾಜನ್ ವಿರುದ್ಧ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಾಡಿದ ದಾಳಿ ಬಗ್ಗೆ ಮೋದಿ ಮೌನ ಮುರಿದಿದ್ದಾರೆ. ರಾಜನ್ ಬೆನ್ನಿಗೆ ನಿಂತ ಮೋದಿ, ಸ್ವಾಮಿ ಅವರ ವಾದವನ್ನು ನಿರಾಕರಿಸಿದ್ದಾರೆ.

ರಾಜನ್ ಅವರನ್ನು ‘ದೇಶಭಕ್ತ’ ಎಂದ ಮೋದಿ, ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವುದು ಹೀಗೆ:

‘ರಾಜನ್ ಜತೆಗೆ ನನ್ನ ಅನುಭವ ಅತ್ಯುತ್ತಮವಾಗಿದೆ. ಅವರ ಸಲ್ಲಿಸಿರುವ ಸೇವೆಗೆ ಮೆಚ್ಚುಗೆ ಇದೆ. ಭಾರತ ಎಂದರೆ ಅವರಿಗೆ ಪ್ರೀತಿ ಇದೆ. ಯಾವುದೇ ದೇಶಭಕ್ತನಿಗೂ ಕಡಿಮೆ ಇಲ್ಲ. ಅವರು ಏನೇ ಕೆಲಸ ಮಾಡಿದ್ರೂ ದೇಶಕ್ಕಾಗಿಯೇ ಮಾಡುತ್ತಾರೆ.

ಇಂತಹ ಹೇಳಿಕೆಗಳು ನನ್ನ ಪಕ್ಷದಿಂದ ಬರಲಿ ಅಥವಾ ಬರದಿರಲಿ, ರಾಜನ್ ವಿರುದ್ಧ ಈ ರೀತಿಯ ದಾಳಿ ಉತ್ತಮವಲ್ಲ. ಪ್ರಚಾರದ ಹುಚ್ಚುತನ ದೇಶಕ್ಕೆ ಉತ್ತಮ ಕೊಡುಗೆ ನೀಡುವುದಿಲ್ಲ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಅರಿಯಬೇಕು. ಯಾರೇ ಆಗಲಿ ವ್ಯವಸ್ಥೆಗಿಂತ ತಾವೇ ದೊಡ್ಡವರು ಎಂದು ಭಾವಿಸುವುದು ತಪ್ಪು.’

Leave a Reply