ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, 7ನೇ ವೇತನ ಸಮಿತಿ ಶಿಫಾರಸ್ಸಿಗೆ ಸಚಿವ ಸಂಪುಟ ಅಸ್ತು

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸಚಿವ ಸಂಪುಟ ಬುಧವಾರ 7ನೇ ವೇತನ ಸಮಿತಿ ಶಿಫಾರಸ್ಸಿಗೆ ಒಪ್ಪಿಗೆ ನೀಡಿದೆ. ಇದರೊಂದಿಗೆ ಸರ್ಕಾರಿ ನೌಕರರಿಗೆ ವೇತನ ಬಡ್ತಿಯ ಸಿಹಿ ಸಿಕ್ಕಿದೆ.

ಸಮಿತಿ ಶಿಫಾರಸ್ಸಿನೊಂದಿಗೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 58 ಲಕ್ಷ ಪಿಂಚಣಿದಾರು ಒಟ್ಟು 1 ಕೋಟಿಗೂ ಹೆಚ್ಚು ಮಂದಿ ಫಲಾನುಭವಿಗಳಾಗಲಿದ್ದಾರೆ. ಈ ಸಮಿತಿ ಶಿಫಾರಸ್ಸು ಒಟ್ಟಾರೆ ಶೇ.23.55 ರಷ್ಟು ಹೆಚ್ಚಳವಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ₹ 1.02 ಲಕ್ಷ ಕೋಟಿಯಷ್ಟು ಹೊರೆಯಾಗಲಿದೆ.

ಪ್ರತಿ ತಿಂಗಳಿಗೆ ಕೆಳ ಮಟ್ಟದಲ್ಲಿ ಕನಿಷ್ಠ ವೇತನ ₹ 18 ಸಾವಿರಕ್ಕೆ ನಿಗದಿ ಮಾಡುವುದು, ಉನ್ನದ ದರ್ಜೆಗೆ ₹ 2.25 ಲಕ್ಷ ಹಾಗೂ ಕ್ಯಾಬಿನೆಟ್ ಕಾರ್ಯದರ್ಶಿಗಳು ಹಾಗೂ ಸಮಾನ ವೇತನ ವರ್ಗಕ್ಕೆ ₹ 2.50 ಲಕ್ಷ ವೇತನ ನಿಗದಿ, ಹಾಗೂ ಒಂದು ಶ್ರೇಣಿ ಒಂದು ಪಿಂಚಣಿ ವ್ಯವಸ್ಥೆಯೂ ಸಮಿತಿಯ ಪ್ರಮುಖ ಶಿಫಾರಸ್ಸುಗಳು. ಈ ವೇತನ ಬಡ್ತಿ ಕಳೆದ ಜನವರಿಯಿಂದಲೇ ಜಾರಿಯಾಗಲಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ಸಮಿತಿಯು ಕಿರಿಯರ ಮಟ್ಟದಲ್ಲಿ ಮೂಲ ವೇತನಕ್ಕೆ ಶೇ.14.27ರಷ್ಟು ಹೆಚ್ಚಿಸಲು ಶಿಫಾರಸ್ಸು ನೀಡಿತ್ತು. ಇದು ಕಳೆದ 70 ವರ್ಷಗಳಲ್ಲಿ ಕಡಿಮೆ ಪ್ರಮಾಣದ್ದಾಗಿದೆ. 2008ರ ವೇತನ ಸಮಿತಿ ಶೇ.20 ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ನೀಡಿತ್ತಲ್ಲದೇ, ಅದನ್ನು ಜಾರಿಗೊಳಿಸುವಾಗ ದುಪ್ಪಟ್ಟು ಮಾಡಿತ್ತು.

Leave a Reply