ಒಂದು ಆಲಸೀ ರಜೆಯಲ್ಲಿ ನೀವು ಓದಿಕೊಳ್ಳಬಹುದಾದ ಕೊಹೆನ್ ಸಾಲುಗಳು…

 

ಮಾಯಾವಿ

ನಿನ್ನೆಗಳನ್ನು ನುಂಗಿಯೇ ಬೆಳೆದಿಹುದು ಭಾವಕೋಶ

ಇಲ್ಲಿಂದ ಹೊಸತನ್ನು ಹುಟ್ಟಿಸುವುದಾದರೂ ಹೇಗೆ?

ಎಲ್ಲದರಲ್ಲೂ ಕಂಡೇ ಕಾಣುತ್ತದೆ ಒಂದು ಬಿರುಕು

ಬೇಕಲ್ಲವೇ ಜಾಗ, ಬರಲೊಂದು ಬೆಳಕು…

ಕವಿತೆ ಎಂಬುದು ಬದುಕಿಗೊಂದು ಸಾಕ್ಷ್ಯ, ಬದುಕನ್ನು ಬಿಸಿಗೊಡ್ಡಿಕೊಂಡಿದ್ದೇ ಆದರೆ ಉಳಿಯುವ ಬೂದಿ ಕಾವ್ಯ..

ಈ ಸಿಗರೇಟಿಗೆ ಬೆಂಕಿ ಸೋಕಿಸಿದ್ದು ಯಾವಾಗ ನೆನಪಿಲ್ಲ. ನಾನಿಲ್ಲಿ ನನಗಾಗಿ ಬಂದೆನೋ, ಬೇರೆ ಯಾರಿಗೋ ಕಾಯುತ್ತಿರುವೆನೋ ನೆನಪಾಗುತ್ತಿಲ್ಲ.

ನೀನೇ ಸಮುದ್ರವಾಗದಿದ್ದರೆ, ಸಮುದ್ರ ನೋಡಿ ನೋಡಿ ಬೇಜಾರಾಗಿಬಿಡುತ್ತದೆ.

ಗುಟುಕು ವೈನು, ಮತ್ತೊಂದು ಧಮ್ ಸಿಗರೇಟು

ಹೊರಡಬೇಕಿದೆ ಈಗ ಎಲ್ಲ ಎತ್ತಿಟ್ಟು

ಟ್ರಾಫಿಕ್ ಜಾಮ್ಗಳು ಕರೆದಿವೆ ನನ್ನ

ಅಲ್ಲಿ ಕಾಯ್ದಿರಿಸಲಾಗಿದೆ ನನ್ನ ಸೀಟನ್ನ

—-

ಲಿಯೊನಾರ್ಡ್ ಕೊಹೆನ್ ಕೆನಡಾದ ಕವಿ, ಹಾಡುಗಾರ, ಸಂಗೀತಗಾರ, ಬರಹಗಾರ. ಈಗ 83ರ ಹರೆಯ. ನಮ್ಮನ್ನು ಪ್ರೇಮದ ಮೋಹಕ ಅಂತ್ಯಕ್ಕೆ ಕುಣಿಸಿಕೊಂಡುಹೋಗಬಲ್ಲ ಕಿಂದರಿಜೋಗಿ. ಈ ಹಾಡು ಕೊನೆಯಲ್ಲಿರಲಿ…

Leave a Reply