‘ಇಸ್ಲಾಮಿಕ್ ಉಗ್ರರು’ ಅಂತ ಹೇಳೋದಕ್ಕಿನ್ನೂ ಹಿಂಜರಿಯುವವರೇ ಗಮನಿಸಿ, ಹಿಜಾಬ್ ಧರಿಸದ ಕಾರಣಕ್ಕೆ ಮುಸ್ಲಿಂ ಮಹಿಳೆಯನ್ನೇ ಕೊಂದ್ರು!

ಡಿಜಿಟಲ್ ಕನ್ನಡ ಟೀಮ್:

ಮೂರು ದಿನಗಳ ಹಿಂದಷ್ಟೇ ‘ಅಲ್ಲಾಹು ಅಕ್ಬರ್’ ಎನ್ನುತ್ತಾ ಢಾಕಾದ ಹೋಲಿ ಆರ್ಟಿಸನ್ ಬೇಕರಿ ರೆಸ್ಟೊರೆಂಟ್ ನಲ್ಲಿ ಐಎಸ್ಐಎಸ್ ಉಗ್ರರು ಮುಸ್ಲಿಂ ಅಲ್ಲದವರನ್ನು, ಕುರಾನ್ ಪಠಿಸದವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ನಿಮಗೆಲ್ಲಾ ಗೊತ್ತಿರುವ ಸಂಗತಿ.

ಆದ್ರೆ, ಅವರ ಕ್ರೌರ್ಯ ಯಾವ ಮಟ್ಟಿಗೆ ಇತ್ತು ಅಂದರೆ, ಇಶ್ರತ್ ಅಖೊಂಡ್ ಎಂಬ ಮುಸ್ಲಿಂ ಮಹಿಳೆ ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಲಾಗಿದೆ. ಹೀಗೆ ಮೃತಪಟ್ಟಿರುವ ಘಟನೆಯ ಬಗ್ಗೆ ಇಶ್ರತ್ ನ ಪರಿಚಯಸ್ತ ಕೋಲ್ಕತ್ತಾ ಮೂಲದ ಫ್ರೊಫೆಸರ್ ಅಲೋಕ್ ಕುಮಾರ್ ತಮ್ಮ ಫೇಸ್ ಬುಕ್ ಸ್ಟೇಟಸ್ ನಲ್ಲಿ ಮನಕಲುಕುವ ಕಥೆ ಹೇಳಿದ್ದಾರೆ.

ಅಲೋಕ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ…

‘ಇಶ್ರತ್ ಇನ್ನಿಲ್ಲ..

ನನ್ನ ಸ್ನೇಹಿತೆ ಇಶ್ರತ್ ನಿನ್ನೆ ಢಾಕಾದ ರೆಸ್ಟೊರೆಂಟ್ ನಲ್ಲಿ ಇತರೆ ಇಟಲಿಯ ಫ್ಯಾಷನ್ ಡಿಸೈನರ್ ಗಳೊಂದಿಗೆ ಇದ್ದಾಗ ಉಗ್ರರು ಆಕೆಗೆ ಕಿರುಕುಳ ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಅದೇ ರೆಸ್ಟೊರೆಂಟ್ ನಲ್ಲಿದ್ದ ಇತರೆ ಬಾಂಗ್ಲಾದೇಶಿ ಮುಸ್ಲಿಮರು ಪವಿತ್ರ ಕುರಾನ್ ನ ಆಯ್ದ ಭಾಗಗಳನ್ನು ಪಠಿಸುವ ಮೂಲಕ ತಾವು ಮುಸ್ಲಿಮರು ಎಂದು ಸಾಬೀತುಪಡಿಸಿ ಉಗ್ರರಿಂದ ಪಾರಾದರು. ಆದರೆ ಇಶ್ರತ್ ಮಾತ್ರ ತಾನು ಮುಸ್ಲಿಂ ಮಹಿಳೆ ಎಂಬುದನ್ನು ಹೇಳಿಕೊಳ್ಳಲಿಲ್ಲ. ಅಲ್ಲದೆ ಆಕೆ ಹಿಜಾಬ್ ಧರಿಸಿರದ ಕಾರಣ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

ಉಗ್ರರ ಈ ದಾಳಿಯಲ್ಲಿ ಇತರೆ 20 ವಿದೇಶಿಯರ ಹತ್ಯೆಯಾಗಿದೆ. ಇಲ್ಲಿ ಒತ್ತೆಯಾಳುಗಳನ್ನು ಮಾರಕಾಸ್ತ್ರಗಳಿಂದ ಹೊಡೆದು ಸಾಯಿಸಿ, ರಕ್ತದ ಕೋಡಿ ಹರಿಸಿದ್ದಾರೆ. ಈ ದಾಳಿಯಲ್ಲಿನ ಬಹುತೇಕ ಸಂತ್ರಸ್ತರು ಇಟಲಿ ಮತ್ತು ಜಪಾನ್ ನಾಗರೀಕರು. ಅಲ್ಲದೆ ಭಾರತ ಮೂಲದ ವಿದ್ಯಾರ್ಥಿನಿ ತರುಶಿ ಜೈನ್ ಸಹ ಒಬ್ಬಳು.

ಇಶ್ರತ್ ವಾರಕ್ಕೊಮ್ಮೆ ನನ್ನೊಂದಿಗೆ ಮಾತುಕತೆ ನಡೆಸುತ್ತಾ ಸಂಪರ್ಕದಲ್ಲಿದ್ದರು. ಈ ಸುದ್ದಿ ಕೇಳಿ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೇನೆ. ಕಳೆದ ಸೆಪ್ಟೆಂಬರ್ ನಲ್ಲಿ ಕೋಲ್ಕತ್ತಾಗೆ ಆಗಮಿಸಿದ್ದ ಇಶ್ರತ್, ಬಾಂಗ್ಲಾದೇಶದ ವಿಶ್ವವಿದ್ಯಾಲಯಗಳಲ್ಲಿ ನನ್ನ ಉಪನ್ಯಾಸದ ಬಗ್ಗೆ ಚರ್ಚಿಸಿದ್ದರು. ಸಾಮಾನ್ಯವಾಗಿ ನನ್ನ ಪೋಸ್ಟ್ ಗಳು ದೊಡ್ಡದ್ದಾಗಿರುತ್ತದೆ. ಆದರೆ, ಇಂದು ಈ ನೋವನ್ನು ಹೇಳಿಕೊಳ್ಳಲು ಪದಗಳೇ ಸಿಗುತ್ತಿಲ್ಲ.

ಇಶ್ರತ್ ನೀವೆಲ್ಲೇ ಇರಿ.. ನನ್ನ ಪ್ರೀತಿ ನಿಮ್ಮೊಂದಿಗಿರುತ್ತದೆ…’

1 COMMENT

Leave a Reply