ಅಕ್ರಮ ಹಣಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಗೆ ಸಮನ್ಸ್ ನೀಡಿದೆ ಇಡಿ

ಡಿಜಿಟಲ್ ಕನ್ನಡ ಟೀಮ್:

ಏರ್ ಸೆಲ್- ಮ್ಯಾಕ್ಸಿಸ್ ಹಾಗೂ 2ಜಿ ಹಗರಣದಲ್ಲಿ ಅಕ್ರಮ ಹಣ ಗಳಿಕೆ ಆರೋಪ ಹೊತ್ತಿರುವ ಕಾರ್ತಿ ಚಿದಂಬರಮ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಖುದ್ದಾಗಿ ಹಾಜರಾಗಿ ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ತಮ್ಮ ಆರ್ಥಿಕ ದಾಖಲೆಗಳನ್ನು ಈ ವಾರದೊಳಗೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಪ್ರಕರಣದ ತನಿಖೆಯಲ್ಲಿ ಮೊದಲ ಬಾರಿಗೆ ಕಾರ್ತಿಗೆ ಸಮನ್ಸ್ ನೀಡಲಾಗಿದೆ.

ಈ ಹಗರಣಗಳಲ್ಲಿ ಅಡ್ವಾಂಟೇಜ್ ಸ್ಟ್ರಾಜೆಟಿಕ್ ಕನ್ಸಲ್ಟಿಂಗ್ ಪ್ರೈವೆಟ್ ಲಿಮಿಟೆಡ್ ಮತ್ತು ಚೆಸ್ ಗ್ಲೋಬಲ್ ಅಡ್ವೈಸರಿ ಸರ್ವೀಸಸ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದ್ದು, ಈ ಎರಡಕ್ಕೂ ಕಾರ್ತಿ ನಿರ್ದೇಶಕರಾಗಿದ್ದಾರೆ. ಅಲ್ಲದೆ ಈ ಕಂಪನಿಗಳು ಅಕ್ರಮ ಹಣ ತಡೆ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಇಡಿ ತನಿಖೆ ನಡೆಸುತ್ತಿದೆ.

ಈ ಪ್ರಕರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ ಅಂತಾ ಕಾರ್ತಿ ಸ್ಪಷ್ಟನೆ ನೀಡಿದ್ರೆ, ಕಾರ್ತಿ ತಂದೆ ಚಿದಂಬರಂ ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಅವರು ಹೇಳಿರುವುದಿಷ್ಟು:

‘ಸರ್ಕಾರ ನನ್ನನ್ನು ಗುರಿಯಾಗಿಸಬೇಕೆಂದರೆ ನೇರವಾಗಿ ನನ್ನ ಮೇಲೆ ದಾಳಿ ನಡೆಸಲಿ. ಅದನ್ನು ಬಿಟ್ಟು ನನ್ನ ಮಗ, ಸ್ನೇಹಿತರ ವಿರುದ್ಧ ದಾಳಿ ಮಾಡುವುದು ಸರಿಯಲ್ಲ. ಅವರು ತಮ್ಮದೇ ಆದ ವ್ಯವಹಾರಗಳಲ್ಲಿ ನಿರತರಾಗಿದ್ದು, ಅವರಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ.’

ಹಳೆಓದು-ಮರುಓದು: ಮಾಜಿ ವಿತ್ತ ಸಚಿವ ಚಿದಂಬರಂ ತಮ್ಮ ಕುಟುಂಬದ ನಿಜ ಆಯವ್ಯಯ ಬಿಚ್ಚಿಡೋ ಕಾಲ ಸಮೀಪಿಸ್ತಿದೆಯಾ..?

ಕಾರ್ತಿ ಚಿದಂಬರಂ ಬೇನಾಮಿ ಸಾಮ್ರಾಜ್ಯದ ಎಳೆ ಬಿಚ್ಚಿಟ್ಟಿರುವ ಸ್ಫೋಟಕ ತನಿಖಾ ವರದಿ!

Leave a Reply