ಬುರ್ಹಾನ್ ಸಂಹಾರ: ಪಾಕಿಸ್ತಾನ ಮತ್ತು ಕಾಶ್ಮೀರದ ಕಲ್ಲು ತೂರಾಟಗಾರರ ಧ್ವನಿ ಒಂದೇ, ಸಾವಿನ ಸಂಖ್ಯೆ22ಕ್ಕೆ ಏರಿಕೆ

ಡಿಜಿಟಲ್ ಕನ್ನಡ ಟೀಮ್:

ಬುರ್ಹಾನ್ ಹತ್ಯೆ ಮಾನವ ಹಕ್ಕು ಉಲ್ಲಂಘನೆ ಎಂದು ಖಂಡಿಸಿದೆ ಪಾಕಿಸ್ತಾನ.. ಮುಂದುವರಿದ ಹಿಂಸಾಚಾರ, ಸತ್ತವರ ಸಂಖ್ಯೆ 22ಕ್ಕೆ ಏರಿಕೆ.. ಇವಿಷ್ಟು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸೋಮವಾರದ ಪ್ರಮುಖ ವಿದ್ಯಮಾನಗಳು.

ಇಲ್ಲಿ ಪ್ರಮುಖವಾಗಿ ಗಮನಿಸಬೇಕಿರುವುದು ಪಾಕಿಸ್ತಾನದ ಆಕ್ಷೇಪವನ್ನು. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಪಾಕ್ ಪ್ರಧಾನಿ ನವಾಜ್ ಷರೀಫ್, ‘ಭಾರತ ಮಾನವ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ. ಇದರೊಂದಿಗೆ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಮತ್ತು ಯುವ ಉಗ್ರರಿಗೆ ಪ್ರಚೋದನೆಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ಹತ್ಯೆಯನ್ನು ಪಾಕಿಸ್ತಾನ ಖಂಡಿಸಿದೆ. ಇದರೊಂದಿಗೆ ಭಾರತ ಸೇನೆ ಉಗ್ರ ಬುರ್ಹಾನ್ ಹತ್ಯೆ ಮಾಡಿರುವುದರಿಂದ ಪಾಕಿಸ್ತಾನಕ್ಕೆ ಉರಿ ಕಿತ್ತುಕೊಂಡಿರುವುದು ಸಾಬೀತಾಗಿದೆ. ಈ ಬುರ್ಹಾನ್ ತನ್ನ ಕಾರ್ಯಾಚರಣೆಗೆ ಪಾಕಿಸ್ತಾನದ ಅನುಕಂಪ, ಸಹಾಯ ಪಡೆಯುತ್ತಿದ್ದ ಎಂದು ಈ ಹಿಂದೆಯೇ ದೃಢವಾಗಿದ್ದ ಅಂಶ ಮತ್ತಷ್ಟು ಗಟ್ಟಿಯಾಗಿದೆ.

ಬುರ್ಹಾನ್ ಹತ್ಯೆ ಬಗ್ಗೆ ಬಗ್ಗೆ ಪಾಕ್ ಪ್ರಧಾನಿ ಹೇಳಿಕೆ ಹೀಗಿದೆ:

‘ಕಾಶ್ಮೀರ ನಾಯಕ ಬುರ್ಹಾನ್ ವನಿ ಹತ್ಯೆಯಿಂದ ನಮಗೆ ಆಘಾತವಾಗಿದೆ. ಭಾರತದ ಸೇನೆ ಕೇವಲ ಬುರ್ಹಾನ್ ಮಾತ್ರವಲ್ಲದೇ ಇತರೆ ನಾಗರೀಕರನ್ನು ಹತ್ಯೆ ಮಾಡಿದೆ. ಕಾಶ್ಮೀರದ ನಾಗರೀಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಶೋಚನೀಯ ಪರಿಸ್ಥಿತಿಯಾಗಿದೆ. ವಿಶ್ವ ಸಂಸ್ಥೆ ಭದ್ರತಾ ಸಮಿತಿ ನಿಯಮದ ಪ್ರಕಾರ ಜಮ್ಮು ಮತ್ತು ಕಾಶ್ಮೀರ ದಿಟ್ಟ ಪ್ರತಿಭಟನಾಕಾರರು ತಮ್ಮ ಬೇಡಿಯನ್ನು ಆಗ್ರಹಿಸುವಾಗ ಬಲವಂತವಾಗಿ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ವಿಶ್ವ ಸಂಸ್ಥೆ ಭದ್ರತಾ ಸಮಿತಿಯ ನಿಯಮಾವಳಿಯಂತೆ ಮಾನವ ಹಕ್ಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದಿದೆ.’ ಇದರೊಂದಿಗೆ ಪಾಕಿಸ್ತಾನ ಉಗ್ರರಿಗೆ ತಮ್ಮ ಬೆಂಬಲ ನೀಡುತ್ತಿರುವುದು ಸಾಬೀತಾಗುತ್ತಿದೆ.

ಮತ್ತೊಂದೆಡೆ ಮೂರನೇ ದಿನವು ಸತತವಾಗಿ ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಈ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 22 ಕ್ಕೆ ಏರಿದೆ. ಪರಿಣಾಮ ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಸಲಾಗಿದೆ.

ಹಳೆಓದು-ಮರುಓದು: ನೀವೆಷ್ಟೇ ಹಾರಾಡಿದರೂ ಈ ಉಗ್ರರನ್ನು ಹೊಸಕದೇ ಬಿಡೆವು- ಇದು ಭಾರತೀಯರೆಲ್ಲ ಕಾಶ್ಮೀರಿ ಮುಸ್ಲಿಮರಿಗೆ ಮುಟ್ಟಿಸಬೇಕಾದ ಸಂದೇಶ

Leave a Reply