ಕಾಶ್ಮೀರಿಗರಿಗೆ ವಿಕೆ ಸಿಂಗ್ ಹೇಳಿದ್ದೇನು? ಕೇಂದ್ರದ ವಿರುದ್ಧ ಕೇಜ್ರಿ ಕಿಡಿ, ಜಿಎಸ್ಟಿಗೆ ಮೋದಿ ಮನವಿ

Master Om Swaroop Gowda during attempt of Guiness World Record in Limbo Skating at Orion Mall in Bengaluru on Sunday. Father Yogesh and Mother Sunitha were present during the occasion.

ಬೆಂಗಳೂರಿನ ಯುವ ಪ್ರತಿಭೆ ಓಂ ಸ್ವರೂಪ್ ಗೌಡ ‘ಲಿಂಬೊ ಸ್ಕೇಟಿಂಗ್ ‘ನಲ್ಲಿ ಕೇವಲ 33.64 ಸೆಕೆಂಡ್ ಗಳಲ್ಲಿ 36 ಕಾರುಗಳ ಕೆಳಗೆ ಸಾಗುವ ಮೂಲಕ ಗಿನ್ನಿಸ್ ದಾಖಲೆ ಬರೆದಿದ್ದು, ಭಾನುವಾರ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕೃತವಾಗಿ ಪ್ರಮಾಣ ಪತ್ರ ನೀಡಿದೆ.

ಡಿಜಿಟಲ್ ಕನ್ನಡ ಟೀಮ್:

ಕಾಶ್ಮೀರಿಗರಿಗೆ ವಿ.ಕೆ ಸಿಂಗ್ ಕರೆ

‘ಪ್ರತಿಭಟನಾ ಗುಂಪಿನಿಂದ ಹೊರಬಂದು ಭವ್ಯ ಭಾರತ ಇತಿಹಾಸದ ಭಾಗವಾಗಿ…’ ಇದು ಕಾಶ್ಮೀರ ನಾಗರೀಕರಿಗೆ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ.ಕೆ ಸಿಂಗ್ ನೀಡಿದ ಕರೆ. ಉಗ್ರನ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋದಕ್ಕೆ ಬೇಸರ ವ್ಯಕ್ತಪಡಿಸಿದ ಸಿಂಗ್, ಈ ಕಠಿಣ ಸಂದರ್ಭದಲ್ಲಿ ಸರ್ಕಾರದ ಜತೆ ಸಹಕರಿಸುವ ಮೂಲಕ ಭಾರತದ ಭಾಗವಾಗಲು ಕಾಶ್ಮೀರ ಜನರಿಗೆ ಮನವಿ ಮಾಡಿದ್ದಾರೆ.

ಭಾನುವಾರ ಈ ಬಗ್ಗೆ ವಿ.ಕೆ ಸಿಂಗ್ ಹೇಳಿರುವುದಿಷ್ಟು:

‘ಕಾಶ್ಮೀರ ಎಂದೆಂದಿಗೂ ಭಾರತದ್ದಾಗಿಯೇ ಉಳಿಯುತ್ತದೆ. 1947 ರಿಂದ ಇಲ್ಲಿಯವರೆಗೂ ಈ ಕುರಿತ ಭಿನ್ನ ಯೋಚನೆ ಬಂದಿಲ್ಲ, ಬರುವುದೂ ಇಲ್ಲ. 2004 ರಲ್ಲಿ ಭಾರತದ ಪ್ರಧಾನಿ ಭಾರತದ ಗಡಿರೇಖೆಯನ್ನು ಬದಲಿಸುವುದಿಲ್ಲ. ಆದರೆ ದೇಶಗಳ ನಡುವಣ ಸಾರಿಗೆಗೆ ಅನುಮತಿ ನೀಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ವಾಸ್ತವಿಕ ಅಂಶವನ್ನು ಬೇಗ ಅಪ್ಪಿಕೊಂಡಷ್ಟು ಪರಿಸ್ಥಿತಿಯು ಬೇಗನೆ ಸುಧಾರಿಸುತ್ತದೆ. ನಮಗೆ ಸಹಕಾರ ನೀಡಿ ಅದರಿಂದ ನಾವು ನಿಮಗೆ ನೆರವು ನೀಡಲು ಸಾಧ್ಯ. ಭಾರತದ ಸಾಮರ್ಥ್ಯ ಇಡೀ ವಿಶ್ವಕ್ಕೆ ಗೊತ್ತಿದೆ. ಭವಿಷ್ಯದಲ್ಲೂ ಭಾರತದ ಸ್ಥಾನಮಾನ ವಿಶೇಷವಾಗಿರಲಿದೆ. ಹೀಗಾಗಿ ಭಾರತದ ಭವ್ಯ ಇತಿಹಾಸದ ಭಾಗವಾಗಲು ಪ್ರತಿಭಟನೆಯಿಂದ ಹೊರಬಂದು ಭವಿಷ್ಯದತ್ತ ಗಮನಹರಿಸಿ.’

ಇನ್ನು ಭಾನುವಾರವೂ ಕಣಿವೆ ರಾಜ್ಯದಲ್ಲಿ ಕರ್ಫ್ಯೂ ಮುಂದುವರಿದಿದೆ. ದೂರವಾಣಿ ಸಂಪರ್ಕ ಕಡಿತಗೊಂಡಿದ್ದು, ಪತ್ರಿಕೆಗಳ ಮೇಲೆ ನಿಷೇಧ ಹೇರಲಾಗಿದೆ.

ಜಿಎಸ್ಟಿ ಮಸೂದೆ ಅಂಗೀಕಾರಕ್ಕೆ ಮೋದಿ ಮನವಿ

ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆ ಅಂಗೀಕರಿಸಲು ಸಹಕಾರ ನೀಡಿ ಎಂದು ವಿರೋಧ ಪಕ್ಷಗಳನ್ನು ಕೇಳಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ನಾಳೆಯಿಂದ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಭಾನುವಾರ ನವದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಸಲಾಗಿತ್ತು. ರಾಜ್ಯಸಭೆಯಲ್ಲಿ ಈ ಮಸೂದೆ ಜಾರಿಗೊಳಿಸಲು ಸಹಕಾರ ಕೋರಿದ ವೇಳೆ ಮೋದಿ ಹೇಳಿದಿಷ್ಟು:

‘ನಾವು ಇಲ್ಲಿ ಜನರು ಹಾಗೂ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇವೆ. ಈ ವೇಳೆ ದೇಶದ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಜಿಎಸ್ಟಿ ಮಸೂದೆ ದೇಶಕ್ಕೆ ಅಗತ್ಯವಾಗಿದೆ. ಇಲ್ಲಿ ಯಾವ ಪಕ್ಷಕ್ಕೆ ಶ್ರೇಯ ಸಲ್ಲುತ್ತದೆ ಎಂಬುದು ಮುಖ್ಯವಲ್ಲ. ದೇಶಕ್ಕೆ ಅಗತ್ಯವಿರುವ ಮಸೂದೆ ಅಗೀಕಾರವಾಗಬೇಕು. ಜಿಎಸ್ಟಿ ಸೇರಿದಂತೆ ಪ್ರಮುಖ ಮಸೂದೆಗಳನ್ನು ಮುಂಗಾರು ಅಧಿವೇಶನದಲ್ಲಿ ಚರ್ಚೆ ನಡೆಸಿ ಉತ್ತಮ ಫಲಿತಾಂಶ ಪಡೆಯುವ ಭರವಸೆ ಇದೆ.’

ಕೇಂದ್ರದ ವಿರುದ್ಧ ಮತ್ತೆ ಕೇಜ್ರಿ ಕಿಡಿ

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಬಂಧ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧದಂತಿದೆ’ ಹೀಗೆಂದು ಹೇಳುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ಸಮರ ಮುಂದುವರಿಸಿದ್ದಾರೆ. ‘ಟಾಕ್ ಟು ಎಕೆ’ ಕಾರ್ಯಕ್ರಮದ ಮೊದಲ ಆವೃತ್ತಿಯಲ್ಲಿ ಜನರೊಂದಿಗೆ ನೇರ ಚರ್ಚೆ ನಡೆಸಿದ ಕೇಜ್ರಿವಾಲ್, ಜನರ ಪ್ರಶ್ನೆಗೆ ಉತ್ತರಿಸುವ ವೇಳೆ ಈ ಹೋಲಿಕೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಹೇಳಿದಿಷ್ಟು:

‘ಕೇಂದ್ರ ಸರ್ಕಾರ ನಮ್ಮ ಜತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಪರಿಸ್ಥಿತಿ ನಿರ್ಮಿಸಿದೆ. ಈ ಪರಿಸ್ಥಿತಿ ನಿರ್ಮಾಣವಾಗದೇ ಇದ್ದಿದ್ದರೆ ರಾಜ್ಯದಲ್ಲಿ ಇನ್ನು ನಾಲ್ಕುಪಟ್ಟು ಉತ್ತಮ ಕೆಲಸಗಳನ್ನು ಮಾಡುತ್ತಿದ್ದೆವು. ನನ್ನಿಂದ ಯಾವುದಾದರು ತಪ್ಪಾಗಿದ್ದರೆ ಕ್ಷಮಿಸಿ ಎಂದು ಮನವಿ ಮಾಡಿದ್ದೇನೆ. ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದು ಕೇಂದ್ರ ಸರ್ಕಾರದಿಂದ ಅಡಚಣೆಗಳು ಬಾರದಿದ್ದರೆ ಇನ್ನು ಹೆಚ್ಚಿನ ಕೆಲಸ ಮಾಡುತ್ತಿದ್ದೆ. ಪ್ರಧಾನಿ ಅವರ ಕಣ್ಣಿಗೆ ನಾನು ದೇಶದ ಏಕೈಕ ಭ್ರಷ್ಟಾಚಾರ ಮುಖ್ಯಮಂತ್ರಿಯಾಗಿ ಕಾಣಿಸುತ್ತಿದ್ದೇನೆ. ಕೇಂದ್ರ ಬೇರೆ ಪಕ್ಷಗಳೊಂದಿಗೆ ಸೇರಿ ನಮ್ಮನ್ನು ಹಣಿಯಲು ನೋಡುತ್ತಿದೆ. ರಾಬರ್ಟ್ ವಾದ್ರ, ಸೋನಿಯಾ ಗಾಂಧಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಎಫ್ಐಆರ್ ದಾಖಲಾಗಿದೆಯೇ? ಕೇಂದ್ರ ಸರ್ಕಾರ ನನ್ನನ್ನು ನೋಡಿ ಭಯ ಪಡುತ್ತಿಲ್ಲ. ನನ್ನ ಪ್ರಾಮಾಣಿಕತೆಯನ್ನು ನೋಡಿ ಭಯಪಡುತ್ತಿದೆ.’

Leave a Reply