ಇಂಟೀರಿಯರ್ ಕೆಫೆ ನೈಟ್- ದೂರವಾದ ಪ್ರೇಮಿಗಳು ಮತ್ತೆ ಸೇರಿದ ಸಾಧಾರಣ ಎಳೆಯನ್ನೇ ಅನನ್ಯವಾಗಿ ಅರಳಿಸಿದಾಗ…

ಡಿಜಿಟಲ್ ಕನ್ನಡ ಟೀಮ್:

ಇಬ್ಬರು ಪ್ರೇಮಿಗಳು ಪ್ರೀತಿಸಿ, ನಂತರ ಬೇರೆಯಾಗಿ, ಮತ್ತೆ ಸೇರೋದು… ಈ ಎಳೆಯಲ್ಲಿ ಅವೆಷ್ಟೋ ಚಿತ್ರಗಳು ಬಂದು ಹೋಗಿರೋದನ್ನು ನಾವೆಲ್ಲಾ ನೋಡಿದ್ದೆವೆ. ಆದ್ರೆ, ಇದೇ ಎಳೆಯನ್ನು ಇಟ್ಟುಕೊಂಡು ಆದಿರಾಜ್ ಬೋಸೆ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಇಂಟೀರಿಯರ್ ಕೆಫೆ ನೈಟ್ ಎಂಬ ಕಿರು ಚಿತ್ರ ನೀಡುವ ಅನುಭವವೇ ವಿಭಿನ್ನ.

ಪರಿಸ್ಥಿತಿಯ ಇಕ್ಕಟ್ಟಿಗೆ ಸಿಲುಕಿ ಬೇರೆಯಾದ ಪ್ರೇಮಿಗಳು ಮತ್ತೆ ಅಚಾನಕ್ಕಾಗಿ ಮುಖಾಮುಖಿಯಾದಾಗ ಅದೂ ದಶಕಗಳ ನಂತರ ತಮ್ಮ ಇಳಿ ವಯಸ್ಸಿನಲ್ಲಿ. ಇಬ್ಬರನ್ನು ಬೇರ್ಪಡಿಸಿದ್ದ ಕಾಲವೇ ಅವರು ಮತ್ತೆ ಸೇರಲು ಅವಕಾಶ ಕಲ್ಪಿಸಿ ಕೊಟ್ಟರೆ ಹೇಗೆ? ಇಂಥ ಕತೆಗಳು ಎಷ್ಟೋ ಬಂದಿವೆ ಅಂದಿರಾ? ನಿಜ, ಅಷ್ಟಾಗಿಯೂ 13 ನಿಮಿಷ ನಿಮ್ಮನ್ನಿದು ಹಿಡಿದಿಟ್ಟುಕೊಳ್ಳುತ್ತದೆ ಎಂಬಲ್ಲಿಯೇ ನಿರೂಪಣೆಯ ಹೊಸತನವಿದೆ.

ಪ್ರೇಮಿಗಳು ದೂರವಾಗುವಾಗ ಅವರಿಗಾಗುವ ನೋವು.. ಹಾಗೂ ಮತ್ತೇ ಸೇರಿದಾಗ ಆಗುವ ಸಂತೋಷ.. ಒಂದೇ ಪ್ರೇಮಿಗಳು ಎದುರಿಸುವ ಈ ಎರಡು ಸನ್ನಿವೇಶಗಳನ್ನು ಅತ್ಯುತ್ತಮವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಆದಿರಾಜ್ ಬೋಸೆ. ಚಿತ್ರದಲ್ಲಿ ಪ್ರೇಮಿಗಳಾಗಿ ನಾಸಿರುದ್ದೀನ್ ಶಾ, ಶೆರ್ನಜ್ ಪಟೇಲ್ ಜತೆಗೆ ನವೀನ್ ಕಸ್ತೂರಿಯಾ ಮತ್ತು ಶ್ವೇತ ಪ್ರಸಾದ್ ನಟನೆ ಉತ್ತಮ ಚಿತ್ರಕ್ಕೆ ಕೇವಲ ಜೀವವನ್ನಷ್ಟೇ ಅಲ್ಲ ಭಾವನೆಗಳನ್ನೂ ತುಂಬಿದೆ. ಈ ಹಿಂದೆ ಅಹಲ್ಯಾ ಎಂಬ ಅದ್ಭುತ ಕಿರುಚಿತ್ರ ಕೊಟ್ಟಿದ್ದ ‘ಲಾರ್ಜ್ ಶಾರ್ಟ್ ಫಿಲ್ಮ್’ ಯೂಟ್ಯೂಬ್ ಚಾನೆಲ್ ನ ಈ ಬಾರಿಯ ಕೊಡುಗೆ ಇದು.

Leave a Reply