29 ಜನರನ್ನು ಹೊತ್ತು ಸಾಗಿದ್ದ ಭಾರತೀಯ ವಾಯು ಸೇನೆಯ ಎಎನ್-32 ವಿಮಾನ ನಾಪತ್ತೆ!

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ನಾಪತ್ತೆಯಾಗಿದೆ. ಬೆಳಗ್ಗೆ 8.30 ರ ಸುಮಾರಿಗೆ ಚೆನ್ನೈನ ತಂಬರಮ್ ವಾಯುನೆಲೆಯಿಂದ 29 ಜನರನ್ನು ಹೊತ್ತು ಸಾಗಿದ ವಿಮಾನ ನಂತರ ಕಣ್ಮರೆಯಾಗಿದೆ.

ನಿಗದಿಯಂತೆ ಈ ವಿಮಾನ ಅಂಡಮಾನ್ ದ್ವೀಪದಲ್ಲಿರುವ ಪೊರ್ಟ್ ಬ್ಲೈರ್ ಗೆ 11.20 ಸುಮಾರಿಗೆ ತಲುಪಬೇಕಿತ್ತು. ಆದ್ರೆ ವಿಮಾನ ತಲುಪಿಲ್ಲ. ಇನ್ನು ಅಧಿಕಾರಿಗಳ ಹೇಳಿಕೆ ಪ್ರಕಾರ ವಿಮಾನ ಹಾರಾಟ ಆರಂಭಿಸಿದ 15 ನಿಮಿಷಗಳ ನಂತರ ಅಂದರೆ, 8.46ಕ್ಕೆ ಕಡೆಯ ಬಾರಿಗೆ ಸಂಪರ್ಕ ಸಾಧಿಸಿದ್ದು, ವಿಮಾನ 23 ಸಾವಿರ ಅಡಿಗಳ ಎತ್ತರದಲ್ಲಿ ಹಾರಾಟ ಮಾಡುತ್ತಿತ್ತು. ಈ ವಿಮಾನದಲ್ಲಿ ಅಪಘಾತ ಸಂಭವಿಸಿದರೆ, ತುರ್ತು ಸ್ಥಳ ಪತ್ತೆ ಹಚ್ಚುವ ಸಾಧನವಿದೆ. ಆದರೆ, ಇದರಿಂದ ಈವರೆಗೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ.

ಭಾರತೀಯ ವಾಯು ಸೇನೆ, ನೌಕಾ ಸೇನೆ ಮತ್ತು ಕರಾವಳಿ ಪಡೆಗಳು ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಿದೆ. ನೌಕಾ ಪಡೆ ಕಾರ್ಯಾಚರಣೆಯಲ್ಲಿ ಡಾರ್ನಿಯರ್ ಶ್ರೇಣಿ ಯುದ್ಧ ವಿಮಾನಗಳನ್ನು ಮತ್ತು ಕರ್ಮುಖ, ಘಾರಿಯಲ್, ಜ್ಯೋತಿ ಮತ್ತು ಕುತಾರ್ ಹಡಗುಗಳನ್ನು ಕಾರ್ಯಾಚರಣೆಗೆ ಇಳಿಸಿದೆ.

‘ಬಂಗಾಳ ಕೊಲ್ಲಿ ಭಾಗದಲ್ಲಿ ವಿಮಾನ ಹುಡುಕಾಟ ಕಾರ್ಯಾಚರಣೆ ಆರಂಭವಾಗಿದೆ. ಸದ್ಯದ ಮಟ್ಟಿಗೆ ಇದನ್ನು ತಡವಾಗಿದೆ ಎಂದಷ್ಟೇ ಪರಿಗಣಿಸುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ ಕ್ಯಾಪ್ಟನ್ ಡಿ.ಕೆ ಶರ್ಮಾ.

Leave a Reply