ಮುಂದುವರಿಯಲಿದೆ ಸಾರಿಗೆ ನೌಕರರ ಮುಷ್ಕರ, ಇಲ್ಲಿದೆ ಇಂದೇನಾಯ್ತೆಂಬುದರ ಚಿತ್ರ

 

ಡಿಜಿಟಲ್ ಕನ್ನಡ ಟೀಮ್:

ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ರಸ್ತೆ ಸಾರಿಗೆ ನೌಕರರು ರಾಜ್ಯಾದ್ಯಂತ ಆರಂಭಿಸಿರುವ ಮುಷ್ಕರ ಮೊದಲ ದಿನ ಯಶಸ್ವಿಯಾಗಿದ್ದು, ಜೋರಾಗಿ ಬಿಸಿ ಮುಟ್ಟಿದ್ದು ಮಾತ್ರ ಪ್ರಯಾಣಿಕರಿಗೆ. ಈ ವೇಳೆ ತಮ್ಮ ಬಿಗಿ ಪಟ್ಟು ಮುಂದುವರಿಸಿರುವ ರಾಜ್ಯ ಸರ್ಕಾರ, ಮೊದಲು ಮುಷ್ಕರ ನಿಲ್ಲಿಸಿ ಆ ಮೇಲೆ ಮಾತುಕತೆಗೆ ಸಿದ್ಧ ಎಂದು ಸಂದೇಶವನ್ನು ರವಾನಿಸಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಎಲ್ಲೆಡೆ ಮುಷ್ಕರ ಯಶಸ್ವಿಯಾಗಿದ್ದು ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಈ ಮಧ್ಯೆ ಕೆಲವೆಡೆ ಮುಷ್ಕರವಿದ್ದರೂ ಬಸ್ಸುಗಳನ್ನು ರಸ್ತೆಗಿಳಿಸಿದ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಮುಷ್ಕರ ನಿರತರು ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಜತೆಗೆ ಹೊರ ರಾಜ್ಯದ ಬಸ್ ಸಂಚಾರಕ್ಕೆ ಆಡ್ಡಿ ಪಡಿಸಿ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ಸುಮಾರು 140 ಬಸ್ ಗಳು ಜಖಂಗೊಂಡಿದ್ದು, ಕೆಲವರಿಗೆ ಗಾಯಗಳಾಗಿವೆ.

bus strike4

bus strike6

ಸರ್ಕಾರದ ನಿಲುವೇನು?

ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಷ್ಕರದ ಹಿನ್ನೆಲೆ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಮತ್ತು ಪೊಲೀಸ್ ಇಲಾಖೆ ಆಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಪಡೆದರೆ, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್, ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ವಿಕಾಸ ಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. ನಂತರ ಈ ಸಭೆಯಲ್ಲಿನ ಮಾಹಿತಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಿದರು. ನೌಕರರ ಬೇಡಿಕೆ ಮಣಿದು ಶೇ.12.5 ರಷ್ಟು ವೇತನ ಹೆಚ್ಚಳ ಮಾಡಿ ಆರು ತಿಂಗಳ ನಂತರ ಮತ್ತೆ ಶೇ.2.5 ರಷ್ಟು ವೇತನ ಕೊಡಲು ಅಧಿಕಾರಿಗಳು ಪ್ರಸ್ತಾಪವನ್ನು ಮುಖ್ಯಮಂತ್ರಿಗಳಿಗೆ ನೀಡಲಾಯ್ತು.

ಆದ್ರೆ, ಅಧಿಕಾರಿಗಳ ಶಿಫಾರಸನ್ನು ತಳ್ಳಿ ಹಾಕಿದ ಸಿಎಂ, ‘ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗಿಲ್ಲ. ನಾವು ಅವರಿಗೆ ಹೆದರಿ ಮಣಿಯುವುದು ಬೇಡ. ಶೇ.10 ರಷ್ಟು ವೇತನ ಹೆಚ್ಚಿಸುವುದನ್ನು ಅವರು ಒಪ್ಪಿಕೊಳ್ಳಲಿ. ಮೊದಲು ಮುಷ್ಕರ ನಿಲ್ಲಿಸಿ ಮಾತುಕತೆಗೆ ಬರಲಿ ನಂತರ ತೀರ್ಮಾನ ಕೈಗೊಳ್ಳೋಣ. ಈಗಾಗಲೇ ಶೇ.10 ರಷ್ಟು ಕೊಡಲು ಸರ್ಕಾರ ಸಮ್ಮತಿಸಿದೆ. ಇದರಿಂದ ವಾರ್ಷಿಕ 1550 ಕೋಟಿ ರೂ. ಹೊರೆ ಬೀಳುತ್ತದೆ. ಅವರ ಕೋರಿಕೆಯಂತೆ ಶೇ.30 ರಷ್ಟು ಮಾಡಿದರೆ ಸಂಸ್ಥೆಯನ್ನೇ ಮುಚ್ಚಬೇಕಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಠಿಣ ತೀಮಾನಕ್ಕೆ ಬರೋಣ. ಅಲ್ಲಿಗೂ ಸರಿ ಹೋಗದಿದ್ದರೆ ಎಸ್ಮಾ ಬಗಗೆ ಯೋಚಿಸೋಣ’ ಎಂದು ಅಧಿಕಾರಿಗಳಿಗೆ ಸೂಚಿಸಿದರೆನ್ನಲಾಗಿದೆ.

bang trafic

ಮುಷ್ಕರದ ದಿನ ಅತಿ ವಸೂಲಾತಿ, ಕಾನೂನು ಉಲ್ಲಂಘನೆಗಳಲ್ಲಿ ತೊಡಗಿಕೊಂಡಿದ್ದ 1972 ಆಟೋ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ 158 ಆಟೋಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರ ಟ್ವಿಟ್ಟರ್ ಪ್ರಕಟಣೆ ತಿಳಿಸಿದೆ.

ಪ್ರತಿಭಟನಾ ನಿರತರ ಪಟ್ಟೇನು?

ಪ್ರತಿಭಟನೆಗೆ ಕರೆಕೊಟ್ಟ ಸಂಘಟನೆ ಮುಂದಾಳುಗಳು ಮಾಧ್ಯಮಗಳ ಮೂಲಕ ನೀಡುತ್ತಿರುವ ಹೇಳಿಕೆಗಳಲ್ಲಿ ಇರುವ ಸಾರಾಂಶ ಇಷ್ಟು. ‘ಆರು ತಿಂಗಳ ಹಿಂದೆಯೇ ಮುಷ್ಕರದ ಎಚ್ಚರಿಕೆ ನೀಡಿ ಬೇಡಿಕೆಗಳ ಪಟ್ಟಿ ಕೊಟ್ಟಿದ್ದರೂ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಈಗ ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ ಎಂಬ ಇವರ ಮಾತು ನಂಬಲರ್ಹವಲ್ಲ. ಕೇವಲ ಸಂಬಳದ ಏರಿಕೆ ಅಂಶವನ್ನು ಮಾತ್ರ ಬಿಂಬಿಸುವುದು ಸರಿಯಲ್ಲ. ಇಲಾಖೆಯಲ್ಲಿ ಕಿರುಕುಳ ಕಡಿಮೆ ಮಾಡುವ ಬಗ್ಗೆ ಕೆಲ ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟಿದ್ದೇವೆ. ಇಷ್ಟೇ ಸರಾಸರಿ ಸಂಬಳ ಏರಿಕೆಯಾಗಲಿ ಎಂದು ಹಠ ಹಿಡಿಯುತ್ತಿಲ್ಲ. ನಮ್ಮ ನಲ್ವತ್ತಕ್ಕೂ ಹೆಚ್ಚು ಬೇಡಿಕೆಗಳಲ್ಲಿ ಅದು ಒಂದು ಮಾತ್ರ. ಸರ್ಕಾರಕ್ಕೆ ನಿಜಕ್ಕೂ ಮಾತುಕತೆ ನಡೆಸುವ ಮನಸ್ಸು ಇಲ್ಲ..’

Pigeons flock deserted Kempegowda Bus Terminal as KSRTC/BMTC wor

ಬಸ್ಸುಗಳ ಸರಭರವಿರುವಾಗ ಈ ಜೀವಿಗಳಿಗೆ ಜಾಗವಿರಲಿಲ್ಲ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸೋಮವಾರ ಪಾರಿವಾಳಗಳ ಸಾಮ್ರಾಜ್ಯ…

 

bus strike5

ಒಬ್ಬರ ನಷ್ಟ, ಇನ್ನೊಬ್ಬರ ಲಾಭವಾಗುವುದು ಅತಿ ಸಹಜ ನಿಯಮ.. ಖಾಸಗಿ ಬಸ್ಸುಗಳಿಗೆ ಶುಭ ಸೋಮವಾರ..

 

.
ಜಗತ್ತೇ ಖಾಲಿ ಹೊಡೆದರೂ ನನ್ನ ಕಾಯಕ ನನ್ನದು…. ಎಂಬಂತಿದೆ ಬೆಂಗಳೂರು ನಗರ ಬಸ್ ನಿಲ್ದಾಣದಲ್ಲಿ ಸಿಕ್ಕ ಈ ಬಿಂಬ

bus strike1

ಹಿಂಗೂ ಉಂಟು…

Leave a Reply