ಜಲಾವೃತ ಪ್ರದೇಶದಲ್ಲಿದ್ದ ಜನರನ್ನು ಬೋಟ್ ಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ…
ಡಿಜಿಟಲ್ ಕನ್ನಡ ಟೀಮ್:
ಭಾರಿ ಮಳೆಯಿಂದಾಗಿ ಬೆಂಗಳೂರಿನ ಕೆಲವು ಭಾಗಗಳು ಸಂಪೂರ್ಣವಾಗಿ ತತ್ತರಿಸಿವೆ. ಮನೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳಲ್ಲಿ ನೀರು ನಿಂತಿದ್ದು ಶುಕ್ರವಾರ ಬಹುತೇಕ ಪ್ರದೇಶಗಳಲ್ಲಿನ ಸಾಮಾನ್ಯ ದೃಶ್ಯವಾಗಿತ್ತು.
ಈ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮಂಜುನಾಥ ರೆಡ್ಡಿ ಪರಿಸ್ಥಿತಿ ಪರಿಶೀಲಿಸಿದರು. ಮತ್ತೊಂದೆಡೆ ಪಾಲಿಕೆ ಸರಿಯಾದ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಜನರು ಹಿಡಿ ಶಾಪ ಹಾಕಿದರು. ಇದಕ್ಕೆ ಉತ್ತರ ನೀಡುತ್ತಾ ಮೇಯರ್ ಮಂಜುನಾಥ ರೆಡ್ಡಿ ಹೇಳಿದಿಷ್ಟು: ‘ಈ ಪ್ರದೇಶಗಳಲ್ಲಿ ಒತ್ತುವರಿ ಪ್ರಮಾಣ ಹೆಚ್ಚಾಗಿದೆ. ಇವುಗಳ ತೆರವು ಕಾರ್ಯ ಆರಂಭವಾಗಿದೆಯಾದರೂ ಕಾರ್ಯಾಚರಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುವುದರಿಂದ ಪರಿಸ್ಥಿತಿ ಸುಧಾರಿಸಿಲ್ಲ.’
ಉಳಿದಂತೆ ಮಡಿವಾಳ ಹಾಗೂ ಕೋಡಿಚಿಕ್ಕನಹಳ್ಳಿಯ ಪ್ರದೇಶಗಳಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಈ ಚಿತ್ರಗಳಲ್ಲಿ ನೋಡಬಹುದು.
ಮಡಿವಾಳ ಕೆರೆ ತುಂಬಿ ರಸ್ತೆಯಲ್ಲಿ ಹರಿಯುವಾಗ ಮೀನು ಹಿಡಿದ ದೃಶ್ಯ…
ರಸ್ತೆಯಲ್ಲಿ ತುಂಬಿದ್ದ ನೀರಿನಲ್ಲೇ ಯುವಕ ಈಜು ಹೊಡೆದು ಆನಂದಿಸಿದ್ದು ಹೀಗೆ…
ಮನೆಯೊಳಗೆ ಮಳೆ ನೀರು ನುಗ್ಗಿದಾಗ ಆದ ಅವಾಂತರ ಹೀಗಿತ್ತು…
ಪ್ರವಾಹದಂತಾಗಿದ್ದ ಪರಿಸ್ಥಿತಿಯಲ್ಲಿ ಜನರಿಗೆ ಹಾಲು, ಆಹಾರ ಸೇರಿದಂತೆ ಅಗತ್ಯ ವಸ್ತು ಪೂರೈಸುತ್ತಿರುವ ಯುವಕರು..