ಕರ್ನಾಟಕ ಬಂದ್: ಕನ್ನಡ ಪರ ಸಂಘಗಳಿಗೆ ಚಿತ್ರೋದ್ಯಮದ ಸಾಥ್.. ಸಂಪೂರ್ಣವಾಗಿ ಬಿಕೋ ಅಂತು ಬೆಂಗಳೂರು..

Film Actors, Film industry workers and various Kannada Activist groups during Mahadayi Issue rally from Town Hall to Freedom Park in Bengaluru on Saturday.

ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು…

ಡಿಜಿಟಲ್ ಕನ್ನಡ ಟೀಮ್:

ಬಸ್, ಆಟೋ, ಕ್ಯಾಬ್ ಗಳು ಬೀದಿಗಿಳಿಯದೇ ಬೇಕೋ ಎನ್ನುತ್ತಿದ್ದ ರಸ್ತೆಗಳು, ಸಂಪೂರ್ಣವಾಗಿ ಮುಚ್ಚಿದ್ದ ಅಂಗಡಿ ಮುಂಗಟ್ಟುಗಳು, ರಸ್ತೆಗಳಲ್ಲಿ ಪ್ರತಿಭಟನಾಕಾರರ ಮೆರವಣಿಗೆಗಳು… ಇವು ಮಹದಾಯಿ ನ್ಯಾಯಾಧಿಕರಣ ಮಧ್ಯಂತರ ತೀರ್ಪು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಸಿಕ್ಕ ಪ್ರತಿಕ್ರಿಯೆ. ಇದರೊಂದಿಗೆ ಉತ್ತರ ಭಾಗದ ಜನರಿಗೆ ಆಗಿರುವ ಅನ್ಯಾಯಕ್ಕೆ ಇಡೀ ರಾಜ್ಯವೇ ಸ್ಪಂದಿಸಿದೆ.

ಬಂದ್ ಪರಿಣಾಮವಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ ಬಸ್ಸುಗಳು ಬೀದಿಗಿಳಿಯಲಿಲ್ಲ. ಆಟೋರಿಕ್ಷಾ ಸೇರಿದಂತೆ ಯಾವುದೇ ಬಗೆಯ ಸಂಚಾರ ಇಲ್ಲದ ಪರಿಣಾಮ ಜನಜೀವನ ಸಂಪೂರ್ಣವಾಗಿ ಹದಗೆಟ್ಟಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಕನ್ನಡ ಚಳವಳಿ ವಾಟಾಳ್ ಪಕ್ಷ, ಕನ್ನಡ ಚಲನಚಿತ್ರ ರಂಗ ಹೋರಾಟಕ್ಕಿಳಿದವು. ಪರಿಣಾಮವಾಗಿ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದವು.

Commuters wait for the bus at Sattelite bus stand due to Karnatka Bandh in Bengaluru on Saturday.

ಬೆಂಗಳೂರಿನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ನಿದ್ದೆಗೆ ಜಾರಿರುವುದು…

ರಾಜ್ಯಾದ್ಯಂತ ನೂರಾರು ಪ್ರತಿಭಟನಾ ಮೆರವಣಿಗೆಗಳ ಮೂಲಕ ರಾಜ್ಯದ ಜನರು ತಮ್ಮ  ಶಕ್ತಿ ಪ್ರದರ್ಶನ ಮಾಡಿದರು. ದಿನನಿತ್ಯದ ಅವಶ್ಯಕತೆಯಾದ ಹಾಲು, ಔಷಧಿ ಅಂಗಡಿಗಳು ತೆರೆದಿದ್ದು ಬಿಟ್ಟರೆ ರಾಜ್ಯದ ಬಹುತೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಯ್ತು. ಇನ್ನು ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಎಂದಿನಂತೆ ಜನಜೀವನ ಸಾಗಿತು.

ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ)ಯ ಮಹಿಳಾ ಕಾರ್ಯಕರ್ತರು ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೇ ತಕ್ಷಣವೇ ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

M.G.Raod deserted due to Karnatka Bandh in Bengaluru on Saturday.

ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿರುವ ಎಂ.ಜಿ ರಸ್ತೆ…

ಇನ್ನು ನಗರದ ಟೌನ್ ಹಾಲ್ ನಿಂದ ಗಾಂಧಿನಗರದ ಮೂಲಕ ಫ್ರೀಡಂ ಪಾರ್ಕ್ ವರೆಗೂ ನಡೆದ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ ಅನೇಕ ಸ್ಟಾರ್ ನಟ ನಟಿಯರು ಭಾಗವಹಿಸಿದ್ರು. ನಟ ಶಿವರಾಜ್ ಕುಮಾರ್ ಹಾಗೂ ಕನ್ನಡ ಚಳುವಳಿ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನೆ ಮೆರವಣಿಗೆ ಸಾಗಿತು. ಭಾರಿ ಮಳೆಯ ನಡುವೆಯೂ ಈ ಪ್ರತಿಭಟನೆ ಮುಂದುವರಿಸಿ ಪ್ತರತಿಯೊಬ್ಬರು ತಮ್ಮ ಹೋರಾಟವನ್ನು ನಡೆಸಿದರು.

Film Actors, Film industry workers and various Kannada Activist groups during Mahadayi Issue rally from Town Hall to Freedom Park in Bengaluru on Saturday.

ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೂ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ರಮೇಶ್ ಅರವಿಂದ್, ಶಿವರಾಜ್ ಕುಮಾರ್, ಯಶ್, ಹಿರಿಯ ನಟ ಶಿವರಾಂ ಹಾಗೂ ರವಿಶಂಕರ್…

ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ಹೇಳಿದಿಷ್ಟು:

‘ನಾವು ಶಕ್ತಿ ಪ್ರದರ್ಶನಕ್ಕಾಗಿ ಬೀದಿಗಿಳಿದಿಲ್ಲ, ಜನರಿಗಾಗಿ ಬಂದಿದ್ದೇವೆ. ಹರಟೆ, ತಮಾಷೆಗಾಗಿ ಎಂದಿಗೂ ಹೋರಾಟ ಮಾಡಬಾರದು. ನಮ್ಮ ಹೋರಾಟ ಎಂದಿಗೂ ಅರ್ಥಪೂರ್ಣವಾಗಿರಬೇಕು. ಮಹದಾಯಿಗಾಗಿ ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಲು ಸಿದ್ಧ. ಮಹದಾಯಿ ನೀರು ನಮ್ಮದೇ, ಅದು ನಮಗೆ ಸಿಗಲೇಬೇಕು. ಮಹದಾಯಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆ.’

Leave a Reply