ಭಾರತದ ಜಯವನ್ನು ಕಿತ್ತುಕೊಳ್ತು ಚೇಸ್ ಚಮತ್ಕಾರಿ ಬ್ಯಾಟಿಂಗ್

Jamaica India West Indies Cricket

ಡಿಜಿಟಲ್ ಕನ್ನಡ ಟೀಮ್:

ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಆಘಾತಕಾರಿ ಕುಸಿತ ಕಂಡ ನಂತರ ಮಳೆಯ ರಕ್ಷಣೆ ಪಡೆದಿದ್ದ ಆತಿಥೇಯ ವೆಸ್ಟ್ ಇಂಡೀಸ್, ಅಂತಿಮ ದಿನವು ಸೋಲಿನಿಂದ ಪಾರಾಗುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಮಳೆಯ ನೆರವು ಪಡೆಯದೇ ತನ್ನ ಪ್ರದರ್ಶನದ ಮೂಲಕ ಪಾರಾಗಿರುವುದು ಗಮನಾರ್ಹ. ಈ ಶ್ರೇಯ ಸಲ್ಲಬೇಕಿರೋದು ವಿಂಡೀಸ್ ಮಧ್ಯಮ ಕ್ರಮಾಂಕ ಬ್ಯಾಟ್ಸ್ ಮನ್ ರೊಸ್ಟನ್ ಚೇಸ್ (ಅಜೇಯ 137 ರನ್, 269 ಎಸೆತ, 15ಬೌಂಡರಿ, 1 ಸಿಕ್ಸರ್) ಗೆ.

ಜಮೈಕಾದ ಸಬಿನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನ ವೆಸ್ಟ್ ಇಂಡೀಸ್ ಅತ್ಯದ್ಭುತ ರೀತಿಯಲ್ಲಿ ಹೋರಾಟ ನಡೆಸಿತು. ಅದರೊಂದಿಗೆ ತನ್ನ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಗೆ 388 ರನ್ ದಾಖಲಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದರೊಂದಿಗೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಮೊದಲ ಬಾರಿಗೆ ಆತಿಥೇಯರು ಭಾರತೀಯ ಬೌಲಿಂಗ್ ದಾಳಿಗೆ ಪ್ರತಿರೋಧ ನೀಡುವಲ್ಲಿ ಯಶಸ್ವಿಯಾದ್ರು.

ಪಂದ್ಯದ ನಾಲ್ಕನೇ ದಿನ ನಡೆದಿದ್ದು ಕೇವಲ 15.5 ಓವರ್ ಗಳ ಆಟವಾದ್ರು, ವಿಂಡೀಸ್ 48ಕ್ಕೆ 4 ವಿಕೆಟ್ ಕಳೆದುಕೊಂಡಿದ್ದು, ಈ ಪಂದ್ಯವೂ ಏಕಪಕ್ಷೀಯವಾಗಿ ಭಾರತದ ಪಾಲಾಗುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಅಂತಿಮ ದಿನ ಬ್ಯಾಟಿಂಗ್ ಮಾಡಿದ ಬ್ಲ್ಯಾಕ್ ವುಡ್ (63) ಮತ್ತು ಚೇಸ್ 93 ರನ್, ಚೇಸ್ ಮತ್ತು ಡೌರಿಚ್ (74) 144 ರನ್ ಹಾಗೂ ಚೇಸ್ ಮತ್ತು ಹೋಲ್ಡರ್ (ಅಜೇಯ 64) ಅವರ 103 ರನ್ ಗಳ ಅತ್ಯುತ್ತಮ ಜತೆಯಾಟಗಳು ಭಾರತದ ಜಯದ ಹಾದಿಗೆ ಅಡ್ಡ ಗೋಡೆಯಾಗಿ ನಿಂತವು. ಈ ಪ್ರದರ್ಶನದೊಂದಿಗೆ ವೆಸ್ಟ್ ಇಂಡೀಸ್ ತಂಡ ಮೂರನೇ ಟೆಸ್ಟ್ ಪಂದ್ಯಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಭಾರತದ ಪರ ಶಮಿ ಹಾಗೂ ಮಿಶ್ರಾ ತಲಾ 2, ಇಶಾಂತ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು. ಇನ್ನು ವೆಸ್ಟ್ ಇಂಡೀಸ್ ತಂಡವನ್ನು ಆಲ್ರೌಂಡರ್ ಪ್ರದರ್ಶನದ ಮೂಲಕ ಕಾಪಾಡಿ ಚೇಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರ್:

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ (196, 52.3 ಓವರ್)

ಬ್ರಾಥ್ ವೈಟ್ 1, ಚಂದ್ರಿಕಾ 5, ಡಾರೆನ್ ಬ್ರಾವೊ 0, ಮರ್ಲಾನ್ 37, ಬ್ಲಾಕ್ ವುಡ್ 62, ಚೇಸ್ 10, ಡೌರಿಚ್ 5, ಹೋಲ್ಡರ್ 13, ಬಿಶೂ 12, ಕಮಿನ್ಸ್ ಅಜೇಯ 24, ಗೆಬ್ರಿಯಲ್ 15, ಇತರೆ 12. (ಅಶ್ವಿನ್ 52ಕ್ಕೆ5, ಶಮಿ 23ಕ್ಕೆ 2, ಇಶಾಂತ್ 53ಕ್ಕೆ 2, ಮಿಶ್ರಾ 38ಕ್ಕೆ 1)

ಭಾರತ ಮೊದಲ ಇನಿಂಗ್ಸ್ (500ಕ್ಕೆ 9 ಡಿಕ್ಲೇರ್, 171.1 ಓವರ್)

ಕೆ.ಎಲ್.ರಾಹುಲ್ 158, ಧವನ್ 27, ಪೂಜಾರಾ 46, ಕೊಹ್ಲಿ 44, ರಹಾನೆ ಅಜೇಯ 108, ಅಶ್ವಿನ್ 3, ಸಾಹ 47, ಮಿಶ್ರಾ 21, ಶಮಿ 0, ಉಮೇಶ್ 19 ಇತರೆ 27. (ಚೇಸ್ 121ಕ್ಕೆ 5, ಗೆಬ್ರಿಯಲ್ 62ಕ್ಕೆ 1, ಬಿಶೂ 107ಕ್ಕೆ 1, ಹೋಲ್ಡರ್ 72ಕ್ಕೆ 1)

ವೆಸ್ಟ್ ಇಂಡೀಸ್ ದ್ವಿತೀಯ ಇನಿಂಗ್ಸ್ (388ಕ್ಕೆ 6, 104 ಓವರ್)

ಕ್ರೇಗ್ ಬ್ರಾಥ್ ವೈಟ್ 23, ಚಂದ್ರಿಕಾ 1, ಬ್ರಾವೊ 20, ಸ್ಯಾಮುಯೆಲ್ಸ್ 0, ಬ್ಲಾಕ್ ವುಡ್ 63, ಚೇಸ್ ಅಜೇಯ 137, ಡೌರಿಚ್ 74, ಹೋಲ್ಡರ್ 64, ಇತರೆ 6 (ಶಮಿ 82ಕ್ಕೆ 2, ಅಮಿತ್ ಮಿಶ್ರಾ 90ಕ್ಕೆ 2, ಇಶಾಂತ್ 56ಕ್ಕೆ 1, ಅಶ್ವಿನ್ 114ಕ್ಕೆ 1)

Leave a Reply