ಶೀಘ್ರವೇ ಮೌಢ್ಯ ನಿಷೇಧ ಕಾಯ್ದೆ, ಈಶ್ವರಪ್ಪ ವಿರುದ್ಧ ದಿನೇಶ್ ವ್ಯಂಗ್ಯ, ಕಾಶ್ಮೀರಿಗರಿಗೆ ಮೋದಿ ಕರೆ ಏನು? ಅರುಣಾಚಲ ಮಾಜಿ ಸಿಎಂ ಆತ್ಮಹತ್ಯೆ, ಸಂಕಷ್ಟಕ್ಕೆ ಸಿಲುಕಿದ ಮತ್ತೊಬ್ಬ ಎಎಪಿ ಶಾಸಕ

‘ಸ್ವಾತಂತ್ರ್ಯಕ್ಕೆ 70- ಬಲಿದಾನಗಳನ್ನು ನೆನೆಯೋಣ’ ಎಂಬ ಕಾರ್ಕ್ರಮ ಸರಣಿಯನ್ನು ಕೇಂದ್ರದ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಈ ಪ್ರಯುಕ್ತ ಇದೋರ್ ನಲ್ಲಿ ಪ್ರಧಾನಿ ಉತ್ಸವಕ್ಕೆ ಚಾಲನೆ ನೀಡಿದರು. ಜಮ್ಮು-ಕಾಶ್ಮೀರ ಪ್ರಕ್ಷುಬ್ಧತೆ ಕುರಿತೂ ಇಲ್ಲಿ ಮಾತನಾಡಿದರು.

ಡಿಜಿಟಲ್ ಕನ್ನಡ ಟೀಮ್:

ಮೌಡ್ಯ ನಿಷೇಧ ಕಾಯ್ದೆ ಅನುಷ್ಠಾನಕ್ಕೆ ಸರ್ಕಾರ ಬದ್ಧ… ಮುಂದಿನ ಚಳಿಗಾಲ ಅಧಿವೇಶನದಲ್ಲಿ ಕಾಯ್ದೆ ಮಂಡಿಸಿ,  ಅನುಮತಿ ಪಡೀತಿವಿ ಅಂತಾ ಹೇಳಿದ್ದಾರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ. ಈ ಹಿಂದೆ ಮೌಢ್ಯ ನಿಷೇಧ ಕಾಯ್ದೆ ಅನುಷ್ಠಾನ ಕಷ್ಟ ಎಂದಿದ್ದ ಕಾಗೋಡು ತಿಮ್ಮಪ್ಪನವ್ರು ಈಗ ತಮ್ಮ ವಾದ ಬದಲಿಸಿದ್ದಾರೆ. ಈ ಬಗ್ಗೆ ಅವರು ಹೇಳಿರೋದಿಷ್ಟು:

‘ಬಾಲ್ಯದಿಂದಲೂ ನಾನು ಮೌಢ್ಯದ ವಿರುದ್ಧ ಹೋರಾಟ ಮಾಡಿದವನು. ಕಾನೂನಿನಿಂದ ಮಾತ್ರ ಇದನ್ನು ತೊಲಗಿಸಲು ಸಾಧ್ಯವಿಲ್ಲ. ಜನರ ಮನವೊಲಿಸುವ ಮೂಲಕ ಅನುಷ್ಠಾನಕ್ಕೆ ತರಬೇಕು. ಯಾವುದನ್ನು ಅನುಷ್ಠಾನಗೊಳಿಸಲು ಸಾಧ್ಯವೋ ಅಂತಹದ್ದನ್ನು ಮಾತ್ರ ತರುತ್ತೇವೆ. ಇನ್ನೊಂದು ತಿಂಗಳಲ್ಲಿ ನನ್ನ ನೇತೃತ್ವದ ಉಪ ಸಮಿತಿ ಸರ್ಕಾರಕ್ಕೆ ವರದಿ ನೀಡಲಿದೆ. ನಂತರ ಸಂಪುಟದ ಅನುಮತಿ ಪಡೆದು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿದೆ.’

ಇನ್ನು ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳ ಸಕ್ರಮ, ಅರಣ್ಯ ಪ್ರದೇಶದ ಬಗರ್ ಹುಕ್ಕುಂ ಅರ್ಜಿ ಇತ್ಯರ್ಥವಾಗೊವರೆಗೂ ಸರ್ಕಾರಿ ಒತ್ತುವರಿ ಭೂಮಿ ತೆರವುಗೊಳಿಸುವ ಕಾರ್ಯ ಸ್ಥಗಿತಗೊಳಿಸಲಾಗಿದೆ ಅಂತಲೂ ಕಾಗೋಡು ತಿಮ್ಮಪ್ಪ ತಿಳಿಸಿದ್ರು.

ಅಸ್ತಿತ್ವ ಉಳಿಸಿಕೊಳ್ಳಲು ಈಶ್ವರಪ್ಪರಿಂದ ಹೊಸ ಬ್ರಿಗೆಡ್ ಅಂದ್ರು ದಿನೇಶ್

ಪಕ್ಷದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಲ್ಲಿ ಅಹಿಂದ ಸಂಘಟನೆ ಮಾಡಲು ಹೊರಟಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯ ಮಾಡಿದ್ದಾರೆ.

ಈ ಬಗ್ಗೆ ಅವರು ಹೇಳಿದ್ದು ಹೀಗೆ:

‘ಈಶ್ವರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಡುವೆ ರಾಜಕೀಯ ವೈಷಮ್ಯಗಳಿವೆ. ಬಿಜೆಪಿಯಲ್ಲಿ ಈಶ್ವರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಹೀಗಾಗಿ ಪಕ್ಷದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಹಿಂದ ಹೆಸರಿನಲ್ಲಿ ಸಂಘಟನೆಗೆ ಮುಂದಾಗಿದ್ದಾರೆ. ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ಪ್ರೀತಿಯಾಗಲಿ ಅಥವಾ ಕಾಳಜಿಯಾಗಲಿ ಇಲ್ಲ. ಅವರ ರಾಜಕೀಯ ಆಟಗಳನ್ನು ಜನ ನಂಬುವುದಿಲ್ಲ.’

ಇನ್ನುಳಿದಂತೆ ನೀವು ತಿಳಿಯಬೇಕಿರೋ ಪ್ರಮುಖ ಸುದ್ದಿ ಸಾಲುಗಳು…

  • ಕಳೆದೊಂದು ತಿಂಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಭವಿಸಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹೊಸ ಸಂದೇಶ ರವಾನಿಸಿದ್ದಾರೆ. ಅದೇನಂದ್ರೆ, ‘ಪ್ರತಿಯೊಬ್ಬ ಭಾರತೀಯನು ಕಾಶ್ಮೀರವನ್ನು ಪ್ರೀತಿಸುತ್ತಾನೆ. ಅಲ್ಲದೆ ಭಾರತದ ಪ್ರತಿ ಪ್ರಜೆ ಅನುಭವಿಸುವ ಸ್ವಾತಂತ್ರವನ್ನು ಕಾಶ್ಮೀರಿಗರೂ ಅನುಭವಿಸಬಹುದು.’ ಇದಕ್ಕೆ ಅಭಿವೃದ್ಧಿಯೊಂದೇ ಮದ್ದು ಎಂದೂ ಪ್ರತಿಪಾದಿಸಿದ್ದಾರೆ. ಕೆಲವು ಜನರಿಂದಾಗಿ ಕಣಿವೆ ಪ್ರಕ್ಷಿಬ್ಧಗೊಂಡಿದೆ ಎಂಬುದನ್ನು ಪ್ರತಿಪಾದಿಸಿರುವ ಪ್ರಧಾನಿ, ‘ಲ್ಯಾಪ್ಟಾಪ್ ಕ್ರಿಕೆಟ್ ಬ್ಯಾಟುಗಳನ್ನು ಹಿಡಿದಿರಬೇಕಾದ ಕೈಗಳಿಗೆ ಕಲ್ಲು ಕೊಡಲಾಗುತ್ತಿದೆ’ ಎಂದಿದ್ದಾರೆ. ಮುಖ್ಯಮಂತ್ರಿ ಮುಫ್ತಿ ನೇತೃತ್ವದಲ್ಲಿ ಅಭಿವೃದ್ಧಿ ಮತ್ತು ಉದ್ಯೋಗದ ದೊಡ್ಡ ಯೋಜನೆಗಳನ್ನು ಜಮ್ಮು-ಕಾಶ್ಮೀರದಲ್ಲಿ ತರಲಾಗುತ್ತಿದ್ದು ಇದನ್ನು ರಾಜ್ಯದ ಯುವಕರು ಉಪಯೋಗಿಸಿಕೊಳ್ಳಬೇಕು ಎಂದಿದ್ದಾರೆ ಪ್ರಧಾನಿ.
  • ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೊ ಪೌಲ್ ಮಂಗಳವಾರ ಮೃತಪಟ್ಟಿದ್ದಾರೆ. ಅವರ ಮನೆಯಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ‘ಬೆಳಗ್ಗೆ 9 ಗಂಟೆ ಸುಮಾರಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿಯೇ ಅವರು ನೇಣು ಹಾಕಿಕೊಂಡಿರುವ ಸಾಧ್ಯತೆಗಳಿವೆ. ‘ಮೈ ವಿಚಾರ್’ ಎಂಬ ಶೀರ್ಷಿಕೆಯಲ್ಲಿ ಅವರು ಬರೆದಿರುವ ಪತ್ರವೂ ಸಿಕ್ಕಿದ್ದು ಅದು ಆತ್ಮಹತ್ಯಾ ಪತ್ರವಲ್ಲ.’ ಎಂದಿದ್ದಾರೆ ಅರುಣಾಚಲ ಪ್ರದೇಶ ಡಿಜಿಪಿ ಎಸ್.ನಿತ್ಯಾನಂದಮ್.
  • ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಶಾಸಕ ಕರ್ತಾರ್ ಸಿಂಗ್ ತನ್ವಾರ್ ಅವರ ಮನೆ ಮೇಲೆ ದಾಳಿ ಮಾಡಿದ್ದ ತೆರಿಗೆ ಅಧಿಕಾರಿಗಳು ₹ 130 ಕೋಟಿ ಮೌಲ್ಯದ ಅನಧಿಕೃತ ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕಾನೂನು ವಿಚಾರಣೆ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕರ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ.
  • ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿರುವ ತನ್ನ ವರದಿಯಲ್ಲಿನ ಶಿಫಾರಸ್ಸನ್ನು ಬಿಸಿಸಿಐ ಅಕ್ಟೋಬರ್ 15ರ ಒಳಗಾಗಿ ಜಾರಿಗೊಳಿಸುವಂತೆ ಲೋಧಾ ಸಮಿತಿ ಅಂತಿಮ ಗಡವು ನೀಡಿದೆ. ಇತ್ತ ಬಿಸಿಸಿಐ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಾರ್ಕಾಂಡೆಯ್ ಕಾಟ್ಜು ಅವರ ಸಲಹೆ ಮೇರೆಗೆ ನಡೆಯಲು ನಿರ್ಧರಿಸಿದೆ. ಹೀಗಾಗಿ ಮಂಗಳವಾರ ತಮ್ಮ ಜತೆ ಚರ್ಚಿಸಲು ಆಗಮಿಸುವಂತೆ ನೀಡಿದ್ದ ಲೋಧಾ ಸಮಿತಿ ಸಮನ್ಸ್ ಅನ್ನು ಬಿಸಿಸಿಐ ನಿರ್ಲಕ್ಷಿಸಿದೆ. ಬಿಸಿಸಿಐನ ಈ ನಿರ್ಧಾರ ನ್ಯಾಯಾಂಗ ನಿಂದನೆ ಅಪರಾಧವಾಗುವ ಸಾಧ್ಯತೆಗಳು ಇವೆ.
  • ಸ್ವಯಂ ಘೋಷಿತ ಗೋರಕ್ಷಕರಿಂದ ದಲಿತರ ಮೇಲಿನ ದೌರ್ಜನ್ಯವನ್ನು ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರೆಸ್ಸೆಸ್) ತೀವ್ರವಾಗಿ ಖಂಡಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ‘ಸ್ವಯಂ ಘೋಷಿತ ಗೋ ರಕ್ಷಕರಲ್ಲಿ ಕೆಲವು ಮಂದಿ ಸಮಾಜ ವಿರೋಧಿ ವ್ಯಕ್ತಿಗಳೂ ಇದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಆರೆಸ್ಸೆಸ್ ಬೆಂಬಲಿಸಿದೆ. ಈ ವಿಚಾರದಲ್ಲಿ ಪ್ರಧಾನಿ ಪರ ನಿಲ್ಲುವುದಾಗಿಯೂ ತಿಳಿಸಿದೆ.

Leave a Reply