ಟೀಂ ಇಂಡಿಯಾಕ್ಕೆ ಸಖತ್ ಫೈಟ್ ಕೊಡ್ತಿದೆ ವೆಸ್ಟ್ ಇಂಡೀಸ್!

St. Lucia India West Indies Cricket

ಡಿಜಿಟಲ್ ಕನ್ನಡ ಟೀಮ್:

ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ (118) ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (104) ಅವರ ಆಕರ್ಷಕ ಶತಕಗಳ ನಡುವೆಯೂ, ಆತಿಥೇಯ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಭಾರತಕ್ಕೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಖತ್ ಫೈಟ್ ಕೊಡ್ತಿದೆ.

ಪಂದ್ಯದ ಮೊದಲ ದಿನದಾಟ ಮುಕ್ತಾಯಕ್ಕೆ 5 ವಿಕೆಟ್ ಗೆ 234 ರನ್ ದಾಖಲಿಸಿದ್ದ ಭಾರತ, ಎರಡನೇ ದಿನವಾದ ಬುಧವಾರ ಆಟ ಮುಂದುವರಿಸಿ ಮೊದಲ ಇನಿಂಗ್ಸ್ ನಲ್ಲಿ 353 ರನ್ ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿರೋ ಆತಿಥೇಯರು ದಿನದಾಟ ಮುಕ್ತಾಯದ ವೇಳೆಗೆ 1 ವಿಕೆಟ್ ಗೆ 107 ರನ್ ದಾಖಲಿಸಿದೆ.

ಆರಂಭದಲ್ಲಿ ಭಾರತಕ್ಕೆ ಆಸರೆಯಾಗಿದ್ದ ಅಶ್ವಿನ್ ಹಾಗೂ ಸಾಹ ಜೋಡಿ 213 ರನ್ ಗಳ ಅತ್ಯುತ್ತಮ ಜತೆಯಾಟದ ನೆರವಿನಿಂತ ತಂಡದ ಮೊತ್ತವನ್ನು 300 ರನ್ ಗಡಿ ದಾಟಿಸಿದ್ರು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆ ಭಾರತದ ಇನಿಂಗ್ಸ್ ಮಿಂಚಿನಂತೆ ಅಂತ್ಯವಾಯ್ತು. ವೆಸ್ಟ್ ಇಂಡೀಸ್ ಬೌಲರ್ ಗಳ ಪೈಕಿ ಜೋಸೆಫ್ ಮತ್ತು ಕಮಿನ್ಸ್ ತಲಾ 3, ಗೆಬ್ರಿಯಲ್ ಮತ್ತು ಚೇಸ್ ತಲಾ 2 ವಿಕೆಟ್ ಪಡೆದ್ರು.

ಅಶ್ವಿನ್ ಪಾಲಿಗೆ ಇದು ನಾಲ್ಕನೇ ಟೆಸ್ಟ್ ಶತಕವಾದ್ರೆ, ಸಾಹ ಪಾಲಿಗೆ ಚೊಚ್ಚಲ ಶತಕ. ಈ ಇನಿಂಗ್ಸ್ ವಿಶೇಷ ಏನಂದ್ರೆ, ಭಾರತದ ಪರ ಇನಿಂಗ್ಸ್ ಒಂದರಲ್ಲಿ 6 ಮತ್ತು 7ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಶತಕ ದಾಖಲಿಸಿರೋದು ಇದೇ ಮೊದಲು.

ಇನಿಂಗ್ಸ್ ಆರಂಭಿಸಿರೋ ವಿಂಡೀಸ್ ಪಡೆ ಉತ್ತಮ ಆರಂಭವನ್ನೇ ಪಡೆದಿದೆ. ಆರಂಭಿಕ ಕ್ರೇಗ್ ಬ್ರಾಥ್ ವೈಟ್ ಅಜೇಯ 53, ಡಾರೆನ್ ಬ್ರಾವೊ ಅಜೇಯ 18 ರನ್ ಗಳಿಸಿದ್ರೆ, ಮತ್ತೊಬ್ಬ ಆರಂಭಿಕ ಜಾನ್ಸನ್ 23 ರನ್ ಗಳಿಸಿ ರನೌಟ್ ಆದ್ರು. ಸದ್ಯ ವೆಸ್ಟ್ ಇಂಡೀಸ್ ತಂಡ 246 ರನ್ ಗಳ ಹಿನ್ನಡೆಯಲ್ಲಿದ್ದು, ಮುನ್ನಡೆ ಸಾಧಿಸುವ ಗುರಿ ಹೊಂದಿದೆ. ಇತ್ತ ಟೀಂ ಇಂಡಿಯಾ ತನ್ನ ಬೌಲರ್ ಗಳಿಂದ ಮಾರಕ ದಾಳಿಯ ನಿರೀಕ್ಷೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನಿಂಗ್ಸ್ 353

ರಾಹುಲ್ 50, ಧವನ್ 1, ಕೊಹ್ಲಿ 3, ರಹಾನೆ 35, ರೋಹಿತ್ 9, ಅಶ್ವಿನ್ 118, ಸಾಹ ಅಜೇಯ 104, ಜಡೇಜಾ 6, ಭುವನೇಶ್ವರ್ 0, ಶಮಿ ಅಜೇಯ 0, ಇಶಾಂತ್ 0. ಇತರೆ 27. (ಕಮಿನ್ಸ್ 54ಕ್ಕೆ 3, ಜೋಸೆಫ್ 69ಕ್ಕೆ 3, ಚೇಸ್ 70ಕ್ಕೆ 2, ಗೆಬ್ರಿಯಲ್ 84ಕ್ಕೆ 2)

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 107ಕ್ಕೆ 1

ಬ್ರಾಥ್ ವೈಟ್ ಅಜೇಯ 53, ಜಾನ್ಸನ್ 23, ಬ್ರಾವೊ ಅಜೇಯ 18, ಇತರೆ 13.

Leave a Reply