ಭುವಿ ಸ್ವಿಂಗ್ ದಾಳಿಗೆ ವಿಂಡೀಸ್ ತತ್ತರ, ಟೀಂ ಇಂಡಿಯಾ ನಿಯಂತ್ರಣದಲ್ಲಿ ತೃತೀಯ ಟೆಸ್ಟ್

ಡಿಜಿಟಲ್ ಕನ್ನಡ ಟೀಮ್:

ಭಾರತ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಪರಿಸ್ಥಿತಿ ಸೂತ್ರ ಕಿತ್ತ ಗಾಳಿಪಟದಂತಾಗಿದೆ. ಪಂದ್ಯದ ಮೂರನೇ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತಾದರೂ, ನಾಲ್ಕನೇ ದಿನ ಹೆಚ್ಚು ತೊಂದರೆ ಎದುರಾಗಲಿಲ್ಲ. ಈ ಹಂತದಲ್ಲಿ ಭಾರತದ ವೇಗಿ ಭುವನೇಶ್ವರ್ ಸ್ವಿಂಗ್ ಅರಿಯಲು ವಿಫಲರಾದ ವಿಂಡೀಸ್ ದಾಂಡಿಗರು ತರಗೆಲೆಗಳಂತೆ ಉದುರಿ ಹೋದರು.

ಪಂದ್ಯದ ಎರಡನೇ ದಿನದ ಮೊತ್ತ 107ಕ್ಕೆ 1 ವಿಕೆಟ್ ಗಳಿಂದ ನಾಲ್ಕನೇ ದಿನ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಪಡೆ ಭಾರತಕ್ಕೆ ತಕ್ಕ ಫೈಟ್ ನೀಡುವ ನಿರೀಕ್ಷೆ ಇತ್ತು. ಆದ್ರೆ ಮಳೆಯಿಂದ ಪಿಚ್ ನಲ್ಲಿದ್ದ ತೇವಾಂಶ ಬೌಲರ್ ಗಳಿಗೆ ಸಾಥ್ ನೀಡಿತು. ಇದನ್ನು ಬಳಸಿಕೊಂಡ ಭಾರತದ ಬೌಲರ್ ಗಳು ಆತಿಥೇಯರ ಇನಿಂಗ್ಸ್ ಅನ್ನು 225 ರನ್ ಗಳಿಗೆ ಅಂತ್ಯಗೊಳಿಸಿದ್ರು. ನಂತರ ಎರಡನೇ ಇನಿಂಗ್ಸ್ ಆರಂಭಿಸಿರೋ ಭಾರತ ದಿನದಾಟ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 157 ರನ್ ದಾಖಲಿಸಿದೆ. ಇದರೊಂದಿಗೆ ಭಾರತ 285 ರನ್ ಗಳ ಮುನ್ನಡೆ ಸಾಧಿಸಿದೆ.

ವೆಸ್ಟ್ ಇಂಡೀಸ್ ಪರ ಬ್ರಾಥ್ ವೈಟ್ (64), ಸ್ಯಾಮುಯೆಲ್ಸ್ (48) ಹೊರತುಪಡಿಸಿ ಮಿಕ್ಕ ಬ್ಯಾಟ್ಸ್ ಮನ್ ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಭಾರತದ ಪರ ಭುವನೇಶ್ವರ್ ಕುಮಾರ್ 5 ವಿಕೆಟ್ ಗಳಿಸಿ ಮಿಂಚಿದರು.

ಭಾರತದ ಪರ ಎರಡನೇ ಇನಿಂಗ್ಸ್ ನಲ್ಲಿ ಅಜಿಂಕ್ಯ ರಹಾನೆ (ಅಜೇಯ 51) ಮತ್ತು ರೋಹಿತ್ ಶರ್ಮಾ (ಅಜೇಯ 41) ಕ್ರೀಸ್ ನಲ್ಲಿದ್ದಾರೆ. ಅಂತಿಮ ದಿನದಾಟ ಬಾಕಿ ಇದ್ದು ಭಾರತ ತಂಡ ಮೊದಲ ಅವಧಿಯಲ್ಲಿ ಸ್ವಲ್ಪ ಕಾಲ ಬ್ಯಾಟಿಂಗ್ ಮಾಡಿ ನಂತರ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆತಿಥೇಯರ ವಿರುದ್ಧ ಆಕ್ರಮಣಕಾರಿ ದಾಳಿ ನಡೆಸುವ ನಿರೀಕ್ಷೆ ಇದೆ. ವಿಂಡೀಸ್ ಬ್ಯಾಟ್ಸ್ ಮನ್ ಗಳು ಮೊದಲ ಇನಿಂಗ್ಸ್ ರೀತಿಯಲ್ಲೇ ಪೆವಿಲಿಯನ್ ಪರೇಡ್ ಮಾಡಿದ್ದೇ ಆದರೆ, ಪಂದ್ಯ ಭಾರತದ ಮಡಿಲಿಗೆ ಬೀಳಲಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ ಮೊದಲ ಇನಿಂಗ್ಸ್ 353

ರಾಹುಲ್ 50, ಧವನ್ 1, ಕೊಹ್ಲಿ 3, ರಹಾನೆ 35, ರೋಹಿತ್ 9, ಅಶ್ವಿನ್ 118, ಸಾಹ ಅಜೇಯ 104, ಜಡೇಜಾ 6, ಭುವನೇಶ್ವರ್ 0, ಶಮಿ ಅಜೇಯ 0, ಇಶಾಂತ್ 0. ಇತರೆ 27. (ಕಮಿನ್ಸ್ 54ಕ್ಕೆ 3, ಜೋಸೆಫ್ 69ಕ್ಕೆ 3, ಚೇಸ್ 70ಕ್ಕೆ 2, ಗೆಬ್ರಿಯಲ್ 84ಕ್ಕೆ 2)

ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 107ಕ್ಕೆ 1

ಬ್ರಾಥ್ ವೈಟ್ ಅಜೇಯ 53, ಜಾನ್ಸನ್ 23, ಬ್ರಾವೊ 29, ಸ್ಯಾಮುಯೆಲ್ಸ್ 48, ಬ್ಲಾಕ್ ವುಡ್ 20, ಚೇಸ್ 2, ಡೌರಿಚ್ 18, ಹೋಲ್ಡರ್ 2, ಜೋಸೆಫ್ 0, ಕಮಿನ್ಸ್ 0, ಗೆಬ್ರಿಯಲ್ ಅಜೇಯ 0, ಇತರೆ 19. (ಭುವನೇಶ್ವರ್ 33ಕ್ಕೆ 5, ಅಶ್ವಿನ್ 52ಕ್ಕೆ 2, ಇಶಾಂತ್ 40ಕ್ಕೆ 1, ಜಡೇಜಾ 27ಕ್ಕೆ 1)

ಭಾರತ ಎರಡನೇ ಇನಿಂಗ್ಸ್ 157ಕ್ಕೆ 3

ರಾಹುಲ್ 28, ಧವನ್ 26, ಕೊಹ್ಲಿ 4, ರಹಾನೆ ಅಜೇಯ 51, ರೋಹಿತ್ ಅಜೇಯ 41, ಇತರೆ 7. (ಕಮಿನ್ಸ್ 22ಕ್ಕೆ 2, ಚೇಸ್ 41ಕ್ಕೆ 1)

Leave a Reply