ಭಾರತೀಯ ಸೇನೆ ನಿಂದಿಸುವ ರೋಗ ಬೆಂಗಳೂರಿಗೂ ಬಂತು, ಒಲಿಂಪಿಕ್ಸ್ ನಿಂದ ಸೈನಾ ಔಟ್, ಶೌರ್ಯ ಚಕ್ರ ಪ್ರಶಸ್ತಿಗೆ ನಿರಂಜನ್

Members of ABVP stage a protest in front of The United Theological College to alleged Kashmir delegates meeting in College premises in Bengaluru on Sunday.

ಡಿಜಿಟಲ್ ಕನ್ನಡ ಟೀಮ್:

ಸ್ವತಂತ್ರ ದಿನಾಚರಣೆಯ ಸಂಭ್ರಮದಲ್ಲಿರುವಾಗಲೇ ಬೆಂಗಳೂರಿನ ಮಿಲ್ಲರ್ ರಸ್ತೆಯಲ್ಲಿರುವ ಯುನೈಟೆಡ್ ಥಿಯಲಾಜಿಸ್ಟಿಕ್ ಕಾಲೇಜಿನಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆಗಳು ಕೂಗಲಾಗಿದೆ. ಇದನ್ನು ಪ್ರತಿಭಟಿಸಿ ಎಬಿವಿಪಿ ಸಂಘಟನೆ ಕಾರ್ಯಕರ್ತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ರು.

ಕಾಶ್ಮೀರದಲ್ಲಿ ಜನಸಾಮಾನ್ಯರ ಮೇಲೆ ಭಾರತೀಯ ಸೇನೆಯಿಂದ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ‘ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ’ ಎಂಬ ಎನ್ಜಿಒ ‘ಬ್ರೋಕನ್ ಫ್ಯಾಮಿಲೀಸ್’ ಎಂಬ ಕಾರ್ಯಗಾರ ಆಯೋಜಿಸಿತ್ತು. ಈ ಕಾರ್ಯಗಾರದಲ್ಲಿ ಭಾರತೀಯ ಸೇನೆ ಮತ್ತು ಕಾಶ್ಮೀರಿಗರ ಪರಿಸ್ಥಿತಿ ವಿರುದ್ಧ ಚರ್ಚೆಗೆ ಅವಕಾಶವಿತ್ತು. ಈ ಕಾರ್ಯಗಾರದಲ್ಲಿ ಕಾಶ್ಮೀರದ ಕೆಲ ಕುಟುಂಬ ಸದಸ್ಯರನ್ನು ಕರೆಸಿ ಭಾರತೀಯ ಸೇನೆಯಿಂದಾಗುತ್ತಿರುವ ತೊಂದರೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುವ ಪ್ರಯತ್ನ ನಡೆಸಲಾಯ್ತು. ಈ ವೇಳೆ ಭಾರತೀಯ ಸೇನೆ ಪರ ಮಾತನಾಡಿದ ಪತ್ರಕರ್ತರೊಬ್ಬರನ್ನು ಸೇನೆ ಸಮರ್ಥಿಸಿಕೊಂಡಾಗ ಯುವಕರ ಗುಂಪು ಅರ ಮೇಲೆ ಹಲ್ಲೆಗೆ ಮುಂದಾಯಿತು. ಈ ವೇಳೆ ‘ಜಾನ್ ಸೆ ಲೇಂಗೆ ಆಜಾದಿ, ಜೋರ್ ಸೆಲೇಂಗೆ ಆಜಾದಿ’ ‘ಇಂಡಿಯನ್  ಆರ್ಮಿ ಸೇ ಹಮೇ ಚಾಹಿಯೇ ಆಜಾದಿ’ ಎಂಬ ಘೋಷಣೆ ಕೂಗಲಾಯಿತು.

ಇಲ್ಲಿನ ಪರಿಸ್ಥಿತಿ ಕೇವಲ ಭಾರತೀಯ ಸೇನೆಯನ್ನು ವಿರೋಧಿಸಲಷ್ಟೇ ಸೀಮಿತವಾಗಿರಲಿಲ್ಲ. ಕಾಶ್ಮೀರದಲ್ಲಿ ಭಾರತೀಯ ಸೇನೆಯ ಗುಂಡೇಟಿಗೆ ಸತ್ತ ಉಗ್ರ ಬುರ್ಹಾನ್ ವಾನಿ ಪರವಾದ ಘೋಷಣೆಗಳು, ಅವನ ಪರವಾದ ನಾಟಕಗಳು, ಮತ್ತೆ ಹುಟ್ಟಿ ಬಾ ಎಂಬ ಪ್ರಾರ್ಥನೆಗಳು ನಡೆದಿರುವುದು, ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಬೆಳವಣಿಗೆಯನ್ನು ಭಾನುವಾರ ಎಬಿವಿಪಿ ಕಾರ್ಯಕರ್ತರು ಖಂಡಿಸಿದ್ದು, ಕಾಲೇಜಿಗೆ ಬೀಗ ಜಡಿದು, ಕಾಲೇಜಿನ ನಾಮಪಲಕಕ್ಕೆ ಮಸಿ ಬಳೆದಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಒಟ್ಟಿನಲ್ಲಿ ಮಾನವ ಹಕ್ಕಿನ ಹೆಸರಿನಲ್ಲಿ ಭಾರತೀಯ ಸೇನೆ ವಿರುದ್ಧ ಅಲೆ ಎಬ್ಬಿಸಲು ಸಕಲ ಕ್ರಮಗಳು ನಡೆಯುತ್ತಿವೆ.

ಈ ಬೆಳವಣಿಗೆ ಬಗ್ಗೆ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ನೀಡಿರುವ ಪ್ರತಿಕ್ರಿಯೆ ಹೀಗಿದೆ:

‘ಕಾಶ್ಮೀರಿ ಯುವಕರೆ ನೀವು ಬೆಂಗಳೂರಿಗೆ ಬಂದಿರುವುದು ಓದುವುದಕ್ಕಾಗಿಯೇ ಹೊರತು ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಲು ಅಲ್ಲ. ಮೊದಲು ವಿದ್ಯಾಭ್ಯಾಸ ಮುಗಿಸಿ ಒಳ್ಳೆಯ ಕೆಲಸ ಪಡೆದುಕೊಳ್ಳಿ. ಕಾಶ್ಮೀರದ ರಾಜಕಾರಣದ ಬಗ್ಗೆ ಯೋಚಿಸಲು ಸಮಯವಿದೆ.’

ಒಲಿಂಪಿಕ್ಸ್ ನಿಂದ ಸೈನಾ ನೆಹ್ವಾಲ್ ಔಟ್

ಭಾರತದ ಬ್ಯಾಡ್ಮಿಂಟನ್ ತಾರೆ ಹಾಗೂ ಈ ಬಾರಿ ಪದಕದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಭಾನುವಾರ ನಡೆದ ಜಿ ಗುಂಪಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಪ್ರತಿಸ್ಪರ್ಧಿ ಉಕ್ರೇನಿನ ಮರಿಜಾ ಉಲಿಟಿನಾ ವಿರುದ್ಧ 18- 21, 19-21 ಸೆಟ್ ಗಳ ಅಂತರದಲ್ಲಿ ಸೋಲನುಭವಿಸಿದರು. ವಿಶ್ವ ಬ್ಯಾಡ್ಮಿಂಟನ್ ನಲ್ಲಿ 5ನೇ ಶ್ರೇಯಾಂಕ ಪಡೆದಿರುವ ಸೈನಾ, 61ನೇ ಶ್ರೇಯಾಂಕಿತೆ ಮರಿಜಾ ವಿರುದ್ಧ ಸೋಲನುಭವಿಸಿರೋದು ನಿಜಕ್ಕೂ ಆಘಾತಕಾರಿ ಫಲಿತಾಂಶ. ಪಂದ್ಯದಲ್ಲಿ ಒತ್ತಡ ನಿಭಾಯಿಸಲು ಎಡವಿದ್ದು, ಸ್ಥಿರ ಪ್ರದರ್ಶನದ ಕೊರತೆ ಸೈನಾಗೆ ದುಬಾರಿಯಾಗಿ ಪರಿಣಮಿಸಿದೆ.

ನಿರಂಜನ್ ಗೆ ಶೌರ್ಯ ಪ್ರಶಸ್ತಿ

ಇದೇ ವರ್ಷ ಜನವರಿ 1ರಂದು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿ ವೇಳೆ ಹುತಾತ್ಮರಾಗಿದ್ದ ಕರ್ನಾಟಕದ ಯೋಧ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಮರಣೋತ್ತರವಾಗಿ ಶೌರ್ಯ ಪುರಸ್ಕಾರ ಲಭಿಸಿದೆ. ಸೋಮವಾರ 70ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇನ್ನು ಕಳೆದ ಮೇ 26 ರಂದು ಉತ್ತರ ಕಾಶ್ಮೀರದ ಹಿಮಾಲಯ ಪರ್ವತದ 13 ಸಾವಿರ ಅಡಿ ಎತ್ತರದಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರಾಣ ಬಿಟ್ಟ ಹವಿಲ್ದಾರ್ ಹಂಗ್ಪನ್ ದಾದಾ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಅಶೋಕ ಚಕ್ರ ನೀಡಿದೆ. 1 ಅಶೋಕ ಚಕ್ರ, 14 ಶೌರ್ಯ ಚಕ್ರ, 63 ಸೇನಾ ಪದಕ, 2 ನೌಕಾ ಸೇನಾ ಪದಕ ಮತ್ತು 2 ವಾಯು ಸೇನಾ ಪದಕ ಸೇರಿದಂತೆ ಒಟ್ಟು 82 ಯೋಧರಿಗೆ ಗೌರವಿಸಲಾಗುವುದು.

Leave a Reply