ದೇಶವಿರೋಧಿ ಘೋಷಣೆ ಕೂಗಿದವರೊಬ್ಬರ ಬಂಧನವೂ ಇಲ್ಲ, ಆಮ್ನೆಸ್ಟಿ ವಿರುದ್ಧ ಪ್ರತಿಭಟಿಸಿದ ಎಬಿವಿಪಿಗೆ ಸಿಕ್ಕಿದ್ದು ಲಾಠಿಏಟು

Members of ABVP stage protest against Amnesty International at Indiranagar in Bengaluru on Friday.

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ ಪ್ರಕರಣದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಇಂದೂ ಸಹ ಪ್ರತಿಭಟನೆ ಮುಂದುವರಿಸಿ  ಇಂದಿರಾನಗರದ ಆಮ್ನೆಸ್ಟಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು  ಲಾಠಿಚಾರ್ಜ್ ನಡೆಸಿ 40 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಲಾಠಿಚಾರ್ಜ್‍ನಿಂದ ವಿದ್ಯಾರ್ಥಿನಿಯೊಬ್ಬರ ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದರು ಹಾಗೂ ಕೆಲ ವಿದ್ಯಾರ್ಥಿಗಳ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಘೋಷಣೆ ಕೂಗುತ್ತ ಪ್ರತಿಭಟನೆ ಮುಂದುವರಿಸಿದರು.

ಆಮ್ನೆಸ್ಟಿ ದೇಶದಿಂದ ತೊಲಗಬೇಕು, ಸೇನೆ ವಿರುದ್ಧ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿ ಪ್ರತಿಭಟನೆ ನಡೆಸಿ ಕಚೇರಿ ಬಳಿ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ತಳ್ಳಿ ಕಚೇರಿಗೆ ನುಗ್ಗಲು ಯತ್ನಿಸಿದರು.

ಆಗ ನಡೆದ ಲಾಠಿಚಾರ್ಜ್ ವೇಳೆ ವಿದ್ಯಾರ್ಥಿಗಳಾದ ವೀಣಾ, ಗವಿಸಿದ್ದಪ್ಪ, ಅಭಿ ಎಂಬುವರಿಗೆ  ಪೆಟ್ಟಾಗಿದ್ದು, ಅವರನ್ನು ಪೊಲೀಸರ ವಾಹನದಲ್ಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕಳೆದ ಮಂಗಳವಾರದಂದು ನಡೆದಿದ್ದ ಎಬಿವಿಪಿ ಪ್ರತಿಭಟನೆ ವೇಳೆಯೂ ಲಾಠಿಚಾರ್ಜ್ ನಡೆದಿತ್ತು.

Members of ABVP stage protest against Amnesty International at I

Leave a Reply