ಟಗರಾದ ಶಿವಣ್ಣ, ಸದ್ಯದಲ್ಲೇ ತೆರೆ ಮೇಲೆ ಆಗಲಿದೆ ಲೂಟಿ… ಈ ವಾರದ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್:

ಒಂದು ಸಣ್ಣ ವಿರಾಮದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಲಾಂಗ್ ಹಿಡಿದಿದ್ದಾರೆ. ದುನಿಯಾ ಸೂರಿ ಅವರ ನಿರ್ದೇಶನದ ಟಗರು ಸಿನಿಮಾದಲ್ಲಿ ಶಿವಣ್ಣ ತಮ್ಮ ಹಳೇ ಅಡ್ಡಕ್ಕೆ ಬಂದಿದ್ದಾರೆ. ಈ ವಾರ ಟಗರು ಚಿತ್ರಕ್ಕೆ ಮುಹೂರ್ತ ಮಾಡಲಾಗಿದ್ದು, ಶಿವಣ್ಣ ಚಿತ್ರದಲ್ಲಿ ಲಾಂಗ್ ಹಿಡಿದ  ಸ್ಟಿಲ್ ಹೀಗಿದೆ..

001 (1)

ಇನ್ನು ಹಲವು ದಿನಗಳಿಂದ ಕಣ್ಮರೆಯಾಗಿದ್ದ ಬಹುಭಾಷಾ ನಟಿ ಇಶಾ ಕೋಪಿಕರ್ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ನಿರಂಜನ್ ನಿರ್ಮಿಸುತ್ತಿರುವ ಲೂಟಿ ಚಿತ್ರದಲ್ಲಿ ಇಶಾ ನಟಿಸಿದ್ದು, ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಗಿರೀಶ್ ಕಂಪ್ಲಾಪುರ್ ನಿರ್ದೇಶನದ ಚಿತ್ರ ಸದ್ಯದಲ್ಲೇ ಚಿತ್ರ ತೆರೆ ಮೇಲೆ ಬರಲಿದೆ. ಉಳಿದಂತೆ ಚಿತ್ರದ ತಾರಾ ಬಳಗದಲ್ಲಿ ದಿಲೀಪ್ ರಾಜ್, ಧ್ರುವ ಶರ್ಮಾ, ಶ್ವೇತಾ ಪಂಡಿತ್, ಸಾಧುಕೋಕಿಲ, ಕಡ್ಡಿಪುಡಿ ಚಂದ್ರ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗಂಗಾ ರಾಜೇಂದ್ರನ್ ಎಂ ಛಾಯಾಗ್ರಹಣ, ಧರ್ಮವಿಶ್ ಸಂಗೀತ ಹಾಗೂ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನವಿದೆ. ಈ ಚಿತ್ರದ ಪ್ರಮುಖ ಫೋಟೊಗಳು ಹೀಗಿವೆ ನೋಡಿ…

Kadipudi Chandru Isha Koppikar Druv Sharma

Isha Koppikar 3

 

Gautamy Jadav - Dilip Raj

ಈ ವಾರ ನಾಡರಕ್ಷಕ ಚಿತ್ರ ತೆರೆಕಂಡಿದ್ದು, ಚಿತ್ರದ ನಾಯಕ ಅಮಾನ್ ಕನ್ನಡಿಗ ಕಥೆ, ಚಿತ್ರಕಥೆ, ಸಂಭಾಷಣೆ ಜತೆಗೆ ಸಂಕಲನವನ್ನು ಮಾಡಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಮೈತ್ರೇಯ ಗೌಡ ಅಭಿನಯಿಸಿದ್ದು, ಚಿತ್ರದ ಫೋಟೊ ಇಲ್ಲಿದೆ…

amaan kannadiga, maitreya gowda.

Leave a Reply