ಇಸ್ರೊದ ಯಶಸ್ವಿ ಪ್ರಯೋಗ ಸ್ಕ್ರಾಮ್ಜೆಟ್ ಬಗ್ಗೆ ಸಿಂಪಲ್ಲಾಗಿ ತಿಳಿಯಬೇಕಿರುವುದಿಷ್ಟು…

ಚಿತ್ರಕೃಪೆ- ಇಸ್ರೊ

ಡಿಜಿಟಲ್ ಕನ್ನಡ ಟೀಮ್:

ಭಾನುವಾರ ಬೆಳಗ್ಗೆ ಶ್ರೀಹರಿಕೋಟಾದಲ್ಲಿ ಸ್ವದೇಶಿ ಸ್ಕ್ರಾಮ್ಜೆಟ್ ಎಂಜಿನ್ ಪರೀಕ್ಷೆ ಯಶಸ್ವಿಯಾಗಿ ಮಾಡುವ ಮೂಲಕ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಮತ್ತೊಂದು ವಿಕ್ರಮ ಸಾಧಿಸಿದೆ.

‘ಸೂಪರ್ ಸಾನಿಕ್ ಕಂಬಷನ್ ರ್ಯಾಮ್ಜೆಟ್’ ಸಂಕ್ಷಿಪ್ತವಾಗಿ ಸ್ಕ್ರಾಮ್ಜೆಟ್.

ಈ ಸ್ವದೇಶಿ ಸ್ಕ್ರಾಮ್ಜೆಟ್ ಎಂಜಿನ್ ಲಾಂಚ್ ವೆಚ್ಚವನ್ನು ಇಳಿಸಲಿದೆ. ರಾಕೆಟ್ ಎಂಜಿನ್ ಗಳು ಇಂಧನ ಮತ್ತು ಆಕ್ಸಿಡೈಸರ್ ಸ್ವರೂಪದಲ್ಲಿ ದಹನಾನೂಕೂಲಿ ಆಮ್ಲಜನಕವನ್ನು ಒಯ್ಯುತ್ತವೆ. ಇದೀಗ ಈ ಸ್ವದೇಶಿ ಅನ್ವೇಷಣೆಯು ಆಮ್ಲಜನಕವನ್ನು ವಾತಾವರಣದಿಂದಲೇ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಿಂದ ವೆಚ್ಚ ಕಡಿಮೆ ಆಗುವುದಲ್ಲದೇ, ಲಾಂಚ್ ಗೆ ಅನುಕೂಲವಾಗುವಂತೆ ರಾಕೆಟ್ಟಿನ ತೂಕವೂ ಕಡಿಮೆಯಾಗುತ್ತದೆ.

ಸ್ಕ್ರಾಮ್ಜೆಟ್ ಎಂಜಿನ್ ತನಗೆದುರಾಗುವ ಗಾಳಿಯನ್ನೇ ಹೈಪರ್ ಸಾನಿಕ್ ವೇಗದಲ್ಲಿ ಸಂಕುಚಿತಗೊಳಿಸಿ ಅದರಲ್ಲಿನ ಜಲಜನಕವನ್ನು  ಇಂಧನಕ್ಕೂ ಹಾಗೂ ಆಮ್ಲಜನಕವನ್ನು ಆಕ್ಸಿಡೈಸರ್ ಆಗಿಯೂ ಉಪಯೋಗಿಸಿಕೊಳ್ಳುತ್ತದೆ.

ಈ ಎಂಜಿನ್ ಅನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದ ನಂತರ ಮರುಬಳಕೆ ಲಾಂಚ್ ವೆಹಿಕಲ್ ಗಳಲ್ಲಿ ಉಪಯೋಗಿಸಿಕೊಳ್ಳಲು ಯೋಜಿಸಲಾಗಿದೆ.

‘ಇದೊಂದು ಬಹುಮುಖ್ಯ ಪ್ರಯೋಗವಾಗಿತ್ತು. ಸ್ಕ್ರಾಮ್ಜೆಟ್ ಅನ್ನು ಯಶಸ್ವಿಯಾಗಿ ಪ್ರಯೋಗಿಸಿರುವ ನಾಲ್ಕನೇ ದೇಶ ನಮ್ಮದು’ ಎಂದು ಇಸ್ರೋ ಅಧ್ಯಕ್ಷ ಎ. ಎಸ್. ಕಿರಣ್ ಕುಮಾರ್ ಹೇಳಿದ್ದಾರೆ.

Leave a Reply