ರಿಲಯನ್ಸ್ ಜಿಯೋ ಸಿಮ್ ಆಕ್ಟಿವೇಟ್ ಮಾಡಿಕೊಳ್ಳೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಈಗ ಎಲ್ಲೆಲ್ಲೂ ರಿಲಯನ್ಸ್ ಜಿಯೋನದ್ದೇ ಹವಾ. ಉಚಿತ ಕರೆ ಮತ್ತು ಕಡಿಮೆ ದರದ ಡಾಟಾ ಒದಗಿಸುತ್ತಿರೋ ಈ ಜಿಯೋ ಸಿಮ್ ಕೊಳ್ಳಲು ಪ್ರತಿ ರಿಲಯನ್ಸ್ ಸ್ಟೋರ್ ಗಳ ಮುಂದೆ ಜನರ ಉದ್ದನೆ ಕ್ಯೂ ಒಂದೆಡೆ. ಮತ್ತೊಂದೆಡೆ ಮುಖೇಶ್ ಅಂಬಾನಿ ತಮ್ಮ ಜಿಯೋ ಸೇವೆಯ ಬಗ್ಗೆ ಹೇಳಿದ ನಂತರ ಈ ಜಿಯೋ ಸಿಮ್ ನಾವು ತೆಗೆದುಕೊಳ್ಳಬೇಕೆಂಬ ಆಸೆ ಮತ್ತೆ ಕೆಲವರಿಗೆ. ಹಾಗಾಗಿ ಈ ಜಿಯೋ ಸಿಮ್ ತಗೊಳೊದು ಹೇಗೆ? ಹಾಗೂ ಅದರ ಆ್ಯಕ್ಟಿವೇಷನ್ ಹೇಗೆ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ಜಿಯೋ ಸಿಮ್ ಬೇಕಾದವರು ತಮ್ಮ ಮೊಬೈಲ್ ನಲ್ಲಿರೋ ಪ್ಲೇ ಸ್ಟೋರ್ ಗೆ ಹೋಗಿ, ‘ಮೈ ಜಿಯೋ ಆ್ಯಪ್’ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಆ್ಯಪ್ ತೆರೆದಾಗ ಮೇಲ್ಭಾಗದಲ್ಲಿ ಬರುವ ‘ಗೆಟ್ ಜಿಯೋ ಸಿಮ್’ ಎಂಬುದನ್ನು ಒತ್ತಬೇಕು. ನಂತರ ಕೆಲವು ಪ್ರಕ್ರಿಯೆಗಳು ತೆಗೆದುಕೊಳ್ಳುತ್ತವೆ. ಈ ಎಲ್ಲ ಪ್ರಕ್ರಿಯೆಗಳು ಮುಕ್ತಾಯವಾದ ನಂತರ ‘ನೆಕ್ಸ್ಟ್’ ಎಂದು ಕ್ಲಿಕ್ ಮಾಡಿ. ಆಗ ರಿಲಯನ್ಸ್ ನಿಂದ ನಿಮಗೆ ಒಂದು ಕೋಡ್ ನಂಬರ್ ಬಿತ್ತರಿಸಲಾಗುತ್ತದೆ. ಅದನ್ನು ನೀವು ಒಂದೆಡೆ ಬರೆದಿಟ್ಟುಕೊಳ್ಳಿ. ನಂತರ ಗ್ರಾಹಕರ ಗುರುತಿನ ದಾಖಲೆಗಳ (ಡಿಎಲ್, ಆಧಾರ್, ವೋಟರ್ ಐಡಿ, ಇತ್ಯಾದಿ ಸಂಖ್ಯೆಗಳು) ವಿವರ ಒದಗಿಸಬೇಕು. ನಂತರ ಗುರುತಿನ ದಾಖಲೆಯೊಂದಿಗೆ ರಿಲಯನ್ಸ್ ಸ್ಟೋರ್ ಗೆ ಹೋಗಿ ಅಲ್ಲಿ ಉಚಿತವಾಗಿ ಜಿಯೋ ಸಿಮ್ ಪಡೆಯಬಹುದು.

ಇವಿಷ್ಟು… ಜಿಯೋ ಸಿಮ್ ಪಡೆಯುವ ಪ್ರಕ್ರಿಯೆಯಾಯ್ತು. ಇನ್ನು ಪಡೆದ ಸಿಮ್ ಅನ್ನು ಆಕ್ಟಿವ್ ಮಾಡೋ ಪ್ರಕ್ರಿಯೆ ಹೀಗಿದೆ ನೋಡಿ…

ಸಿಮ್ ಅನ್ನು ಮೊಬೈಲ್ ಗೆ ಹಾಕಿದ ನಂತರ ಜಿಯೋ ನಿಂದ ದೂರವಾಣಿ ಮೂಲಕ ಖಚಿತಪಡಿಸಿಕೊಳ್ಳಲು ಸಂದೇಶ ಬರುವವರೆಗೂ ಕಾಯಬೇಕು. ನಂತರ ಈ ಸಿಮ್ ನಲ್ಲಿ ಧ್ವನಿ ಕರೆ ಮತ್ತು ಡಾಟಾ ಸೇವೆಯನ್ನು ಚಾಲ್ತಿಗೊಳಿಸುವುದಕ್ಕೆ ಗ್ರಾಹಕರು 1977 ಎಂಬ ಸಂಖ್ಯೆಗೆ ಕರೆ ಮಾಡಬೇಕು. ನಂತರ ತಾವು ನೀಡಿರುವ ದಾಖಲೆ ಖಚಿತ ಪಡಿಸಲು ನೀವು ನೀಡಿದ ಗುರುತಿನ ಚೀಟಿ ಸಂಖ್ಯೆಯ ಕಡೇಯ ನಾಲ್ಕು ಸಂಖೆಯನ್ನು ಹೇಳಬೇಕು. ನಿಮ್ಮ ದಾಖಲೆಗಳ ಪರಿಶೀಲನೆಯಾದ ನಂತರ 1-2 ತಾಸಿನಲ್ಲಿ ಸಿಮ್ ಕಾರ್ಯಾರಂಭ ಮಾಡುತ್ತದೆ. ಕೆಲವೊಮ್ಮೆ 4-5 ಗಂಟೆ ಕಾಲಾವಕಾಶವನ್ನೂ ಪಡೆಯುತ್ತದೆ. ನಂತರ ಡಾಟಾ ಪಡೆಯಲು 1800-890-1977 ಕ್ಕೆ ಕರೆ ಮಾಡಬೇಕು. ನಂತರ ಡಾಟಾ ಸೇವೆ ಆರಂಭವಾಗಲಿದ್ದು, ಆರಂಭದಲ್ಲಿ 2 ಜಿಬಿಯಷ್ಟು ಉಚಿತವಾಗಿ ಡಾಟಾ ಸಿಗುತ್ತದೆ.

2 COMMENTS

Leave a Reply