
ಡಿಜಿಟಲ್ ಕನ್ನಡ ಟೀಮ್:
ಬೀದಿಗಿಳಿಯದ ಬಸ್, ಆಟೋ, ಟ್ಯಾಕ್ಸಿ… ಸಂಪೂರ್ಣವಾಗಿ ಬಾಗಿಲು ಮುಚ್ಚಿರುವ ಅಂಗಡಿ ಮುಂಗಟ್ಟುಗಳು… ಇದು ಕಾವೇರಿ ನೀರಿಗಾಗಿ ಪ್ರತಿಭಟಿಸಿ ಕರೆಯಲಾಗಿದ್ದ ರಾಜ್ಯ ಬಂದ್ ಗೆ ಬೆಂಗಳೂರಿನಲ್ಲಿ ಸಿಕ್ಕ ಪ್ರತಿಕ್ರಿಯೆ. ಇದರ ಹೊರತಾಗಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ, ಮೆರವಣಿಗೆ, ಬೈಕ್ ರಾಲಿಗಳು ಸಾಮಾನ್ಯವಾಗಿದ್ದವು. ಹೀಗೆ ಬೆಂಗಳೂರಿನ ಪ್ರತಿಭಟನೆಯ ಹಲವು ಚಿತ್ರಣ ಈ ಚಿತ್ರಗಳಲ್ಲಿ ನೋಡಬಹುದು..
ತಮಿಳುನಾಡಿಗೆ ನೀರು ಬಿಟ್ಟಿರುವ ನಿರ್ಧಾರವನ್ನು ಖಂಡಿಸಿ ನಗರದ ಟೌನ್ ಹಾಲ್ ಬಳಿ ನಡೆದ ಪ್ರತಿಭಟನಾ ರಾಲಿ ಹೀಗಿತ್ತು…
ಕನ್ನಡ ಚಲನಚಿತ್ರರಂಗ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಖ್ಯಾತ ನಟರಾದ ಶಿವರಾಜ್ ಕುಮಾರ್, ಪುನಿತ್ ರಾಜ್ ಕುಮಾರ್, ದರ್ಶನ್…
ಬೆಂಗಳೂರಿನಲ್ಲಿ ಬಂದ್ ಬಿಸಿ ವ್ಯಾಪಕವಾಗಿ ಮುಟ್ಟಿರುವ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಹಾಗೂ ತುಮಕೂರು ರಸ್ತೆಗಳು ಬಿಕೋ ಎನ್ನುತ್ತಿರುವ ದೃಶ್ಯ…
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಎಪಿಎಂಸಿ ಸಂಪೂರ್ಣವಾಗಿ ಬಂದ್ ಆಗಿರುವ ಪರಿಸ್ಥಿತಿ…
ರಾಷ್ಟ್ರೀಯ ಚಾಲಕರ ಸಂಘ ಕಾವೇರಿ ನೀರಿಗಾಗಿ ಪ್ರತಿಭಟನೆನಡೆಸಿದ್ದು, ಖಾಲಿ ಮಣ್ಣಿನ ಮಡಿಕೆ ಹಾಗೂ ತಕ್ಕಡಿ ಹಿಡಿದು ಪ್ರತಿಭಟನೆ ನಡೆಸಿದ ರೀತಿ…
ಬೆಂಗಳೂರಿನ ವಿವಿ ಪುರಂ ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದು ಹೀಗೆ..